ಧಾರವಾಡ: ಸರ್ಕಾರ ಗ್ರಂಥಾಲಯಗಳ ಅಭಿವೃದ್ಧಿಗೆ ಬದ್ಧವಾಗಿದ್ದು, ಗ್ರಂಥಾಲಯಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ತನ್ವೀರ್ ಸೇಠ್ ಹೇಳಿದರು.
ಇಲ್ಲಿಯ ಕಲಾಭವನದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಧಾರವಾಡ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಾಗೂ ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ವರ್ಷದಲ್ಲಿ 150 ಗ್ರಂಥಾಲಯ ಕಟ್ಟಡಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಆರ್.ಆರ್.ಎಲ್.ಎಫ್ .ನಡಿ ಕಟ್ಟಡ ನಿರ್ಮಾಣಕ್ಕೆ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಗ್ರಂಥಾಲಯ ಇಲಾಖೆಯ ನೇಮಕಾತಿ ನಿಯಮಗಳನ್ನು ಮಾರ್ಪಡಿಸಿ ಬದಲಾವಣೆ ಮಾಡಿ ಆರ್ಥಿಕ ಇಲಾಖೆಗೆ ಕಳುಹಿಸಿಕೊಡಲಾಗಿದೆ ಎಂದರು.
2016ರಲ್ಲಿ ಇಲಾಖೆಗೆ 10 ಕೋಟಿ ಅನುದಾನ ನೀಡಲಾಗಿದ್ದು, ಪ್ರಸ್ತುತ ವರ್ಷದಲ್ಲಿ ಇಲಾಖೆಗೆ 10 ಕೋಟಿ ಹಣ ಹಾಗೂ ಎಸ್‌ಇಪಿ ಮತ್ತು ಎಸ್‌ಟಿಪಿಗಳಲ್ಲಿ 5 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.. ಹಾವೇರಿ ಜಿಲ್ಲೆಯಲ್ಲಿ ಸರಿಯಾದ ರೀತಿ ಶಾಲಾ ಕಟ್ಟಡಗಳ ನಿರ್ವಹಣೆ ಮಾಡದ ಇಬ್ಬರು ಮುಖ್ಯಶಿಕ್ಷಕರು ಹಾಗೂ ಓರ್ವ ಬಿಆರ್‌ಸಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ 62 ಶಿಕ್ಷಕರ ಶಾಲೆಗಳ ಪೈಕಿ 37 ಶಾಲೆಗಳಿಗೆ ಗ್ರಂಥಾಲಯ ನೀಡಲಾಗಿದೆ. ರಾಷ್ಟ್ರೀಯ ಗ್ರಂಥಾ ಲಯ ಪ್ರಾಧಿಕಾರವು ದೇಶದ ಎಲ್ಲ ರಾಜ್ಯಗಳಲ್ಲಿ ಸಮೀಕ್ಷೆ ನಡೆ ಸಿದ್ದು ಕರ್ನಾಟಕದ ಗ್ರಂಥಾಲಯಗಳಿಗೆ ಪ್ರಥಮ ಸ್ಥಾನ ಲಭಿಸಿದ್ದು ಸಾಮಾನ್ಯದ ಮಾತಲ್ಲ ಎಂದರು. ಹಿರಿಯ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿದರು.
ಚಲನಚಿತ್ರ ನಟಿ ಮಯೂರಿ 2016ನೇ ಸಾಲಿನ ಗ್ರಂಥ ಸೂಚಿ ಸಿಡಿ ಬಿಡುಗಡೆ ಮಾಡಿದರು. ಮಾಜಿ ಶಿಕ್ಷಣ ಸಚಿವ ಬಸ ವ ರಾಜ ಹೊರಟ್ಟಿ, ಎ ಸ್. ಆರ್. ಗುಂಜಾಳ ಮಾತನಾಡಿದರು. ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ| ಸತೀಶ ಕುಮಾರ ಹೊಸಮನಿ,
ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ| ಶ್ರೀಕಂಠ ಕೂಡಿ ಗೆ, ಡಾ| ಪಿ.ವೈ. ರಾಜೇಂದ್ರಮಾರ, ಪಿ.ವಿ. ಕೊಣ್ಣೂರ, ರೇಣುಕಾ ಇಬ್ರಾಹಿಂಪುರ, ಡಿಡಿ ಪಿಐ ಎನ್. ಎಚ್. ನಾಗೂರ ಇದ್ದ ರು. ಡಾ| ಸತೀಶಕುಮಾರ ಹೊಸಮನಿ ಸ್ವಾಗತಿಸಿದರು. ಮಾಯಾ ಚಿಕ್ಕೇರೂರ ನಿರೂಪಿಸಿದರು. ಇದಕ್ಕೂ ಮುನ್ನ ನಗರ ಕೇಂದ್ರ ಗ್ರಂಥಾಲಯದಿಂದ ಕಲಾಭವನ ವರೆಗೂ ಓದಿನೆಡೆಗೆ ನಮ್ಮ ನಡಿಗೆ ಜಾಥಾ ನಡೆಸಲಾಯಿತು.