Advertisement
ತಾಲೂಕಾದ್ಯಂತ ಈಗಾಗಲೇ ದೇವಾಲಯ ಮತ್ತು ಕೆರೆಗಳ ಸರ್ವೆ ಮುಗಿದಿದ್ದು, ಗ್ರಾಮದಲ್ಲಿರುವ ಬಂಡಿದಾರಿ, ಕಾಳುದಾರಿ, ಸ್ಮಶಾನ ಹಾಗೂ ರಾಜಕಾಲುವೆಸರ್ವೆ ಕಾರ್ಯ ನಡೆಸಿ, ಒತ್ತುವರಿ ಕಂಡುಬಂದಲ್ಲಿತೆರವುಗೊಳಿಸುವ ಕಾರ್ಯ ನಡೆಸಬೇಕಿದೆ.ಕುಂದಾಣ ಹೋಬಳಿಯ ಗ್ರಾಮ ಪಂಚಾಯಿತಿಗಳ ಪೈಕಿ ಗ್ರಾಮಗಳಲ್ಲಿ ಸರಕಾರಿ ಸ್ಮಶಾನಗಳ ಜಾಗಗಳನ್ನು ಗುರುತಿಸಿದ್ದು, ಸರ್ವೆ ಕಾರ್ಯ ನಡೆಸಿ ಹದ್ದುಬಸ್ತು ಮಾಡುವ ಕೆಲಸಕ್ಕೆ ಮುಂದಾಗಲಾಗಿದೆ.
Related Articles
Advertisement
ಕುಂದಾಣ ಗ್ರಾಮದ 5 ಕಡೆಗಳಲ್ಲಿ ಸರ್ವೆ ನಂ.105,56, 83,85,92ರಲ್ಲಿ, ದೊಡ್ಡ ಚೀಮನಹಳ್ಳಿಗ್ರಾಮದ 2 ಕಡೆಗಳಲ್ಲಿ ಸರ್ವೆ ನಂ.80,1/5ರಲ್ಲಿ, ಅರಸನಹಳ್ಳಿ-ಪೆದ್ದನಹಳ್ಳಿ ಗ್ರಾಮಗಳ3 ಕಡೆಗಳಲ್ಲಿ ಸರ್ವೆ ನಂ.10, 32, 44ರಲ್ಲಿ, ನೆರಗನಹಳ್ಳಿ ಗ್ರಾಮದ 2 ಕಡೆ ಸರ್ವೆನಂ.49,69ರಲ್ಲಿ, ಲಿಂಗಧೀರಗೊಲ್ಲಹಳ್ಳಿಗ್ರಾಮದ 4 ಕಡೆಗಳಲ್ಲಿ ಸರ್ವೆ ನಂ.17, 29ಪಿ5,35, 37ರಲ್ಲಿ, ಸೂಲಕುಂಟೆ ಗ್ರಾಮದ 2ಕಡೆಗಳಲ್ಲಿ ಸರ್ವೆ ನಂ.10, 30ರಲ್ಲಿ, ದ್ಯಾವರಹಳ್ಳಿಗ್ರಾಮದ ಸರ್ವೆ ನಂ.43ರಲ್ಲಿ, ಬಚ್ಚಹಳ್ಳಿಗ್ರಾಮದ ಎರಡು ಕಡೆ, ಆಲೂರುದುದ್ದನಹಳ್ಳಿಗ್ರಾಮದ 3ಕಡೆ, ಬನ್ನಿಮಂಗಲ ಸರ್ವೆನಂ.46ರಲ್ಲಿ, ಪಂಡಿತಪುರ ಗ್ರಾಮದ ಸರ್ವೆನಂ.29, ವೆಂಕಟಾಪುರ ಗ್ರಾಮದ ಸರ್ವೆನಂ.17, ಸುಣಘಟ್ಟ, ಬನ್ನಿಮಂಗಲ ಅಮಾನಿಕೆರೆ,ಕೊಯಿರಾದಲ್ಲಿ 3 ಕಡೆ, ಬ್ಯಾಡರಹಳ್ಳಿ, ಮಾಯಸಂದ್ರ, ಚಿಕ್ಕಗೊಲ್ಲಹಳ್ಳಿ, ಶ್ಯಾನಪ್ಪನಹಳ್ಳಿ2 ಕಡೆ, ಇಂಡ್ರಸನಹಳ್ಳಿ, ಸಿಂಗ್ರಹಳ್ಳಿ 2 ಕಡೆ, ನಾಗಮಂಗಲ, ಚೌಡನಹಳ್ಳಿ ಗ್ರಾಮದ 2 ಕಡೆ,ಇಲತೊರೆ, ಬೆಟ್ಟೇನಹಳ್ಳಿ, ಅರುವನಹಳ್ಳಿ ಗ್ರಾಮದ 2 ಕಡೆ, ರಾಮನಾಥಪುರ, ರಬ್ಬನಹಳ್ಳಿಗ್ರಾಮದ 2 ಕಡೆ, ಬೆ„ರದೇನಹಳ್ಳಿ, ಬೀರಸಂದ್ರ,ದೊಡ್ಡಗೊಲ್ಲಹಳ್ಳಿ, ಚಿಕ್ಕೋಬನಹಳ್ಳಿ, ಕಾರಹಳ್ಳಿ, ತೈಲಗೆರೆ ಗ್ರಾಮದ 2 ಕಡೆ, ಕೆಂಪತಿಮ್ಮನಹಳ್ಳಿಗ್ರಾಮದ 2 ಕಡೆ, ಸೊಣ್ಣೇನಹಳ್ಳಿ,ಮುದ್ದನಾಯಕನಹಳ್ಳಿ, ಮೂಡಿಗಾನಹಳ್ಳಿ,ಮೀಸಗಾನಹಳ್ಳಿ, ವಿಶ್ವನಾಥಪುರ ಗ್ರಾಮದ 2ಕಡೆ, ಸೋಲೂರು, ದೇವಗಾನಹಳ್ಳಿ ಗ್ರಾಮದ 2ಕಡೆ, ಚಿನ್ನಕೆಂಪನಹಳ್ಳಿ, ಅರದೇಶನಹಳ್ಳಿ,ಜುಟ್ಟನಹಳ್ಳಿ, ತಿಂಡ್ಲು, ಜಾಲಿಗೆ ಗ್ರಾಮದ 2 ಕಡೆ,ಕಾಮೇನಹಳ್ಳಿ, ಚಿಕ್ಕಣ್ಣಹೊಸಹಳ್ಳಿ, ಮಾರಗೊಂಡನಹಳ್ಳಿ ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಯಬೇಕಿದೆ. ಸೋಲೂರು ಸರ್ವೆ ನಂ.135ರಲ್ಲಿನ 0-30ಗುಂಟೆ ಜಮೀನನ್ನು ದಿನ್ನೇ ಸೋಲೂರು ಗ್ರಾಮಕ್ಕೆ ಸ್ಮಶಾನಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸರ್ವೇ ಕಾರ್ಯಕ್ಕೆ ಸಾಕಷ್ಟು ವಿಳಂಬ: ಕುಂದಾಣ ಹೋಬಳಿವೊಂದರಲ್ಲಿಯೇ 80ಕ್ಕೂ ಹೆಚ್ಚು ಸ್ಮಶಾನದಜಾಗಗಳ ಸರ್ವೆ ಕಾರ್ಯ ಆಗಬೇಕಿದೆ. ತಾಲೂಕಿನಲ್ಲಿ24 ಜನ ಸರ್ವೇಯರ್ಗಳಿದ್ದಾರೆ. 8 ಜನ ಬೇರೆತಾಲೂಕಿಗೆ ನಿಯೋಜನೆ ಮೇರೆಗೆ ಹಾಕಲಾಗಿದೆ.ತಾಲೂಕು ಸರ್ವೇಯರ್ ಒಬ್ಬರೇ ಇರುವುದರಿಂದ ಸರ್ವೇ ಕಾರ್ಯಕ್ಕೆ ಸಾಕಷ್ಟು ವಿಳಂಬವಾಗುತ್ತಿದೆ ಎಂಬುವುದು ಆರೋಪ.
ಈಗಾಗಲೇ ಸರ್ಕಾರಿ ಸ್ಮಶಾನ ಜಾಗಗಳನ್ನು ಕಾಯ್ದಿರಿಸಲು ಸರ್ವೆ ಕಾರ್ಯವನ್ನುಚುರುಕುಗೊಳಿಸಲಾಗಿದೆ. ಆದರೆ ಸರ್ವೇಯರ್‌ಗಳ ಕೊರತೆಯಿಂದಾಗಿ ಸರ್ವೆ ಮಾಡಲಾಗುತ್ತಿಲ್ಲ. ಒತ್ತುವರಿಯಾದಂಥ ಸರ್ಕಾರಿ ಜಾಗಗಳನ್ನು ಹದ್ದುಬಸ್ತು ಮಾಡಲಾಗುತ್ತಿದೆ. – ಚಿದಾನಂದ್, ಆರ್‌ಐ, ಕುಂದಾಣ ನಾಡಕಚೇರಿ
ತಾಲೂಕಿನಲ್ಲಿ ಒಬ್ಬರೇ ಸರ್ವೇಯರ್‌ಇರುವುದು, ತಾಲೂಕಾದ್ಯಂತಓಡಾಡಬೇಕಾಗುತ್ತದೆ. ಗ್ರಾಮಗಳ ಪಟ್ಟಿಮಾಡಿಕೊಂಡು ಹಂತ ಹಂತವಾಗಿ ಸರ್ವೆಕಾರ್ಯ ಮಾಡಿಕೊಡಲಾಗುತ್ತಿದೆ. ತಾಲೂಕಿಗೆಮತ್ತೂಬ್ಬ ಸರ್ವೇಯರ್ ನೇಮಿಸಿದರೆ ಅನುಕೂಲವಾಗುತ್ತದೆ. – ಗಿರೀಶ್, ಸರ್ವೇಯರ್, ದೇವನಹಳ್ಳಿ