Advertisement

ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವಲ್ಲಿ ಸರ್ಕಾರ, ಬಿಬಿಎಂಪಿ ವಿಫಲ: ರಾಮಲಿಂಗ ರೆಡ್ಡಿ

05:48 PM Jun 06, 2020 | keerthan |

ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವಲ್ಲಿ ಸರ್ಕಾರ ಮತ್ತು ಬಿಬಿಎಂಪಿ ವಿಫಲವಾಗಿವೆ ಎಂದು ಮಾಜಿ ಸಚಿವ ರಾಮಲಿಂಗ ರೆಡ್ಡಿ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಸೇರಿ ಏಳು ಲಕ್ಷ ಆಹಾರದ ಕಿಟ್ ನೀಡಿದೆ. ಆದರೆ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಮಾತ್ರ ಕಡಿಮೆ ನೀಡಿದ್ದಾರೆ. 10 ಜನ ಶಾಸಕರ ಕ್ಷೇತ್ರಗಳಿಗೆ ಕೇವಲ 50 ಸಾವಿರ ಕಿಟ್ ನೀಡಿದರು. ಉಳಿದ ಕಿಟ್ ಗಳನ್ನು ಬಿಜೆಪಿ ಕಾರ್ಯಕರ್ತರು ಹಂಚಿಕೊಂಡರು. ಕಾಂಗ್ರೆಸ್ ನಿಂದ ಸುಮಾರು 10 ಲಕ್ಷ ಆಹಾರದ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಯಿತು ಎಂದರು.

ವಲಸೆ ಕಾರ್ಮಿಕರನ್ನು ಸರ್ಕಾರ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅನೇಕ ಕಾರ್ಮಿಕರು ಊರುಗಳಿಗೆ ತೆರಳಲು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈಗ ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೇ 31ರವರೆಗೂ ಲಾಕ್ ಡೌನ್ ಬಿಗಿಯಾಗಿರಬೇಕಿತ್ತು. ಬೇಗ ಸಡಿಲಿಕೆ ಮಾಡಿರುವುದರಿಂದ ರಾಜ್ಯದಲ್ಲಿ ಸೋಂಕು ಸಾಮುದಾಯಿಕವಾಗಿ ಹರಡುತ್ತಿದೆ ಎಂದರು.

ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ಸರ್ಕಾರ ಅವಸರ ಮಾಡುವುದು ಬೇಡ. ಇನ್ನೂ ಎರಡು ಮೂರು ತಿಂಗಳು ಶಾಲೆಗಳನ್ನು ತೆರೆಯುವುದು ಬೇಡ. ಬೇರೆ ದೇಶಗಳಲ್ಲಿ ಶಾಲೆ ಪ್ರಾರಂಭವಾದ ನಂತರ ಮಕ್ಕಳಿಗೆ ಕೋವಿಡ್-19 ಸೋಂಕು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಶಾಲೆ ತೆರೆಯಲು ಅವಸರ ಬೇಡ ಎಂದು ಹೇಳಿದರು.

ಲಾಕ್ ಡೌನ್ ಸಮಯದಲ್ಲಿ ಕಾಂಗ್ರೆಸ್ ನಿಂದ 5.85 ಲಕ್ಷ ಮಾಸ್ಕ್, 93 ಲಕ್ಷ ಆಹಾರ ಪ್ಯಾಕೆಟ್, 10ಲಕ್ಷ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು. ರೈತರಿಗೆ ತೊಂದರೆ ಆಗಿರುವುದನ್ನು ಪರಿಹರಿಸಲು 1312 ಟನ್ ತರಕಾರಿ ಖರೀದಿಸಿ ಜನರಿಗೆ ಹಂಚಿಕೆ ಮಾಡಲಾಗಿದೆ ಎಂದರು.

Advertisement

ರಾಜ್ಯಸಭೆಗೆ ಮಲ್ಲಿಕಾರ್ಜುನ್ ಖರ್ಗೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಖರ್ಗೆ ಅವರನ್ನು ಹೈಕಮಾಂಡ್ ಅಂತಿಮ ಮಾಡಿದೆ. ಏಕಾಏಕಿ ಘೋಷಣೆ ಮಾಡಿದೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಈಗೆಲ್ಲ ಮೊಬೈಲ್ ಇದೆ ಅದರಲ್ಲಿಯೇ ಅಭಿಪ್ರಾಯ ಕೇಳುತ್ತಾರೆ. ಖರ್ಗೆ ಹೆಸರು ಬಂದ ಬಳಿಕ ಅದೇ ಅಂತಿಮ ಎಂದರು.

ಖರ್ಗೆ ಅವರು ಉತ್ತಮ ಸಂಸದೀಯ ಪಟು.  ಅಂತವರು ಸಂಸತ್ ಮತ್ತು ರಾಜ್ಯಸಭೆಯಲ್ಲಿ ಇರಬೇಕು. ಬಿಜೆಪಿ ಅವರು ಅವರನ್ನ ಟಾರ್ಗೆಟ್ ಮಾಡಿ ಸೋಲಿಸಿತು .ಆದರೆ ನೆಹರು, ವಾಜಪೇಯಿ ಅವರನ್ನು ಲೋಕಸಭೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು. ನಿಮ್ಮಂಥವರು ರಾಜಕಾರಣದಲ್ಲಿ ಇರಬೇಕು ಅಂತ ಹೇಳಿದ್ದರು. ಆಡಳಿತ ಮತ್ತು ವಿಪಕ್ಷದ ನಡುವೆ ಸ್ಪರ್ಧೆ ಆ ರೀತಿ ಇರಬೇಕು. ಸರ್ಕಾರ ಟೀಕೆ ಮಾಡ್ತಾರೆ ಅಂತ ಸೋಲಿಸುವ ರಾಜಕಾರಣ ಈಗ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next