Advertisement

ವೈದ್ಯೆಯ ಅರೆನಗ್ನ ವೀಡಿಯೋ ಚಿತ್ರೀಕರಿಸಿ ವೈರಲ್‌ ಮಾಡಿದ ಸರಕಾರಿ ವೈದ್ಯ

05:02 PM Jun 17, 2017 | Team Udayavani |

ಮುಂಬಯಿ: ಮಹಿಳಾ ಸಹೋದ್ಯೋಗಿ ಬಟ್ಟೆ ಬದಲಾಯಿಸುತ್ತಿರುವಾಗಿನ  ದೃಶ್ಯಾವಳಿಗಳನ್ನು  ಮೊಬೈಲ್‌ನಲ್ಲಿ  ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ  ವೈರಲ್‌ ಮಾಡಿದ  ನಗರದ ಸರಕಾರಿ  ಆಸ್ಪತ್ರೆಯೊಂದರ ವೈದ್ಯನೋರ್ವನನ್ನು  ಜುಹೂ ಪೊಲೀಸರು  ಬಂಧಿಸಿದ್ದಾರೆ. 

Advertisement

ಆರೋಪಿ ವೈದ್ಯ ಮಹಿಳಾ ವೈದ್ಯೆಯ ಮೊಬೈಲ್‌ ಫೋನ್‌ನ ಮೆಮರಿ ಕಾರ್ಡ್‌ನ್ನು ಕಳವುಗೈದಿದ್ದಾನೆ ಎನ್ನಲಾಗಿದ್ದು ಈ ಸಂಬಂಧವೂ  ಪೊಲೀಸರು  ಆತನ ವಿರುದ್ಧ   ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಸರಕಾರಿ  ಆಸ್ಪತ್ರೆಯಲ್ಲಿ  ಇವರೀರ್ವರು  ವೈದ್ಯರಾಗಿದ್ದು  ವೈದ್ಯರ  ವಸತಿ ಸಮುಚ್ಚಯದಲ್ಲಿನ  ಒಂದೇ ಮಹಡಿಯಲ್ಲಿ  ಬೇರೆ ಬೇರೆ  ಕೋಣೆಗಳಲ್ಲಿ  ವಾಸವಾಗಿದ್ದರು. ಮಹಿಳಾ ವೈದ್ಯೆಗೆ  ಆಕೆಯ ಸ್ನೇಹಿತೆಯೋರ್ವಳು ವೀಡಿಯೋವನ್ನು  ಕಳುಹಿಸಿದ  ಬಳಿಕವಷ್ಟೇ ವೈದ್ಯನ  ಕುಕೃತ್ಯ  ಬಯಲಾಯಿತು. 
ಇದಾದ  ಬಳಿಕ  ಆಕೆ  ಜುಹೂ  ಠಾಣೆ ಪೊಲೀಸರಿಗೆ  ಸಹೋದ್ಯೋಗಿ  ವೈದ್ಯನ  ವಿರುದ್ಧ  ದೂರು  ನೀಡಿದ್ದಳು.  ಅದರಂತೆ  ಪ್ರಕರಣ ದಾಖಲಿಸಿಕೊಂಡ  ಪೊಲೀಸರು  ಆರೋಪಿ ವೈದ್ಯನನ್ನು  ಬಂಧಿಸಿ  ಮ್ಯಾಜಿಸ್ಟ್ರೇಟ್‌  ಮುಂದೆ  ಹಾಜರು ಪಡಿಸಿದರು.  ಮ್ಯಾಜಿಸ್ಟ್ರೇಟ್‌ ಅವರು  ಆರೋಪಿಯನ್ನು  ಪೊಲೀಸ್‌ ಕಸ್ಟಡಿಗೆ  ಒಪ್ಪಿಸಿದ್ದು  ಪೊಲೀಸರು  ವೈದ್ಯನನ್ನು  ತೀವ್ರ  ವಿಚಾರಣೆಗೆ  ಗುರಿಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next