Advertisement
ಶ್ರದ್ಧೆ-ಭಕ್ತಿಯಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮಠ ಮಾನ್ಯಗಳ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Related Articles
Advertisement
ಇತ್ತೀಚಿನ ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಹಲವು ಸಮು ದಾಯಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯ ಗಳಲ್ಲಿ ಮಠಗಳು ಸ್ಥಾಪನೆಗೊಂಡು ಜನರನ್ನು ಜಾಗೃತಿಗೊಳಿಸುತ್ತಿವೆ.ಜತೆ ಜತೆಗೆ ಶಿಕ್ಷಣ-ಅನ್ನದಾನಕ್ಕೆ ಮುಂದಾಗುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿವೆ. ಸರ್ಕಾರ ಮಾಡಬೇಕಾದ ಕೆಲಸ ಗಳನ್ನು ಮಠಗಳು ಮಾಡುತ್ತಿವೆ. ಹಳ್ಳಿಯಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿವರೆಗೆ ಶಿಕ್ಷಣ ನೀಡುತ್ತಿವೆ. ಸ್ವಾಮೀಜಿಗಳು ಭಿಕ್ಷೆ ಎತ್ತಿ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿದ್ದಾರೆ. ಶೈಕ್ಷಣಿಕ ಸೇವೆಯಲ್ಲಿ ತೊಡಗಿರುವ ಮಠಗಳನ್ನು ಗುರುತಿಸಿ ಅವರ ಸೇವೆಗಳನ್ನು ಮತ್ತಷ್ಟು ಬಲಗೊಳಿ ಸಲು, ಅವುಗಳ ಬೇಕು-ಬೇಡಗಳನ್ನುಈಡೇರಿಸಲು ಮಠಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇದರಿಂದ ಸಮಾಜಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ನೀನು ನಂಬರ್ ಒನ್ ಆಗಿ ಗೆಲ್ತಿಯಾ ಎಂದಿದ್ರು ಪೂಜ್ಯರು
ಹಾಲಕೆರೆ ಮಠದ ಮೇಲೆ ಭಕ್ತ ಸಮೂಹ ಇಟ್ಟಿರುವ ಭಕ್ತಿಯಲ್ಲಿ ಆಗಾಧ ಶಕ್ತಿ ಅಡಗಿದೆ. ಅದೇ ಶಕ್ತಿ ನಮ್ಮನ್ನು ಇಲ್ಲಿಯವರೆಗೆ ಕರೆ ತಂದಿದೆ. ನಾನು ಮೊದಲ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಶ್ರೀ ಮಠಕ್ಕೆ ಭೇಟಿ ನೀಡಿದ್ದೆ. ಆಗ ಪೂಜ್ಯರು ನೀನು ನಂಬರ್ ಒನ್ ಆಗಿ ಗೆಲ್ತಿಯಾ ಅಂತ ಆಶೀರ್ವಾದ ಮಾಡಿದ್ದರು. ಅದರಂತೆ ನಾನು ಗೆಲ್ಲುತ್ತಲೇ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಮಠ ಹಾಗೂ ಪೂಜ್ಯರೊಂದಿಗಿನ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದರು. ತಲಾ ಆದಾಯ: ರಾಜ್ಯ ನಂ.1 ಆಗ್ಬೇಕು
ಆರ್ಥಿಕ ಸಮಸ್ಯೆಯಿಂದ ಉನ್ನತ ಶಿಕ್ಷಣದಿಂದ ಹೊರಗುಳಿ ಯುವ ರೈತರ ಮಕ್ಕಳಿಗೆ ಶಿಷ್ಯವೇತನ ಪ್ರಕಟಿಸಲಾಗಿದೆ.ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲು ಸರ್ಕಾರ 1 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಮಕ್ಕಳನ್ನು ಕೃಷಿ ಕೆಲಸ, ಕಾರ್ಯಗಳಿಗೆ ಸೀಮಿತಗೊಳಿಸದೆ ಉನ್ನತ ಶಿಕ್ಷಣ ಕಲ್ಪಿಸಬೇಕು. ಮಕ್ಕಳು ಮುಖ್ಯವಾಹಿನಿಗೆ ಬಂದಾಗ ಕುಟುಂಬ ಹಾಗೂ ರಾಜ್ಯದ ಅಭಿವೃದ್ಧಿಯ ಕನಸು ಸಾಕಾರಗೊಳ್ಳುತ್ತದೆ. ದೇಶದಲ್ಲಿ ತಲಾ ಆದಾಯದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಅದು ಶೇ.35 ರಿಂದ 38 ಜನರಿಗೆ ಸೀಮಿತವಾಗಿದೆ. ಇನ್ನುಳಿದವರ ತಲಾ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಯಾವುದೇ ಸಮಸ್ಯೆ ಎದುರಾದರೂ ಅವುಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ತಲಾ ಆದಾಯದಲ್ಲಿ ರಾಜ್ಯವನ್ನು ನಂ.1ಸ್ಥಾನಕ್ಕೆ ತಲುಪಿಸುವ ಸಂಕಲ್ಪ ಮಾಡಿದ್ದಾಗಿ ಸಿಎಂ ತಿಳಿಸಿದರು. ಹಾಲಕೆರೆಯ ಡಾ|ಅಭಿನವ ಅನ್ನದಾನ ಮಹಾ ಸ್ವಾಮಿಗಳಿಗೆ ರಾಜ್ಯ ಸರ್ಕಾರದಿಂದ “ಬಸವ ಪುರಸ್ಕಾರ’ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಶ್ರೀಮಠದ ಶಾಲೆ, ವಸತಿ ನಿಲಯಕ್ಕಾಗಿ ಸ್ಥಳೀಯ ಶಾಸಕ ಕಳಕಪ್ಪ ಬಂಡಿ ಕೋರಿದ್ದಕ್ಕಿಂತ ಹೆಚ್ಚಿನ ಅನುದಾನ ಕಲ್ಪಿಸಲಾಗುತ್ತದೆ. ಪೂಜ್ಯರ ಮಾರ್ಗದರ್ಶನದಲ್ಲಿ ಭಕ್ತಿಯ ಮಾರ್ಗದಲ್ಲಿ ಮುನ್ನಡೆಯಬೇಕಿದೆ.
ಬಸವರಾಜ
ಬೊಮ್ಮಾಯಿ, ಮುಖ್ಯಮಂತ್ರಿ