Advertisement
ಸರಕಾರಿ ಕಾಲೇಜುಗಳ ಕ್ರೀಡಾನಿಧಿಯಲ್ಲಿರುವ ಮೊತ್ತವು ವಿ.ವಿ. ಮಟ್ಟದ ಅಂತರ್ ಕಾಲೇಜು ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡಲು ಸಾಲದು. ಹೀಗಾಗಿ ಪ್ರತಿಭೆ ಇದ್ದರೂ ಪ್ರೋತ್ಸಾಹವಿಲ್ಲದ ಸ್ಥಿತಿ.
ಪದವಿ ಪ್ರವೇಶ ಪಡೆಯುವ ಪ್ರತೀ ವಿದ್ಯಾರ್ಥಿ ಪಾವತಿಸುವ ಶುಲ್ಕದಲ್ಲಿ 60 ರೂ. ಕಾಲೇಜಿನ ಕ್ರೀಡಾನಿಧಿಗೆ ಜಮೆ ಆಗುತ್ತದೆ. ಹೀಗೆ ಒಟ್ಟುಗೂಡಿದ ಮೊತ್ತ ಪ್ರತೀ ಕಾಲೇಜಿನಲ್ಲಿ 15ರಿಂದ 20 ಸಾವಿರ ರೂ. ಆಗಬಹುದು. ವಿ.ವಿ. ಮಟ್ಟದಲ್ಲಿ ವಾರ್ಷಿಕ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವೆಚ್ಚ, ಕ್ರೀಡಾ ಉಡುಗೆ, ಆಹಾರ ಒದಗಿಸುವುದಕ್ಕೆ ಇಷ್ಟು ಮೊತ್ತ ಸಾಲುವುದಿಲ್ಲ. ಕೆಲವೊಮ್ಮೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನಡೆಸಲು ಕೂಡ ಇದೇ ನಿಧಿಯನ್ನು ಬಳಸಬೇಕಿದೆ. ಕೈಯಿಂದ ಖರ್ಚು
ಮಂಗಳೂರು ವಿ.ವಿ. ವಿದ್ಯಾರ್ಥಿಗಳಿಗೆ ವರ್ಷದಲ್ಲಿ 48 ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಉಡುಪಿ, ದ.ಕ. ಮಾತ್ರವಲ್ಲದೆ ಕೊಡಗು ಜಿಲ್ಲೆಯೂ ವಿವಿ ವ್ಯಾಪ್ತಿಯಲ್ಲಿದೆ. ನಾನಾ ದಿಕ್ಕಿನಲ್ಲಿ ಆಯೋಜನೆ ಗೊಳ್ಳುವ ಸ್ಪರ್ಧೆಗಳಿಗೆ ಕರೆದೊಯ್ಯುವ ಜವಾಬ್ದಾರಿ ಆಯಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವಿಭಾಗಕ್ಕಿದೆ. ಗೇಮ್ಸ್ ಸ್ಪರ್ಧೆಗಳು 2, ನ್ಪೋರ್ಟ್ಸ್ ವಿಭಾಗದಲ್ಲಿ 3 ದಿನ ಈ ಕ್ರೀಡಾಕೂಟಗಳು ನಡೆಯುತ್ತವೆ.
Related Articles
Advertisement
ಬೆರಳೆಣಿಕೆಯ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರು, ಇತರ ಉಪನ್ಯಾಸಕರು ಸ್ವತಃ ಹಣ ಭರಿಸಿ ವಿದ್ಯಾರ್ಥಿಗಳನ್ನು ಕಳುಹಿಸುತ್ತಾರೆ. ಬಹುತೇಕ ಕಡೆ ಕ್ರೀಡಾಪ್ರತಿಭೆಗಳಿಗೆ ನಿರಾಸೆಯೇ ಗತಿ.
ವಿ.ವಿ.ಗೆ 260 ರೂ.ಪ್ರತೀ ವಿದ್ಯಾರ್ಥಿಯ ಪ್ರವೇಶ ಶುಲ್ಕದಲ್ಲಿ 260 ರೂ. ವಿ.ವಿ.ಗೆ ಪಾವತಿಯಾಗುತ್ತದೆ. ಅಂತರ್ ವಿ.ವಿ.
ಕ್ರೀಡಾಕೂಟಕ್ಕೆ ತೆರಳಲು ಹಾಗೂ ಕಾಲೇಜುಗಳಲ್ಲಿ ಅಂತರ್ ಕಾಲೇಜು ಕ್ರೀಡಾಕೂಟ ಏರ್ಪಡಿಸುವ ಸಂದರ್ಭ ವಿ.ವಿ.ಯಿಂದ ಒಂದಷ್ಟು ಆರ್ಥಿಕ ಸಹಕಾರ ದೊರೆಯುತ್ತದೆ. ಹೀಗಾಗಿ ಶುಲ್ಕದಲ್ಲಿ ವಿ.ವಿ.ಗೆ ಪಾವತಿಸುವ ಮೊತ್ತಕ್ಕಿಂತ ಹೆಚ್ಚಿನ ಭಾಗವನ್ನು ಕಾಲೇಜಿನ ಕ್ರೀಡಾನಿಧಿಗೆ ಬಳಸಿಕೊಂಡಲ್ಲಿ ಅನುಕೂಲ ಅನ್ನುತ್ತಾರೆ ಕ್ರೀಡಾಪಟುಗಳು. ಪ್ರೋತ್ಸಾಹದ ಕೊರತೆ
ಸರಕಾರಿ ಕಾಲೇಜಿಗಳ ಪೈಕಿ ಬೆರಳೆಣಿಕೆಯವು ಮಾತ್ರ ಅರ್ಧಕ್ಕಿಂತ ಹೆಚ್ಚು ಸ್ಪರ್ಧೆಗಳಿಗೆ ತಂಡ ಕಳುಹಿ
ಸುತ್ತವೆ. ಆರ್ಥಿಕವಾಗಿ ಸದೃಢವಾಗಿರುವ ಕೆಲವು ಖಾಸಗಿ ಕಾಲೇಜುಗಳು ಮಾತ್ರ ಎಲ್ಲ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತವೆ. ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ 211 ಸರಕಾರಿ ಪದವಿ ಕಾಲೇಜುಗಳಿದ್ದು, ಅಂತರ್
ಕಾಲೇಜು ಕ್ರೀಡಾಕೂಟದಲ್ಲಿ 20ರಿಂದ 40 ಕಾಲೇಜುಗಳ ಸ್ಪರ್ಧಿಗಳು ಮಾತ್ರ ಭಾಗವಹಿಸುತ್ತಾರೆ. ಬಹುತೇಕ ಕಾಲೇಜುಗಳಲ್ಲಿ ಕ್ರೀಡಾ ಮೂಲ ಸೌಕರ್ಯಗಳ ಕೊರತೆಯಿದೆ. ದೇಹ ದಂಡನೆಗೆ ತಕ್ಕಂತೆ ಸಮರ್ಪಕ ಆಹಾರ ಪೂರೈಸುವಷ್ಟು ಆರ್ಥಿಕ ಸಾಮರ್ಥ್ಯ ಲ್ಲ. ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗಳು ಖಾಲಿ ಇವೆ. ಇರುವ ವ್ಯವಸ್ಥೆಯಲ್ಲಿ ಅಭ್ಯಾಸ ಮಾಡುವವರಿಗೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆರ್ಥಿಕ ಸಹಕಾರ ಇಲ್ಲ. ಕ್ರೀಡಾನಿಧಿ ಹೆಚ್ಚಳಕ್ಕೆ ಪ್ರಸ್ತಾವ
ವಿ.ವಿ. ಮಟ್ಟದಲ್ಲಿ ಕ್ರೀಡೆಗೆ ಸಂಬಂಧಿಸಿ ವಾರ್ಷಿಕ 48 ಸ್ಪರ್ಧೆಗಳಿವೆ. ಆದರೆ ಎಲ್ಲ ಕ್ರೀಡಾಕೂಟಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವಷ್ಟು ಆರ್ಥಿಕ ಸಾಮರ್ಥ್ಯ ಕಾಲೇಜುಗಳಲ್ಲಿಲ್ಲ ಅನ್ನುವುದು ಗಮನಕ್ಕೆ ಬಂದಿದೆ. ಹೀಗಾಗಿ ಪ್ರವೇಶ ಶುಲ್ಕದಿಂದ ಕ್ರೀಡಾನಿಧಿಗೆ ಪಾವತಿ ಮೊತ್ತ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಸ್ಪಂದನೆ ಸಿಗಲಿದೆ.
- ಡಾ| ಕಿಶೋರ್ ಕುಮಾರ್ ಸಿ.ಕೆ., ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ, ಮಂಗಳೂರು ವಿ.ವಿ. – ಕಿರಣ್ ಪ್ರಸಾದ್ ಕುಂಡಡ್ಕ