Advertisement
ಅವರು ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು – 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ರಾಜ್ಯದ ಪ್ರಗತಿಯಲ್ಲಿ ಸರ್ಕಾರಿ ನೌಕರರ ಮಹತ್ವದ ಪಾತ್ರ
ನಾವೆಲ್ಲಾ ಒಂದೇ ಕುಟುಂಬದ ಸದಸ್ಯರಾಗಿದ್ದು, ರಾಜ್ಯವನ್ನು ಉನ್ನತ ಮಟ್ಟಕ್ಕೆ ತರಲು ಒಗ್ಗಾಟ್ಟಾಗಿ ದುಡಿಯಬೇಕು. ಆಳುವವರು ಮತ್ತು ಆಡಳಿತಕ್ಕೆ ಸಂಯೋಜನಾತ್ಮಕ ಸಂಬಂಧವಾಗಿದ್ದು, ಇವೆರಡೂ ಚಕ್ರಗಳು ರಾಜ್ಯದ ಪ್ರಗತಿಯ ರಥವನ್ನು ಮುನ್ನಡೆಸುತ್ತದೆ. ಅಂತಹ ರಾಜ್ಯ ಪ್ರಗತಿಯನ್ನು ಸಾಧಿಸುತ್ತದೆ. ರಾಜ್ಯ ಹಲವಾರು ರಂಗದಲ್ಲಿ ಹೆಸರು ಗಳಿಸಿದ್ದರೆ, ಅದರಲ್ಲಿ ಸರ್ಕಾರಿ ನೌಕರರ ಪಾಲು ದೊಡ್ಡದಿದೆ ಎಂದರು.
ಕೋವಿಡ್ ನ ಯಶಸ್ವಿ ನಿರ್ವಹಣೆ
ಕೋವಿಡ್ ಸಾಂಕ್ರಾಮಿಕವನ್ನು ನಾಯಕರಾದ ಯಡಿಯೂರಪ್ಪ ಅವರ ನೇತೃತ್ವದಲ್ಲಿ, ಸರ್ಕಾರಿ ನೌಕರರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಯಿತು. ಕೊರೊನ ಯೋಧರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ರಾಜ್ಯ ಕೋವಿಡ್ ಸಂಕಷ್ಟದಿಂದ ಶೀಘ್ರದಲ್ಲಿ ಹೊರಬಂದು ಆರ್ಥಿಕ ಚೇತರಿಕೆ ಕಾಣಲು ಸಾಧ್ಯವಾಯಿತು. ವಿವಿಧ ತೆರಿಗೆಗಳಿಂದ 15000 ಕೋಟಿ ಆದಾಯವನ್ನು ಗಳಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಯಾವುದೇ ಕಡಿತವಿಲ್ಲದೇ ಪೂರ್ಣಪ್ರಮಾಣದ ವೇತನವನ್ನು ನೀಡುವ ತೀರ್ಮಾನ, ನಾಯಕರಾದ ಯಡಿಯೂರಪ್ಪಅವರಿಗೆ ಸರ್ಕಾರಿ ನೌಕರರ ಹಿತಾಸಕ್ತಿಯ ಪ್ರತೀಕವಾಗಿದೆ. ಅವರ ಮಾರ್ಗದರ್ಶನದಲ್ಲಿ ಶಿಕ್ಷಣ, ಆರೋಗ್ಯ, ಆರ್ಥಿಕ ಪ್ರಗತಿಗೆ ಇಂಬು ನೀಡಲಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಷಡಕ್ಷರಿಯವರ ನಾಯಕತ್ವದಿಂದ ಹೊಸ ಚೈತನ್ಯ ಬಂದಿದೆ. ಸಂಘದ ಹಿತಾಸಕ್ತಿಯನ್ನು ಕಾಪಾಡುವ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದಾರೆ ಎಂದರು.