Advertisement
ಇದರಿಂದಾಗಿ ತಮ್ಮ ಮಕ್ಕಳನ್ನು “ಇಂಗ್ಲಿಷ್ ಮಾಧ್ಯಮ’ದಲ್ಲಿ ಓದಿಸಬೇಕು ಎಂಬ ಕಾರಣಕ್ಕಾಗಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವ ಪೋಷಕರು ಇನ್ನು ಸರಕಾರಿ ಶಾಲೆಗಳಿಗೂ ಸೇರಿಸಬಹುದಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಂ. ಪ್ರಸನ್ನಕುಮಾರ್ ತಿಳಿಸಿದ್ದಾರೆ.
Related Articles
Advertisement
2021-22 ಮತ್ತು 2022-23ನೇ ಸಾಲಿನಲ್ಲಿ ಹೊಸ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿಲ್ಲ. ಆದರೆ, ಈಗಾಗಲೇ ಆರಂಭಿಸಿರುವ ಶಾಲೆಗಳಲ್ಲಿ ತರಗತಿಗಳನ್ನು ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.
ಸಂಬಂಧಪಟ್ಟ ಶಾಲೆಗಳಲ್ಲಿ ಮೂಲಸೌಕರ್ಯವಿದ್ದಲ್ಲಿ ಅನುಮತಿ ನೀಡಲಾಗುತ್ತದೆ. ಕಳೆದ ವರ್ಷ 3ನೇ ತರಗತಿವರೆಗೆ ಇದ್ದ ಆಂಗ್ಲ ಮಾಧ್ಯಮವನ್ನು ಈ ವರ್ಷ 4ನೇ ತರಗತಿವರೆಗೆ ವಿಸ್ತರಿಸಲಾಗಿದೆ.
ಮತ್ತಷ್ಟು ಶಾಲೆಗಳಲ್ಲಿ ಆರಂಭಿಸಲು ಆಗ್ರಹರಾಜ್ಯದಲ್ಲಿ 44,615 ಸರಕಾರಿ ಪ್ರಾಥಮಿಕ ಶಾಲೆಗಳಿವೆ. ಈ ಪೈಕಿ ಕೇವಲ 2,401 ಶಾಲೆಗಳಲ್ಲಿ ಮಾತ್ರ ಆಂಗ್ಲ ಮಾಧ್ಯಮವಿದೆ. ಮತ್ತಷ್ಟು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದರೆ, ಕೂಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದವರು, ಹಿಂದುಳಿದ ವರ್ಗದ ಮಕ್ಕಳು ಸಹಿತ ಎಲ್ಲ ವರ್ಗದ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಅನುಕೂಲವಾಗಲಿದೆ. ಕೇಲವೇ ಮಂದಿಗೆ ಸಿಗುತ್ತಿರುವ ಸವಲತ್ತು ರಾಜ್ಯಾದ್ಯಂತ ಸಿಗುವಂತೆ ಮಾಡಬೇಕು ಎಂಬುದು ಪೋಷಕರ ಆಗ್ರಹವಾಗಿದೆ. ಈಗಾಗಲೇ ಆಂಗ್ಲ ಮಾಧ್ಯಮ ಬೋಧಿಸುತ್ತಿರುವ ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯವಿದ್ದರೆ, ನಿಗದಿತ ಸಂಖ್ಯೆಗಿಂತ ಹೆಚ್ಚಿನ ಮಕ್ಕಳಿಗೆ ಪ್ರವೇಶ ಕಲ್ಪಿಸಲು ನಿರ್ದೇಶನ ನೀಡಲಾಗಿದೆ.
– ಎಂ.ಪ್ರಸನ್ನಕುಮಾರ್,
ನಿರ್ದೇಶಕರು, ಪ್ರಾಥಮಿಕ ಶಿಕ್ಷಣ -ಎನ್. ಎಲ್. ಶಿವಮಾದು