ಆಸ್ಪತ್ರೆಗೆ ಪ್ರವೇಶಿಸುವ ಮಂತ್ರವಾದಿ ಗಳಿಂದ ರೋಗಿಗಳಿಗೆ ಚಿಕಿತ್ಸೆ
ಸ್ಥಳೀಯರ ನಂಬಿಕೆಯಿಂದ ಆಸ್ಪತ್ರೆಯೀಗ ಮಂತ್ರವಾದಿಗಳ ಅಡ್ಡ
ಭೀತಿಯಿಂದ ತಡೆಯಲು ಮುಂದೆ ಬಾರದ ಆಸ್ಪತ್ರೆ ಆಡಳಿತ ಮಂಡಳಿ
Advertisement
ಪಟ್ನಾ: ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊಡಲಾಗುವ ಔಷಧಗಳು ಸಕಾಲಕ್ಕೆ ಸಿಗದಿದ್ದರೆ ಜನ ಗಲಾಟೆ ಮಾಡುವುದು ಸಹಜ. ಆದರೆ, ಬಿಹಾರದ ವೈಶಾಲಿ ಜಿಲ್ಲೆಯ ಮನ್ಹಾರ್ ಪ್ರಾಂತ್ಯದ ಲ್ಲೊಂದು ಸಮುದಾಯ ಆರೋಗ್ಯ ಕೇಂದ್ರ ವಿದ್ದು, ಅಲ್ಲಿ ವೈದ್ಯರ ಬದಲಿಗೆ ಮಂತ್ರವಾದಿ ಗಳೇ ರೋಗಿಗಳನ್ನು ವಾಸಿ ಮಾಡುತ್ತಾರೆ! ಜನ ರೋಗಿಗಳನ್ನು ಅಲ್ಲಿಗೆ ದಾಖಲು ಮಾಡಿಸುತ್ತಾರಷ್ಟೇ, ಮುಂದಿನದ್ದೆಲ್ಲ ಮಂತ್ರವಾದಿಗಳೇ ನೋಡಿಕೊಳ್ಳುತ್ತಾರೆ. ಹಾಗಾಗಿ, ಆ ಆಸ್ಪತ್ರೆಯ ಯಾವುದೇ ವಾರ್ಡಿಗೆ ಹೋದರೂ ಹಾಂ… ಹ್ರೀಂ… ಮಂತ್ರ ಅನುರಣಿಸುತ್ತದೆ.
ಈ ಆಸ್ಪತ್ರೆಯಲ್ಲಿ ವೈದ್ಯರಿದ್ದರೂ ಸ್ಥಳೀ ಯರೇ ಮಂತ್ರವಾದಿಗಳನ್ನು ಕರೆದುಕೊಂಡು ಬರುತ್ತಿರುವುದು ಸಹಜ ಎಂದು ಹೇಳಲಾ ಗುತ್ತಿದೆ. ಆದರೆ, ಇದನ್ನು ತಡೆಯಲು ಆಸ್ಪತ್ರೆ ಆಡಳಿತ ಮಂಡಳಿಯೂ ಹಿಂದೇಟು ಹಾಕುತ್ತಿದೆ. ಅಧಿಕಾರಿಗಳಿಗೆ ಮಂತ್ರವಾದಿಗಳ ಭಯ ಇರುವುದೇ ಕಾರಣ ಎನ್ನಲಾಗಿದೆ.