ಚಾಮರಾಜನಗರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಳ್ಳು ಹೇಳಿ ಜನರನ್ನು ಯಾಮಾರಿಸಿದರೆ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೋವಿಡ್ 19 ಎದುರಿಸುವಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ 19 ತಡೆಯುವಂತೆ ವಿರೋಧ ಪಕ್ಷ ಕಾಂಗ್ರೆಸ್ 2 ತಿಂಗಳಿಂದ ಸಂಪೂರ್ಣ ಸಹಕಾರ ನೀಡಿತ್ತು. ಜೊತೆಗೆ ಲಾಕ್‌ಡೌನ್ ವೇಳೆ ಸರ್ಕಾರದೊಂದಿಗೆ ಕೈಜೋಡಿಸಿ, ನೊಂದವರಿಗೆ ನೆರವುನೀಡಿತು ಎಂದರು.
ನಿಷ್ಕ್ರಿಯ ಸರ್ಕಾರ: ಕೇಂದ್ರದ 20 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆಯಾಗಿ ಉಳಿದು ಕೊಂಡಿದೆ. ಅದೇ ರೀತಿ ಯಡಿಯೂರಪ್ಪ ಘೋಷಣೆ ಮಾಡಿದ ಶ್ರಮಿಕರ ಪ್ಯಾಕೇಜ್ ಕೂಡ ಬಡವರಿಗೆ ತಲುಪಿಲ್ಲ. ಇಂಥ ನಿಷ್ಕ್ರಿಯ ಸರ್ಕಾರದ ವಿರುದಟಛಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಿದೆ ಎಂದರು.
ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದು ಪಡಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿ, ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಈಗ ಗ್ರಾಪಂಗೆ ಚುನಾವಣೆ ಮಾಡುವ ಬದಲು ಕೋವಿಡ್ ನೆಪದಲ್ಲಿ ಅವರ ಪಕ್ಷದ ಕಾರ್ಯಕರ್ತರನ್ನು ಪಂಚಾಯ್ತಿಗೆ ನಾಮ ನಿರ್ದೇಶಕರನ್ನಾಗಿ ನೇಮಕ ಮಾಡಲು ಮುಂದಾಗಿದೆ.
ಚಾ.ನಗರ ಜಿಲ್ಲಾ ಗ್ರೀನ್ ಜೋನ್ ನಲ್ಲಿದ್ದು, ಜಿಲ್ಲಾಡಳಿತ ಇದೇ ರೀತಿ ಕಾಪಾಡಿಕೊಳ್ಳಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಮಾಜಿ ಸಂಸದ ಧ್ರುವನಾರಾಯಣ, ಶಾಸಕರಾದ ಪುಟ್ಟರಂಗಶೆಟ್ಟಿ, ನರೇಂದ್ರ, ಮಾಜಿ ಸಂಸದ ಶಿವಣ್ಣ, ಕೃಷ್ಣಮೂರ್ತಿ, ಬಾಲರಾಜು, ಗಣೇಶ್ ಪ್ರಸಾದ್ ಇದ್ದರು.