Advertisement
ಈ ಕುರಿತು ರಾಜ್ಯ ವೈದ್ಯಕೀಯ ಪರಿಷತ್ತಿಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಪತ್ರ ಬರೆದಿದ್ದಾರೆ. ಗ್ರಾಮೀಣ ಸೇವೆ ಮಾಡದಿರುವ ವೈದ್ಯರಿಗೆ ಕಡ್ಡಾಯವಾಗಿ ಸೇವೆಗೆ ಹಾಜರಾಗುವಂತೆ ಸೂಚಿಸಬೇಕು. ಇಲ್ಲದಿದ್ದರೆ ಅವರ ವೈದ್ಯಕೀಯ ಪ್ರಮಾಣ ಪತ್ರವನ್ನು ರದ್ದುಗೊಳಿಸುವುದಾಗಿ ಸೂಚಿಸುವಂತೆ ವೈದ್ಯಕೀಯ ಪರಿಷತ್ತಿನ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದಾರೆ.
ವಾಗಿ ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಸೇವೆ ಸಲ್ಲಿಸಬೇಕು. ಅದರಂತೆ 2013-14ನೇ ಸಾಲಿನಿಂದ ರಾಜ್ಯದಲ್ಲಿ 3702 ವೈದ್ಯರು ಗ್ರಾಮೀಣ ಸೇವೆ ಮಾಡಬೇಕಾಗುತ್ತದೆ. ಕೇವಲ 86 ಜನ ಮಾತ್ರ ಗ್ರಾಮೀಣ ಸೇವೆ ಪೂರೈಸಿರುತ್ತಾರೆ. 1159 ಅಭ್ಯರ್ಥಿಗಳು ಗ್ರಾಮೀಣ ಸೇವೆ ಮಾಡದಿದ್ದರೆ, ಸರ್ಕಾರ ವಿಧಿಸುವ ದಂಡ ಕಟ್ಟುವುದಾಗಿ ಕರಾರು ಪತ್ರಕ್ಕೆ ಸಹಿ ಹಾಕಿದ್ದಾರೆ. ಗ್ರಾಮೀಣ ಸೇವೆ ಮಾಡುವುದಾಗಿ ಕರಾರು ಪತ್ರ ಬರೆದು ಸೇವೆಯಿಂದ ದೂರ ಉಳಿದಿರುವ ವೈದ್ಯರಿಗೆ ನೋಟಿಸ್ ನೀಡಿ, ಗ್ರಾಮೀಣ ಸೇವೆಗೆ ಹಾಜರಾಗುವಂತೆ ಸೂಚಿಸಬೇಕು ಎಂದು ರಮೇಶ್ ಕುಮಾರ್ ಸೂಚಿಸಿದ್ದಾರೆ. ಹಾಜರಾಗದಿದ್ದಲ್ಲಿ ಅವರ ವೈದ್ಯಕೀಯ ಪ್ರಮಾಣ ಪತ್ರವನ್ನು ರದ್ದುಗೊಳಿಸುವಂತೆ ರಮೇಶ ಕುಮಾರ್ ಸೂಚಿಸಿದ್ದಾರೆ. ಸಚಿವರ ಪತ್ರದ ಅನುಸಾರ ಗ್ರಾಮೀಣ ಸೇವೆ ಮಾಡುವು
ದಾಗಿ ಒಪ್ಪಂದ ಮಾಡಿಕೊಂಡು ಸೇವೆಯಿಂದ ದೂರ ಉಳಿದಿರುವ 688 ವೈದ್ಯರಿಗೆ ನೋಟಿಸ್ ನೀಡುವಂತೆ ಆರೋಗ್ಯ
ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವೈದ್ಯಕೀಯ ಪರಿಷತ್‌ಗೆ ಪತ್ರ ಬರೆದಿದ್ದಾರೆ.