ಮದ್ದೂರು: ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತದೆಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದ ತಜ್ಞರು,ವೈದ್ಯಕೀಯ ದಿಗ್ಗಜರು ಸೂಚನೆ ನೀಡಿದ್ದರೂ ಬಿಜೆಪಿಸರ್ಕಾರ ಸೂಕ್ತ ಕ್ರಮಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಆರೋಪಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಜ್ಞರ ಹಾಗೂ ವೈದ್ಯರಸಲಹೆ ಗಣನೆಗೆ ತೆಗೆದುಕೊಳ್ಳದ ಪರಿಣಾಮವಾಗಿ ಕೊರೊನಾ ವೈರಸ್ 2ನೇ ಅಲೆತೀವ್ರಗತಿಯಲ್ಲಿ ಹರಡುವ ಮೂಲಕ ಅತಿಹೆಚ್ಚು ಸಾವು-ನೋವು ಸಂಭವಿಸಲು ಕಾರಣವಾಗಿದೆ ಎಂದು ದೂರಿದರು.
ನಿರ್ಲಕ್ಷ್ಯ: ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಜನ ರೋಗಕ್ಕೆ ತುತ್ತಾಗುತ್ತಿರುವುದುನೋವಿನ ಸಂಗತಿ. ರಾಷ್ಟ್ರ ಮತ್ತು ರಾಜ್ಯಕ್ಕೆ ಕೊರೊನಾಬಂದು 15 ತಿಂಗಳು ಕಳೆದಿದ್ದರೂ ನಿಯಂತ್ರಣಕ್ಕೆಸರ್ಕಾರ ಯಾವುದೇ ಕ್ರಮ ವಹಿಸದೆ ನಿರ್ಲಕ ಧೋರಣೆ ಅನುಸರಿಸಿದ ಪರಿಣಾಮ ಹೆಚ್ಚು ಸಾವುಸಂಭವಿಸಲು ಕಾರಣವಾಗಿದೆ ಎಂದರು.ಮೊದಲನೇ ಅಲೆಯಲ್ಲಿ ಗ್ರಾಮೀಣರು ತಮ್ಮಗ್ರಾಮಗಳಲ್ಲಿ ಕೊರೊನಾ ಹರಡದಂತೆ ಹಲವುಮುನ್ನೆಚ್ಚರಿಕೆ ಕ್ರಮ ಅನುಸರಿಸಿದ್ದ ಪರಿಣಾಮ ಸಾಕಷ್ಟುಸಾವು-ನೋವು ಸಂಭವಿಸಿದೆ ಎಂದರು.
ನಿಯಮ ಪಾಲಿಸಿ: ಸರ್ಕಾರದ ಮಾರ್ಗಸೂಚಿ ಗಳನ್ನು ಅನುಸರಿಸದ ಪರಿಣಾಮನಗರ, ಪಟ್ಟಣ ಹಾಗೂ ಗ್ರಾಮೀಣಭಾಗಗಗಳಲ್ಲಿ ಹೆಚ್ಚು ಸಾವು ಸಂಭವಿಸುತ್ತಿದ್ದುಸಾರ್ವಜನಿಕರು ಸಭೆ ಸಮಾರಂಭ, ಸಾವುನೋವು, ಮದುವೆ ಇನ್ನಿತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಕೊರೊನಾ ತಡೆಗೆಅನುಸರಿಸಬೇಕಾದ ನಿಯಮಗಳನ್ನು ಕಡ್ಡಾಯವಾಗಿಪಾಲಿಸಬೇಕೆಂದರು.ಪ್ರತಿ ಗ್ರಾಪಂಗೆ ಆಯ್ಕೆಯಾಗಿರುವ ನೂತನಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಸೋಂಕು ತಡೆಗೆಮುಂದಾಗಬೇಕು. ಸೋಂಕು ಹರಡದಂತೆ ಈಗಿನಿಂದಲೇಕಾರ್ಯಯೋಜನೆ ರೂಪಿಸಿ 3ನೇ ಕೊರೊನಾ ಅಲೆತಪ್ಪಿಸಲು ಅಧಿಕಾರಿಗಳು, ಸ್ಥಳೀಯ ಚುನಾಯಿತಪ್ರತಿನಿಧಿಗಳು ಶ್ರಮಿಸಬೇಕೆಂದರು.
ಸಹಕಾರ ನೀಡುವೆ: ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರ ಜಾತ್ಯಾತೀತ ಹಾಗೂ ಪûಾತೀತವಾದ ಸೇವೆಅತ್ಯಗತ್ಯ. ಗ್ರಾಪಂ ಪಿಡಿಒ, ಕಂದಾಯ ರಾಜಸ್ವ ನಿರೀಕ್ಷಕ,ಗ್ರಾಮಲೆಕ್ಕಿಗ, ಆಶಾ ಹಾಗೂ ಅಂಗನವಾಡಿಕಾರ್ಯಕರ್ತೆಯರು ಸಂಘಟನೆಯಲ್ಲಿ ಪಾಲ್ಗೊಳ್ಳುವಯುವ ಸಮುದಾಯ, ಸಾಮಾಜಿಕ ಕಾರ್ಯಕರ್ತರನ್ನುಗುರುತಿಸಿ ಪ್ರತೀವಾರ ಸಭೆ ನಡೆಸಬೇಕೆಂದರು.ಈ ನಿಟ್ಟಿನಲ್ಲಿ ನಾನು ಸದಾ ನಿಮ್ಮೊಂದಿಗಿದ್ದು ಎಲ್ಲಾರೀತಿಯ ಸಹಕಾರ, ಸಲಹೆ ನೀಡುತ್ತೇನೆ. ಸೋಂಕುನಿಯಂತ್ರಣಕ್ಕೆ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿಉಚಿತವಾಗಿ ಆಕ್ಸಿಜನ್ ವಿತರಿಸಲು ಕ್ರಮವಹಿಸಲಾಗಿದೆ.ಯಾವುದೇ ನ್ಯೂನತೆ ಕಂಡು ಬಾರದಂತೆ ಅಧಿಕಾರಿಗಳಿಗೆಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವುದಾಗಿ ತಿಳಿಸಿದರು