Advertisement

ರೈತರಿಗೆ ಸಾಗುವಳಿ ಪತ್ರ ನೀಡಲು ಸರ್ಕಾರ ವಿಫ‌ಲ

12:45 PM Jul 13, 2019 | Suhan S |

ರಾಮನಗರ: ಹಲವಾರು ವರ್ಷಗಳಿಂದ ಸಾಗುವಳಿ ನಡೆಸುತ್ತಿರುವ ರೈತರಿಗೆ ಹಕ್ಕು ಪತ್ರಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿ ವರ್ಷಗಳೇ ಉರುಳುತ್ತಿವೆ, ಸರ್ಕಾರ ಭೂಮಿಗೆ ಹಕ್ಕು ನೀಡುತ್ತಿಲ್ಲ. ಆದರೆ ಜಿಂದಾಲ್ ಕಂಪನಿಗೆ 3367 ಎಕರೆ ಭೂಮಿಯನ್ನು ನೀಡುವ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಎ.ಲಕ್ಷ್ಮೀ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಂದಾಲ್ಗೆ ಭೂಮಿ ನೀಡುವ ವಿಚಾರದಲ್ಲಿ ಸರ್ಕಾರ ಏಕಪಕ್ಷಿಯ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ದೂರಿದರು.

ಬಜೆಟ್ನಲ್ಲಿ ಪೂರಕ ಅಂಶಗಳೇ ಇಲ್ಲ: ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ ವಾರ್ಷಿಕ 6 ಸಾವಿರ ರೂ. ರೈತರ ಖಾತೆಗೆ ವರ್ಗಾಯಿಸುವುದರ ಮೂಲಕ ಕೇಂದ್ರದ ಮೋದಿ ಸರ್ಕಾರ ಸಾಧನೆ ಮಾಡಿದಂತೆ ಬೀಗುತ್ತಿದೆ. ವಾಸ್ತವದಲ್ಲಿ ಈ ಮೊತ್ತಕ್ಕೆ ಯೂರಿಯಾ ಚೀಲವೂ ಸಿಗೋಲ್ಲ ಎಂದು ಲೇವಡಿ ಮಾಡಿದರು. ರೈತರ ಆದಾಯವನ್ನು ದ್ವಿಗುಣ ಗೊಳಿಸುವುದಾಗಿ ಮೋದಿ ಹೇಳಿದ್ದಾರೆ. ಆದರೆ ಅವರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಇದಕ್ಕೆ ಪೂರಕವಾದ ಅಂಶಗಳೇ ಇಲ್ಲ ಎಂದರು.

ಭೂಸ್ವಾಧೀನ ಕಾಯ್ದೆಗೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿಯ ವಿಚಾರದಲ್ಲಿಯೂ ವಿರೋಧ ವ್ಯಕ್ತಪಡಿಸಿದ ಜಿ.ಎ.ಲಕ್ಷ್ಮೀನಾರಾಯಣ ಗೌಡರು, ಹಳೆಯ ಭೂಸ್ವಾಧೀನ ಪ್ರಕ್ರಿಯೆಯನ್ನೇ ಮುಂದುವರೆಸಬೇಕು ಎಂದರು.

ರೈತರ ಹೆಸರಲ್ಲಿ ಲೂಟಿ: ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಬಗ್ಗೆ ಲೇವಡಿಯಾಡಿದ ಅವರು ಮತದಾರರು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರು ಪಕ್ಷಗಳನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಮಂಡ್ಯ ಲೋಕಸಭಾ ಚುನಾವಣಾ ಫ‌ಲಿತಾಂಶವೇ ಉದಾಹರಣೆ. ಎಲ್ಲಾ ರಾಜಕೀಯ ಪಕ್ಷಗಳು ರೈತರ ಹೆಸರಿನಲ್ಲಿ ಲೂಟಿ ಹೊಡೆದಿವೆ. ರೈತರ, ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹರಿಸಲು ಯಾವ ಪಕ್ಷದಲ್ಲೂ ಪ್ರಾಮಾಣಿಕ ಪ್ರಯತ್ನಗಳು ಆಗಿಲ್ಲ ಎಂದರು.

Advertisement

ಸಂಘಟಿತ ರೈತ ಸಂಘ ಅಸ್ತಿತ್ವಕ್ಕೆ ಬರಬೇಕು: ಇಂದು ರಾಜ್ಯದಲ್ಲಿ ರೈತ ಸಂಘ ಪುನರ್‌ ಸಂಘಟನೆಯಾಗಬೇಕಾಗಿದೆ. ಕಬ್ಬು ಬೆಳೆಗಾರರ ಸಂಘ, ರೇಷ್ಮೆ ಬೆಳೆಗಾರರ ಸಂಘ ಎಂಬುದೇನಿಲ್ಲ. ರೈತ ಸಂಘ ಎಲ್ಲಾ ಬೆಳೆಗಾರರನ್ನು ಒಳಗೊಂಡಂತೆ ಸಂಘಟಿತವಾಗಬೇಕಾಗಿದೆ. ರಾಜ್ಯ ಕಂಡ ರೈತ ಮುಖಂಡ ನಂಜುಂಡಸ್ವಾಮಿ ಅವರ ಮಕ್ಕಳು ಸಂಘಟಿತ ರೈತ ಸಂಘ ಅಸ್ತಿತ್ವಕ್ಕೆ ಬರಬೇಕು. ಈ ಸಂಘಟನೆಯ ನೇತೃತ್ವವನ್ನು ತಾವುವಹಿಸಿಕೊಳ್ಳಬೇಕು ಎಂದು ಆಶಿಸಿದ್ದಾರೆ ಎಂದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ ಟಿ, ಜಿಲ್ಲಾಧ್ಯಕ್ಷ ದೇವರಾಜು, ಕನಕಪುರ ಘಟಕದ ಅಧ್ಯಕ್ಷ ಹೊನ್ನೆಗೌಡ, ಪ್ರಮುಖರಾದ ತಾತಯ್ಯ, ಚಿಕ್ಕಮುನಿಶೆಟ್ಟಿ, ಆನಂದರಾವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next