ಈಗಾಗಲೇ ಅಧ್ಯಯನ ನಡೆಸುತ್ತಿದ್ದು, ವೈಜ್ಞಾನಿಕ ಸಲಹೆಗಳನ್ನು ಸ್ವೀಕರಿಸಲು ನೋಡುತ್ತಿದ್ದೇವೆ ಎಂದು ಇಲಾಖೆಯ ಕಾರ್ಯದರ್ಶಿ ಅಶುತೋಶ್ ಶರ್ಮಾ ಹೇಳಿ ದ್ದಾರೆ. ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಅವರು, ಈಶಾನ್ಯ ರಾಜ್ಯಗಳಿಗೆ ಪ್ರತ್ಯೇಕ ಟೈಮ್‌ಝೋನ್ ನೀಡು ವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಯನ ನಡೆಸುವಂತೆ ಸೂಚಿಸಲಾಗಿದ್ದು, ಈ ವರದಿ ಬಂದ ಮೇಲೆ 2 ಟೈಮ್‌ಝೋನ್ ಮಾಡುವ ಬಗ್ಗೆ ನಿರ್ಧ ರಿಸಲಾಗುವುದು ಎಂದಿದ್ದಾರೆ ಶರ್ಮಾ.
Advertisement
ಈಶಾನ್ಯ ರಾಜ್ಯಗಳಿಗೂ, ಉಳಿದ ರಾಜ್ಯಗಳಿಗೂ ಭಾರಿ ವ್ಯತ್ಯಾಸವಿದೆ. ಈ ಭಾಗದಲ್ಲಿ ಸೂರ್ಯ ಬೇಗ ಮೂಡುತ್ತಾನೆ, ಹಾಗೆಯೇ ಬೇಗನೆ ಮುಳುಗುತ್ತಾನೆ. ಆದರೆ, ಭಾರತದ ಉಳಿದ ಸಮಯದಂತೆಯೇ ಇಲ್ಲೂ ಕಚೇರಿ, ಶಾಲೆ ಎಲ್ಲವೂ ಆರಂಭವಾ ಗುತ್ತವೆ. ಹೀಗಾಗಿ ಅವರು ಮಧ್ಯಾಹ್ನ ಶಾಲೆ ಅಥವಾ ಕಚೇರಿಗೆ ಬಂದು, ತಡರಾತ್ರಿ ಮನೆಗೆ ಹೋದಂತೆ ಆಗುತ್ತದೆ. ಸೂರ್ಯ ಮುಳು ಗಿದ ಮೇಲೂ ಕಚೇರಿ, ಶಾಲಾ ಕಾಲೇಜುಗಳು ಸೇರಿ ಇನ್ನಿತರೆ ಚಟುವಟಿಕೆಗಳು ಇರುವುದ ರಿಂದ ವಿದ್ಯುತ್ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಈಶಾನ್ಯ ರಾಜ್ಯಗಳಿಗೇ ಬೇರೊಂದು ಟೈಮ್‌ಝೋನ್ ಕೊಟ್ಟರೆ ಸಮಯ, ವಿದ್ಯುತ್ ಉಳಿತಾಯವಾಗುತ್ತದೆ ಎಂದು ಈ ರಾಜ್ಯಗಳ ನಾಯಕರು ಹೇಳಿದ್ದಾರೆ. ಇದಷ್ಟೇ ಅಲ್ಲ, ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದಲ್ಲೂ ಸೂರ್ಯ ಹುಟ್ಟುವ ಮತ್ತು ಮುಳುಗುವ ಸಮಯ ಬೇರೆ ಬೇರೆಯಾಗಿಯೇ ಇದೆ.