Advertisement
ಮಾಜಿ ಸಚಿವ ದಿ| ಬಿ. ಶಿವಣ್ಣನವರ ಅಧಿಕಾರಾವಧಿಯಲ್ಲಿ ದೇವದುರ್ಗ ಪಟ್ಟಣಕ್ಕೆ ಸರಕಾರಿ ಪದವಿ ಕಾಲೇಜು ಮಂಜೂರಾಗಿತ್ತು. ಬಳಿಕ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ ಆಡಳಿತಾವಧಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ಸರ್ಕಾರಿ ಪದವಿ ಕಾಲೇಜು ಕಟ್ಟಡ ಅವ್ಯವಸ್ಥೆಯ ಆಗರವಾಗಿದೆ. ಕುಡಿಯಲು ನೀರಿಲ್ಲ, ಶೌಚಾಲಯವಿಲ್ಲ, ಕಾಂಪೌಂಡ್, ವಿದ್ಯುತ್ ಸೇರಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಕಿಟಕಿ-ಬಾಗಿಲುಗಳು ಕಿತ್ತಿ ಹೋಗಿವೆ. ನೆಲಕ್ಕೆ ಹಾಸಲಾಗಿರುವ ಬಂಡೆಗಳು ಕುಸಿದಿವೆ. ಮಳೆ ಬಂದರೆ ಕೋಣೆಗಳೆಲ್ಲ ಸೋರಿ, ನೀರು ಮುಂದೆ ಹರಿಯದಂತಹ ವಾತಾವರಣ ನಿರ್ಮಾಣಗೊಂಡಿದೆ.
Related Articles
Advertisement
ಇರುವ ಶೌಚಾಲಯಕ್ಕೆ ನೀರಿಲ್ಲ: ಕಾಲೇಜು ಬಳಿ ನಿರ್ಮಿತಿ ಕೇಂದ್ರದಿಂದ ಕಳೆದ ಒಂದು ವರ್ಷದ ಹಿಂದೆ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಇದಕ್ಕೆ ನೀರಿನ ವ್ಯವಸ್ಥೆ ಇಲ್ಲದ್ದರಿಂದ ನಿರುಪಯುಕ್ತವಾಗಿದೆ.
ಇನ್ನಾದರೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡು ಸರಕಾರಿ ಪದವಿ ಕಾಲೇಜು ದುರಸ್ತಿಗೆ ಮತ್ತು ನೀರು, ವಿದ್ಯುತ್, ಶೌಚಾಲಯದಂತಹ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ನಿಂಗಣ್ಣ ಮಕಾಶಿ ಆಗ್ರಹಿಸಿದ್ದಾರೆ.
ಚುನಾವಣೆ ಪ್ರಕ್ರಿಯೆ ನಡೆಯುವ ಕೇಂದ್ರಯಾವುದೇ ಚುನಾವಣೆ ನಡೆದರೂ ಅದರ ಪ್ರಕ್ರಿಯೆಗಳು ಸರ್ಕಾರಿ ಪದವಿ ಕಾಲೇಜು ಕಟ್ಟಡದಲ್ಲೇ ನಡೆಯುತ್ತವೆ. ವಿಧಾನಸಭೆ, ಲೋಕಸಭೆ, ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳ ಪ್ರಕ್ರಿಯೆಗಳು ಇದೇ ಕಟ್ಟಡದಲ್ಲಿ ನಡೆಯುತ್ತವೆ. ಮಸ್ಟರಿಂಗ್, ಡಿ. ಮಸ್ಟರಿಂಗ್ ಸೇರಿದಂತೆ ಕೆಲವು ಬಾರಿ ಮತ ಪೆಟ್ಟಿಗೆಗಳನ್ನು ಕೂಡ ಇದೇ ಕಟ್ಟಡದಲ್ಲಿ ಸಂಗ್ರಹಿಸಿ ಫಲಿತಾಂಶ ಪ್ರಕಟಿಸಲಾಗುತ್ತಿದೆ. ಆದರೂ ಕಟ್ಟಡವನ್ನು ದುರಸ್ತಿಗೊಳಿಸಿ ಮೂಲ ಸೌಲಭ್ಯ ಕಲ್ಪಿಸುವತ್ತ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಗಮನಹರಿಸಿಲ್ಲ. ಈಡೇರದ ಡಿಸಿ ಭರವಸೆ: ಕಟ್ಟಡದ ಸಮಸ್ಯೆ ಬಗ್ಗೆ ಪತ್ರಕರ್ತರು ಹಿಂದಿನ ಜಿಲ್ಲಾ ಧಿಕಾರಿ ಸಸಿಕಾಂತ್ ಸೇಂಥಿಲ್ ಅವರ ಗಮನ ಸೆಳೆದಾಗ ಯಾರೂ ಅನುದಾನ ಕೊಡದೇ ಹೋದಲ್ಲಿ ಜಿಲ್ಲಾಧಿಕಾರಿ ತಮ್ಮ ಅನುದಾನ ಒದಗಿಸುವ ಭರವಸೆ ನೀಡಿದ್ದರು. ಆದರೆ ಇದು ಭರವಸೆಯಾಗಿಯೇ ಉಳಿದಿದೆ. ಇದುವರೆಗೆ ಕಟ್ಟಡ ದುರಸ್ತಿಗೆ, ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ಇದೀಗ ಮತ್ತೆ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ಪ್ರಕ್ರಿಯೆಗಳು ಇದೇ ಕಟ್ಟಡದಲ್ಲಿ ನಡೆಯಲಿವೆ. ಚುನಾವಣಾ ಧಿಕಾರಿಗಳ ತಂಡ ಈಗಾಗಲೇ ಕಟ್ಟಡ ಪರಿಶೀಲಿಸಿ ಅವ್ಯವಸ್ಥೆಯನ್ನು ಮನಗಂಡಿದೆ. ಬೇರೆ ದಾರಿಯಿಲ್ಲದೆ ಕಟ್ಟಡದ ಸುತ್ತಲೂ ಬೆಳೆದಿರುವ ಜಾಲಿಗಿಡಗಳ ಕಟಿಂಗ್ ಕಾರ್ಯ ಭರದಿಂದ ನಡೆದಿದೆ. ವಿಧಾನಸಭೆ ಚುನಾವಣೆಯ ಮತಪೆಟ್ಟಿಗೆಗಳನ್ನು ಸಂಗ್ರಹಿಸಲು ಈಗಾಗಲೇ ಅಧಿಕಾರಿಗಳ ತಂಡ ಸರ್ಕಾರಿ ಪದವಿ ಕಾಲೇಜು ಕಟ್ಟಡವನ್ನು ಪರಿಶೀಲಿಸಿದೆ. ಭದ್ರತೆಗಾಗಿ ಬೇಕಾಗುವ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನಗಳ ನಿಲುಗಡೆಗಾಗಿ ಕಟ್ಟಡದ ಸುತ್ತ ಬೆಳೆದಿರುವ ಜಾಲಿಗಿಡಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ.
ಅಶೋಕ ಹೀರೊಳ್ಳಿ, ತಹಶೀಲ್ದಾರ್ ನಾಗರಾಜ ತೇಲ್ಕರ್