ಹಾಸನ: ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆಯಾಗುತ್ತಿದೆ. ರೆಮ್‌ಡೆಸಿವಿಯರ್ ಚುಚ್ಚುಮದ್ದು, ಕೊವ್ಯಾಕ್ಸಿನ್‌ಲಸಿಕೆ ಪೂರೈಕೆಯಾಗುತ್ತಿಲ್ಲ. ಸಮಸ್ಯೆಯನ್ನು ಸರ್ಕಾರಗಂಭೀರವಾಗಿ ಪರಿಗಣಿಸದೆ ಜನರ ಜೀವದ ಜತೆಚೆಲ್ಲಾಟವಾಡುತ್ತಿದೆ ಎಂದು ಜೆಡಿಎಸ್ ಮುಖಂಡ,ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯ ಜನರ ಜೀವದ ಜತೆ ಚೆಲ್ಲಾಟವಾಡದೆಸಮರ್ಪಕ ಚಿಕಿತ್ಸಾ ವ್ಯವಸ್ಥೆ ಮಾಡಬೇಕು. ಚಿಕಿತ್ಸೆ ಸಿಗದೆಜನ ಮೃತಪಟ್ಟರೆ ಜಿಲ್ಲಾಡಳಿತ ಮತ್ತು ಸರ್ಕಾರವೇಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚುಚ್ಚುಮದ್ದು ಪೂರೈಕೆ ಇಲ್ಲ: ದಿನದಿಂದ ದಿನಕ್ಕೆಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸಕ್ರಿಯ ಪ್ರಕರಣಗಳಸಂಖ್ಯೆ ಈಗಾಗಲೇ 11 ಸಾವಿರ ದಾಟಿದೆ. ಸೋಂಕಿತರಿಗೆಮೀಸಲಿರಿಸಿರುವ 2100 ಹಾಸಿಗೆ ಭರ್ತಿಯಾಗಿದೆ.ಅಗತ್ಯದಷ್ಟು ರೆಮ್‌ಡೆಸಿವಿಯರ್ ಚುಚ್ಚುಮದ್ದುಪೂರೈಕೆಯಾಗುತ್ತಿಲ್ಲ. ಹಾಸನದ ಸ್ಪರ್ಶ್ ಆಸ್ಪತ್ರೆಯಲ್ಲಿರೆಮ್‌ಡೆಸಿವಿಯರ್ ಚುಚ್ಚುಮದ್ದಿಗೆ 18 ಸಾವಿರಪಡೆಯಲಾಗುತ್ತಿದೆ. ಮಾಜಿ ಪ್ರಧಾನಿಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿಮಾಡಿದರೂ ಚುಚ್ಚುಮದ್ದು ಪೂರೈಕೆಯಾಗುತ್ತಿಲ್ಲಎಂದು ಬೇಸರ ವ್ಯಕ್ತಪಡಿಸಿದರು.
ದುಪ್ಪಟ್ಟು ಹಣ ನೀಡಿ ಖರೀದಿ: ಆಮ್ಲಜನಕಕೊರತೆಯೂ ಉಂಟಾಗುತ್ತಿದೆ. ಚಾಮರಾಜನಗರಮತ್ತು ಕಲಬುರಗಿಯಲ್ಲಿ ನಡೆದ ದುರಂತ ಹಾಸನದಲ್ಲಿಮರಕಳಿಸದಂತೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು.ಪ್ರತಿದಿನ ಖಾಸಗಿ ಆಸ್ಪತ್ರೆಗಳಿಗೆ 400 ರಿಂದ 500ಆಮ್ಲಜನಕ ಸಿಲಿಂಡರ್ ಅಗತ್ಯವಿದೆ. ಆದರೆ ಪ್ರಸ್ತುತ418 ಸಿಲಿಂಡರ್ ಮಾತ್ರ ಲಭ್ಯ ಇದೆ. ಇರುವುದರಲ್ಲಿಯೇಹೊಂದಾಣಿಕೆ ಮಾಡಲಾಗುತ್ತಿದೆ. ರೋಗಿಗಳುಸಂಬಂಧಿಕರು ಕಾಳಸಂತೆಯಲ್ಲಿ ದುಪ್ಪಟ್ಟು ಹಣ ನೀಡಿಆಮ್ಲಜನಕ ಸಿಲಿಂಡರ್ ತರುತ್ತಿದ್ದಾರೆ ಎಂದರು.
ನೆರವಿಗೆ ಮುಂದಾಗಿ: ಲಾಕ್‌ಡೌನ್‌ನಿಂದಾಗಿ ಬೀದಿವ್ಯಾಪಾರಿಗಳು, ಕಾರ್ಮಿಕರು ಬೀದಿಗೆ ಬಂದಿದ್ದಾರೆ.ಅಕ್ಕಿ, ಗೋಧಿ, 2 ಸಾವಿರ ರೂ. ಸಹಾಯಧನ ನೀಡುವಮೂಲಕ ಸರ್ಕಾರ ಅವರ ನೆರವಿಗೆ ಮುಂದಾಗಬೇಕುಎಂದು ಒತ್ತಾಯಿಸಿದರು.ಕೊರೊನಾ ಸಂಕಷ್ಟದ ಸಮಯದಲ್ಲೂ ಬ್ಯಾಂಕ್‌ಅಧಿಕಾರಿಗಳು ರೈತರಿಗೆ ಹಿಂಸೆ ನೀಡುತ್ತಿದ್ದಾರೆ.
ಹರದೂರು ನಾರಾಯಣ ಎಂಬವರು ಗೊರೂರುಕಾರ್ಪೊàರೇಷನ್ ಬ್ಯಾಂಕ್‌ನಲ್ಲಿ ಟ್ರಾಕ್ಟರ್ ಸಾಲ 4.50ಲಕ್ಷ ರೂ.ಪಡೆದಿದ್ದರು. ಆದರೆ, ಬಡ್ಡಿ ಸೇರಿ16.50 ಲಕ್ಷ ರೂ.ನೀಡುವಂತೆ ಅಧಿಕಾರಿಗಳುಪೀಡಿಸುತ್ತಿದ್ದಾರೆ. ಅವರು ಡಿ.ಸಿ ಕಚೇರಿ ಆತ್ಮಹತ್ಯೆಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅನಾಹುತಸಂಭವಿಸಿದರೆ ಬ್ಯಾಂಕ್ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಬೇಕಾಗುತ್ತದೆ ಎಂದರು.