ಗುಬ್ಬಿ: ಎರಡು ಲಕ್ಷ ಕೋಟಿ ರೂ.ಗಳನ್ನುಮೀಸಲಿಟ್ಟಿರುವುದಾಗಿ ಹೇಳಿಕೊಂಡ ಕೇಂದ್ರಸರ್ಕಾರ ಕೋವಿಡ್ ಎರಡನೇ ಅಲೆಯನ್ನುಸಮುದಾಯಕ್ಕೆ ತಂದು ಆಸ್ಪತ್ರೆಯಲ್ಲಿ ಹಾಸಿಗೆಇಲ್ಲದೆ ಆಕ್ಸಿಜನ್ ಕೊರತೆಯಿಂದ ನರಳಾಡಿಸಿ ಜನರಜೀವದ ಜೊತೆ ಆಟವಾಡಿದೆ.
ಈ ಸಂಕಷ್ಟಕ್ಕೆ ಕೇಂದ್ರ,ರಾಜ್ಯ ಸರ್ಕಾರಗಳೇ ನೇರ ಹೊಣೆ ಎಂದು ಕೆಪಿಸಿಸಿವಕ್ತಾರ ಮುರುಳೀಧರ ಹಾಲಪ್ಪ ಆರೋಪಿಸಿದರು.ಪಟ್ಟಣದ ತಾಲೂಕು ಬಳಿಯ ಅಶ್ವತ್ಥಕಟ್ಟೆಯಲ್ಲಿಕಾಂಗ್ರೆಸ್ ಘಟಕ ಆಯೋಜಿಸಿದ್ದ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದಅವರು, 1,400 ಕೋಟಿ ಆಪತ್ತಿನ ನಿಧಿ ಎನ್ನುವಕೇಂದ್ರ ಸರ್ಕಾರ ಇವರೆಗೂ ರಾಜ್ಯಕ್ಕೆ ಕಿಂಚಿತ್ತೂಕಾಳಜಿ ವಹಿಸಿಲ್ಲ. ಕಳೆದ ವರ್ಷ ಜೀವ ಪಣಕಿಟ್ಟವಾರಿಯರ್ಸ್‌ಗಳಿಗೂ ಹಣ ನೀಡಿಲ್ಲ.
ಆಪತ್ತಿನ ನಿಧಿಏನಾಯಿತು ಎಂಬ ಲೆಕ್ಕ ಕೇಳುವಂತಿಲ್ಲ ಎಂದುಕಿಡಿಕಾರಿದರು.ಬೇರೆ ದೇಶಗಳಲ್ಲಿ ಮೂರನೇ ಅಲೆಆರಂಭವಾಗಿದೆ. ನಮ್ಮಲ್ಲಿ ಎರಡನೇ ಅಲೆಗ್ರಾಮೀಣ ಭಾಗಕ್ಕೆ ಹರಡುವ ಮುನ್ನ ಅಗತ್ಯ ಕ್ರಮಕೈಗೊಳ್ಳಬೇಕಾದ ಸರ್ಕಾರ ಉಪಚುನಾವಣೆಯನ್ನುಮುಂದಿಟ್ಟುಕೊಂಡು ಜನರ ಬಗ್ಗೆ ಕಾಳಜಿವಹಿಸಲಿಲ್ಲ. ಇದರ ಫಲ ಈಗ ಇಡೀ ರಾಜ್ಯಕ್ಕೆಮಾರಕವಾದ ವೈರಸ್ ಸಣ್ಣ ಹಳ್ಳಿಗಳಿಗೂ ಜೀವ ಬಲಿಪಡೆಯುತ್ತಿದೆ.
ಮುನ್ನೇಚ್ಚರಿಕೆ ಕ್ರಮವಹಿಸಲುಮೀನಮೇಷ ಎಣಿಸುವ ಸರ್ಕಾರ ಸಭೆಗಳನ್ನುಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದುದೂರಿದರು. ಆಕ್ಸಿಜನ್ ಕೊರತೆ ನೀಗಿಸಲುಕ್ರಮವಹಿಸದ ಸರ್ಕಾರ ಆಸ್ಪತ್ರೆಗಳಲ್ಲಿ ಅಗತ್ಯಸವಲತ್ತು ಒದಗಿಸಲ್ಲ. ಈ ಜತೆಗೆ ಮೃತಪಟ್ಟವರ ಶವಸಂಸ್ಕಾರಕ್ಕೂ ದಿನಗಳ ಕಾಲ ಅಲೆಯುವ ದುಸ್ಥಿತಿತಂದಿದೆ. ಈ ಮಟ್ಟಕ್ಕೆ ಸಮುದಾಯ ಹರಡುವಿಕೆಗೆಆಸ್ಪದ ನೀಡಬಾರದಿತ್ತು.
ಗ್ರಾಮೀಣ ಭಾಗದಲ್ಲಿಕಳೆದ ವರ್ಷ ಅನುಭವವನ್ನೇ ಮುಂದಿಟ್ಟುಕೊಂಡುಯಾವ ಹಾನಿ ಇಲ್ಲ ಎನ್ನುವಂತಿದ್ದಾರೆ. ಆದರೆ,ರೂಪಾಂತರ ವೈರಸ್ ವಿವಿಧ ರೀತಿಯಲ್ಲಿ ಎಲ್ಲವಯಸ್ಸಿನವರನ್ನು ಬಲಿ ಪಡೆದಿದೆ ಎಂದರು.ಮುಖಂಡ ಜಯಣ್ಣ, ಮಹಮದ್ ,ರಂಗನಾಥ್, ಸೌಭಾಗ್ಯಮ್ಮ, ಮಂಜುನಾಥ್ ಹಾಗೂಇನ್ನಿತರರು ಇದ್ದರು.