Advertisement

YouTube Channels: ನಕಲಿ ಸುದ್ದಿ ಹಬ್ಬಿಸುತ್ತಿದ್ದ 8 ಯೂಟ್ಯೂಬ್‌ ಚಾನೆಲ್‌ ಗೆ ನಿಷೇಧ.

02:37 PM Aug 09, 2023 | Team Udayavani |

ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಗೆ ಸಂಬಂಧಿಸಿದಂತೆ ಹಾಗೂ ವಿದ್ಯುನ್ಮಾನ ಮತಯಂತ್ರಗಳ ನಿಷೇಧಿಸುವಂತಹ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿದ್ದ ಎಂಟು ಯೂಟ್ಯೂಬ್‌ ಚಾನೆಲ್‌ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

Advertisement

ಇದನ್ನೂ ಓದಿ:Crime News: ಸವಣೂರು… ತೆಂಗಿನಕಾಯಿ ಕೀಳುವಾಗ ತೆಂಗಿನ ಮರದಿಂದ ಬಿದ್ದು ಮಹಿಳೆ ಮೃತ್ಯು

ಎಂಟು ಯೂಟ್ಯೂಬ್‌ ಚಾನೆಲ್‌ ಗಳು ಸೇರಿ ಒಟ್ಟು ೨.೩ ಕೋಟಿ ಸಬ್‌ ಸ್ಕ್ರೈಬರ್‌ ಗಳನ್ನು ಹೊಂದಿದ್ದು, ಈ ಚಾನೆಲ್‌ ಗಳು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿರುವ ಕಾರಣ ನಿಷೇಧಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಯಹಾ ಸಚ್‌ ದೇಖೋ, ಕ್ಯಾಪಿಟಲ್‌ ಟಿವಿ, ಸರ್ಕಾರಿ ವ್ಲೋಗ್‌, ಅರ್ನ್‌ ಟೆಕ್‌ ಇಂಡಿಯಾ, ಕೆಪಿಎಸ್‌ ನ್ಯೂಸ್‌, ಎಜ್ಯುಕೇಶನಲ್‌ ದೋಸ್ತ್‌, ವರ್ಲ್ಡ್‌ ಬೆಸ್ಟ್‌ ನ್ಯೂಸ್‌ ಮತ್ತು ಎಪಿಎನ್‌ 9 ನ್ಯೂಸ್‌ ಯೂಟ್ಯೂಬ್‌ ಚಾನೆಲ್‌ ಗಳು ಸುಳ್ಳು ಸುದ್ದಿ ಹರಡುತ್ತಿರುವುದು ಫ್ಯಾಕ್ಟ್‌ ಚೆಕ್‌ ನಲ್ಲಿ ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.

ವರ್ಲ್ಡ್‌ ಬೆಸ್ಟ್‌ ನ್ಯೂಸ್‌ ಯೂಟ್ಯೂಬ್‌ ಚಾನೆಲ್‌ 1.7 ಮಿಲಿಯನ್‌ ಗೂ ಅಧಿಕ ಸಬ್ಸ್‌ ಕ್ರೈಬರ್‌ ಗಳನ್ನು ಹೊಂದಿದ್ದು, 18 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ. ಈ ಚಾನೆಲ್‌ ಭಾರತೀಯ ಸೇನೆ ಬಗ್ಗೆ ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಎಜ್ಯುಕೇಶನಲ್‌ ದೋಸ್ತ್‌ ಯೂಟ್ಯೂಬ್‌ ಚಾನೆಲ್‌ 3.43 ಕೋಟಿಗೂ ಅಧಿಕ ಸಬ್ಸ್‌ ಕ್ರೈಬರ್‌ ಅನ್ನು ಹೊಂದಿದ್ದು, 23 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದ್ದು, ಇದು ಸರ್ಕಾರಿ ಯೋಜನೆಗಳ ಬಗ್ಗೆ ನಕಲಿ ಮಾಹಿತಿ ನೀಡುತ್ತಿತ್ತು. ಎಸ್‌ ಪಿಎನ್‌ 9ನ್ಯೂಸ್‌ ಯೂಟ್ಯೂಬ್ 4.8 ಮಿಲಿಯನ್‌ ಗೂ ಅಧಿಕ ಸಬ್ಸ್‌ ಕ್ರೈಬರ್‌ ಹೊಂದಿದ್ದು, 189 ಕೋಟಿ ವೀಕ್ಷಣೆ ಪಡೆದಿದ್ದು, ಇದು ರಾಷ್ಟ್ರಪತಿ, ಪ್ರಧಾನಿ ಹಾಗೂ ಕೇಂದ್ರ ಸಚಿವರ ವಿರುದ್ಧ ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತಿತ್ತು ಎಂದು ವರದಿ ಹೇಳಿದೆ.

ಸರ್ಕಾರಿ ವ್ಲೋಗ್‌ 4.5 ಮಿಲಿಯನ್‌ ಗೂ ಅಧಿಕ ಸಬ್ಸ್‌ ಕ್ರೈಬರ್‌ ಹೊಂದಿದ್ದು, 9.4 ಕೋಟಿ ವೀಕ್ಷಣೆ ಪಡೆದಿದ್ದು, ಇದು ಸರ್ಕಾರಿ ಯೋಜನೆಗಳ ಕುರಿತು ಸುಳ್ಳು ಸುದ್ದಿ ಹರಡುತ್ತಿತ್ತು. ಕೆಪಿಎಸ್‌ ನ್ಯೂಸ್‌ ಯೂಟ್ಯೂಬ್‌ ಚಾನೆಲ್‌ 1 ಮಿಲಿಯನ್‌ ಗೂ ಅಧಿಕ ಸಬ್ಸ್‌ ಕ್ರೈಬರ್‌ ಹೊಂದಿದ್ದು, 13 ಕೋಟಿ ವೀವ್ಸ್‌ ಪಡೆದಿದೆ. ಈ ಚಾನೆಲ್‌ ಅಡುಗೆ ಅನಿಲ ಸಿಲಿಂಡರ್‌, ಪೆಟ್ರೋಲ್‌ ಬೆಲೆ ಕುರಿತು ನಕಲಿ ಸುದ್ದಿ ಪ್ರಸಾರ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಪಿಟಲ್‌ ಟಿವಿ ಯೂಟ್ಯೂಬ್‌ ಚಾನೆಲ್‌ 3.5 ಮಿಲಿಯನ್‌ ಗೂ ಅಧಿಕ ಸಬ್ಸ್‌ ಕ್ರೈಬರ್‌ ಹೊಂದಿದ್ದು, 160 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ. ಇದು ಪ್ರಧಾನ ಮಂತ್ರಿ, ಸರ್ಕಾರ ಹಾಗೂ ಪಶ್ಚಿಮಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಿಕೆ ಬಗ್ಗೆ ಸುಳ್ಳು ಸುದ್ದಿಯನ್ನು ಹರಡುತ್ತಿತ್ತು.

ಯಹಾ ಸಚ್‌ ದೇಖೋ ಯೂಟ್ಯೂಬ್‌ ಚಾನೆಲ್‌ 3 ಮಿಲಿಯನ್‌ ಗೂ ಅಧಿಕ ಸಬ್ಸ್‌ ಕ್ರೈಬರ್‌ ಹೊಂದಿದ್ದು, 100 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಪಡೆದಿದ್ದು, ಇದು ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್‌ ಚೀಫ್‌ ಜಸ್ಟೀಸ್‌ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿತ್ತು ಎಂದು ವರದಿ ತಿಳಿಸಿದೆ.

Earn India Tech ಯೂಟ್ಯೂಬ್‌ ಚಾನೆಲ್‌ 31,000 ಸಬ್ಸ್‌ ಕ್ರೈಬರ್‌ ಗಳನ್ನು ಹೊಂದಿದ್ದು, 3.6 ಮಿಲಿಯನ್‌ ವೀಕ್ಷಣೆ ಪಡೆದಿದ್ದು, ಇದು ಆಧಾರ್‌ ಕಾರ್ಡ್‌ ಮತ್ತು ಪಾನ್‌ ಕಾರ್ಡ್‌ ಬಗ್ಗೆ ನಕಲಿ ಸುದ್ದಿಯನ್ನು ಬಿತ್ತರಿಸುತ್ತಿತ್ತು ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next