02 ಕೋ.ರೂ. ವೆಚ್ಚದ ಹವಾ ನಿಯಂತ್ರಿತ ಸ. ಜಿಮ್
Advertisement
ಉಡುಪಿ: ಸರಕಾರಿ ಸೇವೆಗಳೆಂದರೆ ಋಣಾತ್ಮಕ ಭಾವನೆ ಮೂಡುವ ಈ ಕಾಲಘಟ್ಟದಲ್ಲಿ ನಗರದಲ್ಲಿರುವ ಸುಸಜ್ಜಿತ ಹವಾನಿಯಂತ್ರಿತ ಸರಕಾರಿ ಜಿಮ್‌ನಲ್ಲಿ ದೇಹ ದಂಡಿಸಲು ಜನರು ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಸುಮಾರು 3 ಸಾವಿರ ಚ.ಅಡಿ ವಿಸ್ತೀರ್ಣದ ಕಟ್ಟಡದಲ್ಲಿ 2.ಕೋ.ರೂ. ವೆಚ್ಚದಲ್ಲಿ ಜಿಮ್ ನಿರ್ಮಿಸಲಾಗಿದೆ. ಸುಮಾರು 1.50 ಕೋ.ರೂ. ವೆಚ್ಚದ ಉಪಕರಣಗಳನ್ನು ಅಳವಡಿಸಲಾಗಿದೆ. 50 ಲ.ರೂ. ವೆಚ್ಚದಲ್ಲಿ ಎಸಿ, ಫ್ಲೋರಿಂಗ್, ಗ್ಲಾಸ್ ವರ್ಕ್, ಸ್ನಾನಗೃಹ, ಲೈಟಿಂಗ್, ಇಂಟೀರಿಯರ್ ಕೆಲಸಗಳಿಗೆ ವ್ಯಯಿಸಲಾಗಿದೆ.
Related Articles
ಪ್ರಸ್ತುತ ಜಿಮ್‌ನಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. ಇದು ಮಲ್ಟಿ ಜಿಮ್ ಆಗಿರುವುದರಿಂದ 10ರಿಂದ 15 ಹೆಣ್ಮಕ್ಕಳು ಜಿಮ್ ಸದಸ್ಯತ್ವ ಹೊಂದಿದ್ದಾರೆ. ತರಬೇತಿ ಅವಧಿಯಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲ. ಬೆಳಗ್ಗೆ 5ರಿಂದ 9ರ ತನಕ, ಸಂಜೆ 4ರಿಂದ 8ರ ವರೆಗೆ ಜಿಮ್‌ನಲ್ಲಿ ವ್ಯಾಯಾಮ ಮಾಡಬಹುದು. ಜಿಮ್‌ನಲ್ಲಿ ಸದಸ್ಯರಿಗೆ ಮಾಸಿಕ 1 ಸಾವಿರ ರೂ. ಶುಲ್ಕ ವಿಧಿಸಲಾಗಿದೆ. ಜಿಮ್ ಸೂಟ್ ಹಾಗೂ ಶೂ ಧರಿಸುವುದು ಕಡ್ಡಾಯವಾಗಿದೆ.
Advertisement
ಪೂರ್ಣಕಾಲಿಕ ತರಬೇತುದಾರದೇಹ ದಂಡನೆಗೆ ಬೇಕಾಗುವ ಉಪಕರಣಗಳಿವೆ. ಉದ್ಯೋಗಕ್ಕೆ ತೆರಳುವವರು ಬೆಳಗ್ಗೆ, ರಾತ್ರಿ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಜೆ ಹೊತ್ತಿನಲ್ಲಿ ಬರುವೆ. ವ್ಯಾಯಾಮಗಳ ಕುರಿತು ಸಲಹೆ ನೀಡುವ ಪೂರ್ಣಕಾಲಿಕ ತರಬೇತುದಾರರು ಇದ್ದಾರೆ. ಪ್ರತಿ ತಿಂಗಳು ಜಿಮ್ ನಿರ್ವಹಣೆಗೆ ಸುಮಾರು 70 ಸಾವಿರ ರೂ. ವ್ಯಯಿಸಲಾಗುತ್ತದೆ. ತರಬೇತುದಾರರ ವಿಶೇಷತೆ
ತರಬೇತುದಾರ ಉಮೇಶ್ ಮಟ್ಟು ಅವರು ಈಗಾಗಲೇ ದೇಹದಾಡ್ಯì ಸ್ಪರ್ಧೆಯಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಪದಕ ಪಡೆದುಕೊಂಡಿದ್ದಾರೆ. ಪಾರ್ಶ್ವವಾಯು ಪೀಡಿತರನ್ನು ವ್ಯಾಯಾಮದ ಮೂಲಕ ಗುಣಪಡಿಸಿದ ಅನುಭವ ಅವರಿಗಿದೆ. ಈ ಕುರಿತು ವೈದ್ಯರು ಅವರಿಗೆ ಪ್ರಮಾಣ ಪತ್ರವನ್ನೂ ನೀಡಿ ಗೌರವಿಸಿದ್ದಾರೆ. ದೇಹದ ಹೆಚ್ಚುವರಿ ತೂಕ ಇಳಿಸಲು ಅಗತ್ಯವಿರುವ ವ್ಯಾಯಾಮವನ್ನು ಅವರು ಬಹಳ ಕಟ್ಟುನಿಟ್ಟಾಗಿ ಹೇಳಿಕೊಡುತ್ತಾರೆ. 16ಕ್ಕೂ ಹೆಚ್ಚಿನ ವ್ಯಾಯಾಮ ಸಲಕರಣೆ
ಸರಕಾರಿ ಜಿಮ್ ಆದರೂ ಇಲ್ಲಿ ಸಿಗುವ ಸೌಲಭ್ಯಗಳು ಮಾತ್ರ ಖಾಸಗಿ ಜಿಮ್‌ಗಳಿಗೆ ಸ್ಪರ್ಧೆ ನೀಡುತ್ತಿವೆ. ಆಯ್ದ ಜಿಮ್ ಪರಿಕರಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ. ಕ್ರಾಸ್ ಟ್ರೈನರ್ 3, ಡಿಜಿಟಲ್ ಜಾಗರ್ಸ್ 4 ಸೇರಿದಂತೆ 16ಕ್ಕೂ ಹೆಚ್ಚಿನ ವಿವಿಧ ವ್ಯಾಯಾಮ ಮಾಡುವ ಸಲಕರಣೆಗಳಿವೆ. ದಿನದಿಂದ ದಿನಕ್ಕೆ ಸಂಖ್ಯೆ ಅಧಿಕ
ರಾಜ್ಯದ ಅತ್ಯುತ್ತಮ ಜಿಮ್‌ಗಳಲ್ಲಿ ಅಜ್ಜರಕಾಡು ಹವಾನಿಯಂತ್ರಿತ ಜಿಮ್ ಸಹ ಒಂದು. ಮಾಸಿಕ ವಿದ್ಯುತ್ ಬಿಲ್, ತರಬೇತುದಾರರ ವೇತನ, ವೆಚ್ಚಗಳನ್ನು ಕಳೆದ ಬಳಿಕ ಮಾಸಿಕ ಸುಮಾರು 10 ಸಾವಿರ ರೂ. ಉಳಿತಾಯವಾಗುತ್ತಿದೆ. ಹೊಸ ಜಿಮ್ ಪ್ರಾರಂಭವಾದ ಅನಂತರ ಜಿಮ್‌ಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ.
-ಡಾ| ರೋಶನ್ ಕುಮಾರ್, ಸಹಾಯಕ ನಿರ್ದೇಶಕ, ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ. ಉತ್ತಮ ಫಲಿತಾಂಶ
ಹವಾನಿಯಂತ್ರಿತ ಜಿಮ್‌ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅವರ ಅಗತ್ಯಕ್ಕೆ ತಕ್ಕಂತೆ ತರಬೇತಿ ನೀಡಲಾಗುತ್ತಿದೆ. ಜಿಮ್‌ನಲ್ಲಿ ಕಡ್ಡಾಯವಾಗಿ ದೇಹ ದಂಡಿಸುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದಾಗಿ ಜಿಮ್‌ಗೆ ಬರುವವರಿಗೆ ಉತ್ತಮ ಫಲಿತಾಂಶ ದೊರಕುತ್ತದೆ.
-ಉಮೇಶ್ ಮಟ್ಟು, ಜಿಮ್ ತರಬೇತುದಾರ. ಕಡಿಮೆ ದರ-ಉತ್ತಮ ಸೇವೆ
ಕಳೆದ 8 ತಿಂಗಳಿನಿಂದ ಈ ಜಿಮ್‌ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಸರಕಾರಿ ಜಿಮ್ ಎಂದರೆ ದೂರ ಉಳಿಯುವವರು ಒಮ್ಮೆ ಈ ಜಿಮ್‌ಗೆ ಭೇಟಿ ನೀಡಬೇಕು. ಕಡಿಮೆ ದರದಲ್ಲಿ ಉತ್ತಮ ಸೇವೆ ಸಿಗುತ್ತಿದೆ.
-ಚಿತ್ರಾಲಿ, ಜಿಮ್ ಸದಸ್ಯೆ. ತೃಪ್ತಿ ಕುಮ್ರಗೋಡು