Advertisement
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರ ಸಂಘ ಕೇವಲ ತನ್ನ ನೌಕರರ ಹಿತಾಸಕ್ತಿ ಕಾಪಾಡದೇ ಜೊತೆಗೆ ರಕ್ತದಾನ, ಉನ್ನತ ಪರೀಕ್ಷೆಗಳಿಗೆ ತರಬೇತಿ, ಇಲಾಖೆ ತರಬೇತಿಗಳು, ನೌಕರರ ಆರೋಗ್ಯ ತಪಾಸಣೆ ಶಿಬಿರ ಹೀಗೆ ಹತ್ತು ಹಲವು ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ಹೇಳಿದರು.
Related Articles
Advertisement
ಈ ಹಿಂದಿನ ಅಧ್ಯಕ್ಷ ಜಿ.ಮಲ್ಲೇಶಪ್ಪ ನೂತನ ಅಧ್ಯಕ್ಷ ಬಸಣ್ಣ ಮಾದರ್‌ಗೆ ಅಧಿಕಾರ ಹಸ್ತಾಂತರಿಸಿದರು. ಹಿಂದಿನ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರು, ಶಿಕಾರಿಪುರ ತಾಲೂಕಿನ ಅಧ್ಯಕ್ಷರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ನೌಕರರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ರಾಜ್ಯ ಪರಿಷತ್ ಸದಸ್ಯರಾಗಿ ಜಿ.ನಾಗೇಶ್, ಖಜಾಂಚಿಯಾಗಿ ಎಂ.ಎಚ್.ಕೊಟ್ಯಪ್ಪ, ಕಾರ್ಯದರ್ಶಿ ಕೆ.ಆರ್.ರಂಗಪ್ಪ ಪದಗ್ರಹಣ ಮಾಡಿದರು. ತಾ.ಪಂ ಸದಸ್ಯ ವಿಜಯಕುಮಾರ್, ನಿಕಟಪೂರ್ವ ಅಧ್ಯಕ್ಷ ಜಿ.ಮಲ್ಲೇಶಪ್ಪ, ಗೌರವಾಧ್ಯಕ್ಷ ನ್ಯಾಮತಿ ನಾಗರಾಜ್, ಸುರೇಶ್ ಮಾಳಗಿ, ರವಿಗಾಳಿ, ಡಾ| ವಿಶ್ವನಟೇಶ್, ಶಿವಪದ್ಮ, ಸಿದ್ದಪ್ಪ ಹೊಸಕೇರಿ, ವಿ.ಹರೀಶ್, ಎಚ್.ಕೆ. ರಮೇಶ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕರಿಬಸಯ್ಯ, ಎಚ್.ಕೆ. ಚಂದ್ರಶೇಖರ್, ಮಂಜುನಾಥ್ ಇಂಗಳಗೊಂದಿ ಇದ್ದರು.