ಹೊಸದಿಲ್ಲಿ: ಜನರ ಕೈಯಲ್ಲಿ ಹಣದ ಹರಿವು ಹೆಚ್ಚಿ ಖರೀದಿ ವೃದ್ಧಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರವು ಪ್ರವಾಸಿ ರಜೆ ಭತ್ತೆ (ಎಲ್‌ಟಿಸಿ) ನಗದೀಕರಣ ಸೌಲಭ್ಯವನ್ನು ಎಲ್ಲ ರಾಜ್ಯ ಸರಕಾರಿ ಉದ್ಯೋಗಿಗಳಿಗೂ ವಿಸ್ತರಿಸಿದೆ.
ಅಷ್ಟೇ ಅಲ್ಲ, ಖಾಸಗಿ ಉದ್ಯೋಗಿಗಳಿಗೂ ಅನ್ವಯವಾಗಲಿದೆ ಎಂದೂ ತಿಳಿಸಿದೆ. ಈ ಯೋಜನೆ ಅಡಿ ಪ್ರತೀ ನೌಕರನಿಗೆ ಗರಿಷ್ಠ 36 ಸಾವಿರ ರೂ. ವರೆಗೆ ನಗದು ಭತ್ತೆ ಸಿಗಲಿದೆ. ಈ ಯೋಜನೆ 2018-19ನೇ ಸಾಲಿನಿಂದಲೇ ಅನ್ವಯವಾಗಲಿದೆ.
ಈ ಎಲ್‌ಟಿಸಿ ನಗದಿಗೆ ತೆರಿಗೆ ಇರುವುದಿಲ್ಲ. ಷರತ್ತುಗಳಿದ್ದು, ಪಡೆಯುವ ಎಲ್‌ಟಿಸಿ ನಗದಿನ 3 ಪಟ್ಟು ಹೆಚ್ಚು ಹಣವನ್ನು ಸರಕು ಮತ್ತು ಸೇವೆಗಳ ಖರೀದಿಗಾಗಿ ವ್ಯಯಿಸಿದರೆ ಶೇ. 12ರಷ್ಟು ಜಿಎಸ್‌ಟಿಯಿಂದ ವಿನಾಯಿತಿ ದೊರೆಯುತ್ತದೆ.
ಯಾರಿಗೆಲ್ಲ ಅನ್ವಯ?
1. ಕೇಂದ್ರ ಸರಕಾರಿ ನೌಕರರು
2. ರಾಜ್ಯ ಸರಕಾರಿ ನೌಕರರು
3. ಸರಕಾರಿ ಸಂಸ್ಥೆಗಳ ನೌಕರರು
4. ಖಾಸಗಿ ಉದ್ಯೋಗಿಗಳು