Advertisement

ಕಬಡ್ಡಿಯಿಂದ ಆತ್ಮವಿಶ್ವಾಸ ವೃದ್ಧಿ: ಬಯ್ನಾಪುರ

04:15 PM Nov 02, 2018 | Team Udayavani |

ಕುಷ್ಟಗಿ: ದೇಶಿಯ ಕ್ರೀಡೆ ಕಬಡ್ಡಿ ದೈಹಿಕ, ಮಾನಸಿಕ ಸದೃಢತೆಯ ಜೊತೆಗೆ ಆತ್ಮವಿಶ್ವಾಸ ಗಟ್ಟಿಗೊಳಿಸುತ್ತದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು. ಇಲ್ಲಿನ ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಮೆಚೂರು ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ರಾಜ್ಯೋತ್ಸವ ಪ್ರಯುಕ್ತ ಸರ್ಕಾರಿ ನೌಕರರ, ಅನುದಾನಿತ ನೌಕರರಿಗಾಗಿ ಹಮ್ಮಿಕೊಂಡ ಮುಕ್ತ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಆರೋಗ್ಯ ರಕ್ಷಿಸಿಕೊಳ್ಳುವ ಭೌದ್ಧಿಕ ವಿಸನಕ್ಕೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ಸರ್ಕಾರಿ ನೌಕರರು ಸೌಹಾರ್ದಯುತವಾಗಿ ಆಡುವ ಕ್ರೀಡೆಗೆ ನಿರ್ಣಾಯಕರೇ ಇರಬಾರದು. ಈ ಪಂದ್ಯಾವಳಿಗೆ ನಿರ್ಣಾಯಕರ ಜೊತೆಗೆ ಜಿಲ್ಲಾ ಸಶಸ್ತ್ರ ಪಡೆಯ ಪೊಲೀಸ್‌ ಬಂದೋಬಸ್ತ್ ಕಲ್ಪಿಸಿರುವುದು ಅಚ್ಚರಿಯಾಗಿದೆ. ಸೌಹಾರ್ದಯುತವಾದ ಪಂದ್ಯಾವಳಿಯಾಗಿದ್ದರಿಂದ ಪೊಲೀಸ್‌ ಬಂದೋಬಸ್ತ್ ಅಗತ್ಯವಿರಲಿಲ್ಲ ಎಂದ ಅವರು, ನೌಕರ ವರ್ಗ ಸ್ನೇಹ, ಬಾಂಧವ್ಯದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದರು.

Advertisement

ರಾಷ್ಟ್ರೀಯ ಕಬಡ್ಡಿ ಆಟಗಾರ ಶಂಕರಯ್ಯ ಕಂಪಾಪೂರಮಠ, ಅಮೆಚೂರು ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ದೊಡ್ಡಬಸವ ಬಯ್ನಾಪೂರ, ನೌಕರ ಸಂಘದ ಅಧ್ಯಕ್ಷ ಗುರಪ್ಪ ಅಂಗಡಿ, ಪುರಸಭೆ ಸದಸ್ಯ ವಸಂತ ಮೇಲಿಮನಿ, ಚಿರಂಜೀವಿ ಹಿರೇಮಠ, ರಾಮಣ್ಣ ಬಿನ್ನಾಳ, ಅಗ್ನಿಶಾಮಕ ಠಾಣಾಧಿಕಾರಿ ರಾಜು, ಜೆಸ್ಕಾಂ ಎಇಇ ಹನುಮೇಶ ಹಯಗ್ರಿವ್‌, ರವೀಂದ್ರ ಬಾಕಳೆ, ಅಬ್ದುಲ್‌ ರಹೀಂ ವಂಟೆಳಿ, ಸಿದ್ರಾಮಪ್ಪ ಅಮರಾವತಿ, ಧರ್ಮಕುಮಾರ ಕಂಬಳಿ, ಅಮರೇಗೌಡ ನಾಗೂರ, ಹ.ಯ. ಈಟಿಯವರ್‌, ಪಿ. ಚಂದುಸಾಬ್‌, ಜಗದೀಶ ಸೂಡಿ, ಮಹಾಂತೇಶ ಜಾಲಿಗಿಡ ಇತರರಿದ್ದರು. ಕಬಡ್ಡಿ ಪಂದ್ಯಾವಳಿಯಲ್ಲಿ ವಿವಿಧ ಇಲಾಖೆಯ 15 ತಂಡಗಳು ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next