ಆಳಂದ: ತಾಲೂಕಿನಲ್ಲಿ ಕಾಡುತ್ತಿರುವ ಅನಕ್ಷರತೆಯಿಂದಾಗಿ ಕಡು ಬಡವರಿಗೆ ಸರಕಾರದ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಜನರಲ್ಲಿಅಕ್ಷರದ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದು ಶಾಸಕಬಿ.ಆರ್.ಪಾಟೀಲ ಹೇಳಿದರು.
ತಾಲೂಕಿನ ಧಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಆವರಣದಲ್ಲಿ ಗ್ರಾ.ಪಂ ಮಟ್ಟದ 27ನೇ ಆರೋಗ್ಯ ಕಲ್ಯಾಣ ಶಿಬಿರಕ್ಕೆ ಉದ್ಘಾಟಿಸಿ ಅವರು ಮಾತನಾಡಿರು. ಸಮಾಜದಲ್ಲಿ ಇರುವ ನಿಗರ್ತಿಕರು ಬಡವರಿಗೆ, ವಿಧವೆಯರಿಗೆ, ವಯೋವೃದ್ಧರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವುದು ಕಷ್ಟವಾಗಿದೆ.
ಹಾಗಾಗಿ ಆರೋಗ್ಯ ಕಲ್ಯಾಣ ಶಿಬಿರದ ಮೂಲಕ ವಿವಿಧ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದೇವೆ ಎಂದು ಹೇಳಿದರು. ಧಂಗಾಪುರ ಗ್ರಾಪಂ ವ್ಯಾಪ್ತಿಯ ಸಂಧ್ಯಾ ಸುರûಾ 75, ವೃದ್ಧಾಪ್ಯ 50, ವಿಧವಾ 18, ಮನಸ್ವಿನಿ 2, ಅಂಗವಿಕಲ 18 ಫಲಾನುಭವಿಗಳನ್ನು ಗುರುತಿಸಲಾಗಿದೆ.
1 ತಿಂಗಳ ಒಳಗಾಗಿ ಆದೇಶ ನೀಡಿ ಪಿಂಚಣಿ ಸಿಗುವ ಹಾಗೇ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು. ಗ್ರಾಮದ ಹಿರಿಯ ಸಿದ್ದಣ್ಣ ಮಾಸ್ತರ ಶೇಗಜಿ ಸಭೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ವಿಠuಲರಾವ ಪಾಟೀಲ, ಕೆಪಿಸಿಸಿ ಸದಸ್ಯ ಜಗನ್ನಾಥ ಶೇಗಜಿ,
ಮುಖಂಡರಾದ ಬಾಬುಗೌಡ ಪಾಟೀಲ, ಬಿ.ಕೆ. ಪಾಟೀಲ, ಗುರುಶರಣ ಪಾಟೀಲ ಕೋರಳ್ಳಿ, ಗುರುಶಿವಲಿಂಗ ಪಾಟೀಲ, ಎಪಿಎಂಸಿ ಉಪಾಧ್ಯಕ್ಷ ನಬೀಲಾಲ್ ಬಟ್ಟರಗಾ, ಕೆಎಂಎಫ್ ನಿರ್ದೇಶಕ ಈರಣ್ಣ ಝಳಕಿ, ಆಲೂಗೌಡ ಪಾಟೀಲ, ಲಕ್ಷಣ ಕರುಣಾಕರ,
ನಿಂಬರ್ಗಾ ಉಪತಹಶೀಲ್ದಾರ ಶಾಂತಕುಮಾರ ಪಟ್ಟಣ, ಕಂದಾಯ ನಿರೀಕ್ಷಕ ಪ್ರಭುಲಿಂಗ ತಟ್ಟಿ, ಡಾ|ರಾಕೇಶ ಚವ್ಹಾಣ, ಡಾ| ಅಭಿನಂದ, ಡಾ| ಅವಿನಾಶ, ಡಾ| ಆರ್. ಎನ್. ಸಾಲುಟಗಿ, ನೇತ್ರ ಸಹಾಯಕಿ ಸುಮಲತಾ, ಡಾ| ರಾಜೇಶ್ವರಿ ಇದ್ದರು. ಧಂಗಾಪುರ, ಬಟ್ಟರಗಾ, ದೇವತಂಗಿ ಗ್ರಾಮಸ್ಥರು ಪಾಲ್ಗೊಂಡಿದ್ದರು.