Advertisement
ಕೋಲಾರ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿಕೊರೊನಾ ಎರಡನೇ ಅಲೆ ಶುರುವಾಗುವ ಮುನ್ನಕೇವಲ ಹತ್ತಕ್ಕಿಂತಲೂ ಕಡಿಮೆ ಸಂಖ್ಯೆಯ ಆಮ್ಲಜನಕಬೆಡ್, ಐಸಿಯು ಬೆಡ್‌ಗಳಿದ್ದವು. ಆದರೆ, ಕೊರೊನಾಎರಡನೇ ಅಲೆ ಆರಂಭವಾದ ಕೆಲವೇ ದಿನಗಳಲ್ಲಿಜಿಲ್ಲಾಸ್ಪತ್ರೆಯ ಆಮ್ಲಜನಕ ಬೆಡ್‌ಗಳ ಸಂಖ್ಯೆಯನ್ನು200 ಕ್ಕೇರಿಸಲಾಗಿದೆ. ಹಾಗೆಯೇ ಜಿಲ್ಲೆಯಲ್ಲಿ ಐಸಿಯುಬೆಡ್‌ಗಳ ಸಂಖ್ಯೆ 50ಕ್ಕೇರಿಸಲಾಯಿತು. ಪ್ರತಿ ತಾಲೂಕುಸರ್ಕಾರಿ ಆಸ್ಪತ್ರೆಯಲ್ಲಿಯೂ ಕನಿಷ್ಠ 50 ಆಮ್ಲಜನಕಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.
Related Articles
Advertisement
ಕೇಸಿ ವ್ಯಾಲಿ 400ಎಲ್‌ಡಿಗೆ ಆದೇಶ: ಕೋಲಾರಜಿಲ್ಲೆಗೆ 400 ಎಂಎಲ್‌ಡಿ ಸಂಸ್ಕರಿತ ಕೊಳಚೆ ನೀರನ್ನುಕೆರೆಗಳಿಗೆ ಹರಿಸುವ ಕೆಸಿ ವ್ಯಾಲಿ ಯೋಜನೆಯಡಿಆರಂಭಿಕವಾಗಿ ಕೇವಲ 200 ಎಂ.ಎಲ್‌ಡಿ ನೀರುಮಾತ್ರವೇ ಹರಿಯುತ್ತಿದ್ದು. ಯಡಿಯೂರಪ್ಪ ಸರ್ಕಾರವು ಪೂರ್ಣ 400 ಎಂಎಲ್‌ಡಿ ನೀರು ಹರಿಸಲುಆದೇಶಿಸಿತು. ಸದ್ಯಕ್ಕೆ 270 ರಿಂದ 300ಎಂಎಲ್‌ಡಿನೀರು ಹರಿಯುತ್ತಿದ್ದು. ಪೂರ್ಣ ಪ್ರಮಾಣದ ನೀರುಹರಿಸಲು ಕ್ರಮವಹಿಸಲಾಗಿದೆ.ಸಚಿವರ ಭರವಸೆ: ಜೊತೆಗೆ ಸಣ್ಣ ನೀರಾವರಿ ಸಚಿವಯೋಗೇಶ್ವರ್ ಕೋಲಾರ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ತ್ಯಾಜ್ಯ ನೀರನ್ನು ಮೂರು ಬಾರಿಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆಹರಿಸುವುದು ಸರ್ಕಾರಕ್ಕೇನು ಹೊರೆಯಾಗುವುದಿಲ್ಲ,ಶೀಘ್ರ ಕ್ರಮವಹಿಸಲಾಗುವುದು ಎಂದು ಹೇಳಿಕೆನೀಡಿರುವುದು ಸ್ವಾಗತಾರ್ಹವಾಗಿದೆ.ಕೈಗಾರಿಕಾ ಪ್ರದೇಶ ಹೆಚ್ಚಳ: ನರಸಾಪುರ, ವೇಮಗಲ್,ಕೆಜಿಎಫ್, ಮುಳಬಾಗಿಲುಗಳಲ್ಲಿ ಕೈಗಾರಿಕೆಗಳಅಭಿವೃದ್ಧಿಗೆ 1397 ಎಕರೆ ಹೆಚ್ಚುವರಿ ಜಮೀನುಗುರುತಿಸಲಾಗಿದೆ.
ಕೆಜಿಎಫ್‌ನಲ್ಲಿ ಬಿಇಎಂಎಲ್‌ನ 971ಎಕರೆ ಜಮೀನಿನ ಲೀಸ್ ಮುಗಿದಿದ್ದು, ಅಲ್ಲಿಯೂ ಎಸ್‌ಇಝಡ್ ನಡಿ ಕೈಗಾರಿಕೆ ಆರಂಭಿಸಲು ಸಿದ್ಧತೆನಡೆಸಲಾಗಿದೆ. ಹಾಲಿ ನಡೆಯುತ್ತಿರುವ ಕೈಗಾರಿಕೆಗಳನ್ನುಕೋವಿಡ್ ಮಾರ್ಗಸೂಚಿ ಪ್ರಕಾರ ನಡೆಸಲು ಅವಕಾಶಕಲ್ಪಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಾಗಿದೆ.
ಪ್ಯಾಕೇಜ್ ಸೌಲಭ್ಯ: ಈ 2 ವರ್ಷಗಳಲ್ಲಿ ಜಿಲ್ಲೆ ಉತ್ತಮಮಳೆ ಕಾಣುತ್ತಿದ್ದು, ನದಿ ನಾಲೆಗಳಿಲ್ಲದ ಕಾರಣದಿಂದನೆರೆ ಭೀತಿ ಇಲ್ಲವಾಗಿದೆ. ಆದರೂ, ಜಿಲ್ಲೆಯ ಜನಉತ್ತಮ ಮಳೆ ಕಾರಣದಿಂದ ರಾಗಿ ಫಸಲನ್ನು ಉತ್ತಮವಾಗಿ ಪಡೆದುಕೊಂಡರು. ಕೊರೊನಾ ಮೊದಲ ಮತ್ತುಎರಡನೇ ಅಲೆಯಲ್ಲಿ ಸರ್ಕಾರ ಘೋಷಿಸಿದ ಪ್ಯಾಕೇಜ್‌ಗಳ ಪ್ರಕಾರ ಸಾವಿರಾರು ಮಂದಿ ಫಲಾನುಭವಿಗಳುಕೋಲಾರ ಜಿಲ್ಲೆಯಿಂದಲೂ ಕಟ್ಟಡ ಕಾರ್ಮಿಕರು,ಆಟೋ ಚಾಲಕರು, ರೈತರ ಬೆಳೆ ಹಾನಿ ಇತ್ಯಾದಿಯಪರಿಹಾರ ಪ್ರಯೋಜನ ಪಡೆದುಕೊಂಡರು.
ಕೆ.ಎಸ್.ಗಣೇಶ್