Advertisement

ಖಾಸಗಿ ಆಸ್ಪತ್ರೆ ಬಾಗಿಲಿಗೆ ಸರ್ಕಾರಿ ಆ್ಯಂಬುಲೆನ್ಸ್‌ಗಳು!

01:23 PM Jun 01, 2023 | Team Udayavani |

ನೆಲಮಂಗಲ: ಜನಸಾಮಾನ್ಯರಿಗೆ ತುರ್ತು ಪರಿಸ್ಥಿತಿ ಯಲ್ಲಿ ಅನುಕೂಲವಾಗಲಿ ಎಂಬ ಹಿತದೃಷ್ಟಿಯಿಂದ ಸರಕಾರ ಕೋಟಿ ಕೋಟಿ ಖರ್ಚು ಮಾಡಿ 108 ಆ್ಯಂಬುಲೆನ್ಸ್‌ಗಳನ್ನು ಸರಕಾರಿ ಆಸ್ಪತ್ರೆಯ ಸೇವೆಗೆ ನಿಯೋಜನೆ ಮಾಡಿದ್ದರೆ ಸರ್ಕಾರಿ ಸೇವೆ ಮಾಡುವು ದನ್ನು ಬಿಟ್ಟು ಖಾಸಗಿ ಆಸ್ಪತ್ರೆಗಳ ಬಾಗಿಲಿಗೆ ಹೋಗುವ ಮೂಲಕ ಅಕ್ರಮ ದಂಧೆಗೆ ಮುಂದಾಗಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಆ್ಯಂಬುಲೆನ್ಸ್‌ಗಳು ರಸ್ತೆಯಲ್ಲಿ ಅಪಘಾತವಾದ ಸ್ಥಳ ದಿಂದ ನೇರವಾಗಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯುವ ಬದಲಿಗೆ ಸಮೀಪವಿರುವ ಕೆಲವು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡುತ್ತಿದ್ದಾರೆ, ಅಪಘಾತಕ್ಕೊಳಗಾದವರು ಸರಕಾರಿ ಆಸ್ಪತ್ರೆಯ ಸೇವೆ ಬಯಸಿದರೂ ಕೂಡ ಅಲ್ಲಿ ಚಿಕಿತ್ಸೆ ಸರಿ ಇಲ್ಲ, ವೈದ್ಯರಿಲ್ಲ ತುರ್ತು ಸಮಸ್ಯೆ ಎಂಬ ನೆಪನ್ನು ಹೇಳುವ 108 ಆ್ಯಂಬುಲೆನ್ಸ್‌ ಚಾಲಕರೇ ಖಾಸಗಿ ಆಸ್ಪತ್ರೆಗೆ ಸೇರಿಸುತ್ತಿದ್ದಾರೆ. ಒಬ್ಬ ರೋಗಿಯನ್ನು ಸೇರಿಸಿದರೆ 108 ಆ್ಯಂಬುಲೆನ್ಸ್‌ಗಳ ಚಾಲಕರಿಗೆ ಸಿಬ್ಬಂದಿಗಳಿಗೆ ಖಾಸಗಿ ಆಸ್ಪತ್ರೆ ಯವರು ಇಂತಿಷ್ಟು ಕಮಿಷನ್‌ ನೀಡುತ್ತಾರೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳೀ ಬರುತ್ತಿವೆ .ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಕಂಡು ಕಾಣದಂತೆ ಇರುವುದಲ್ಲದೆ ಪ್ರಶ್ನೆಮಾಡಿ ದವರಿಗೆ ಸೂಕ್ತ ದಾಖಲೆಗಳು ಸಿಗುತ್ತಿಲ್ಲ ಎಂಬ ಮಾತನ್ನು ತಾಲೂಕು ಆರೋಗ್ಯಾಧಿಕಾರಿಗಳೇ ಹೇಳುತ್ತಿರುವುದು ವ್ಯವಸ್ಥೆ ಯನ್ನು ಪ್ರಶ್ನೆ ಮಾಡಿದಂತಾಗಿದೆ.

ದೊಡ್ಡ ದಂಧೆಯ ಆರೋಪ : ನೆಲಮಂಗಲ ತಾಲೂಕಿನಲ್ಲಿ 2ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಸೇರಿ ದಂತೆ ಜಿಲ್ಲಾ ಹೆದ್ದಾರಿಗಳು ಅನೇಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕಾರಣ ವಾಹನ ದಟ್ಟಣೆ ಹೆಚ್ಚಾಗಿದ್ದು, ವರ್ಷಕ್ಕೆ ಸುಮಾರು 2 ಸಾವಿರಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ನಡೆಯುತ್ತವೆ, ಇದರಲ್ಲಿ ಕೆಲವು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದರೆ ಕೆಲವು ರಾಜಿಸಂಧಾನದಲ್ಲಿ ಮುಕ್ತಾಯವಾಗುತ್ತಿವೆ, ನಗರದಸಾರ್ವಜನಿಕ ಆಸ್ಪತ್ರೆಗೆ ತಿಂಗಳಿಗೆ ಕೇವಲ 65ರಿಂದ 70 ಅಪಘಾತ ಪ್ರಕರಣದಲ್ಲಿ ದಾಖಲಾಗುತ್ತಿದ್ದು ಸೋಂಪುರ, ತ್ಯಾಮಗೊಂಡ್ಲುವಿನಲ್ಲಿ ಐದಾರು ಪ್ರಕರಣ ಮಾತ್ರ ದಾಖಲಾಗುತ್ತಿವೆ, 108 ಆ್ಯಂಬುಲೆನ್ಸ್‌ಗಳು ಅಪಘಾತವಾದ ಸ್ಥಳದಿಂದ ಗಾಯಗೊಂಡವರನ್ನು ಕರೆತಂದು ಸಾರ್ವಜನಿಕ ಆಸ್ಪತ್ರೆಯ ಮೂಲಕ ಪ್ರವೇಶ ಪಡೆದು ನಂತರ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲು ಮಾಡುತ್ತಿದ್ದಾರೆ ಎಂಬ ಬಲವಾದ ಆರೋಪ ಕೇಳಿಬಂದಿದೆ. ಇದಕ್ಕೆ ಸ್ಥಳೀಯ ಆಸ್ಪತ್ರೆಗಳ ವೈದ್ಯರು, ಆ್ಯಂಬುಲೈನ್ಸ್‌ ಚಾಲಕ ಮತ್ತು ಕೆಲ ಸಿಬ್ಬಂದಿ ಖಾಸಗಿ ಆಸ್ಪತ್ರೆಯ ಜತೆ ಕೈಜೋಡಿಸಿ ದೊಡ್ಡ ದಂಧೆ ಮಾಡುತ್ತಿ ದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ವಿಡಿಯೋ ವೈರಲ್‌: ನೆಲಮಂಗಲ ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಪಕ್ಕದಲ್ಲಿರುವ ಖಾಸಗಿ ಕೇರ್‌ ಏಷ್ಯಾ ಆಸ್ಪತ್ರಗೆ 108 ಆ್ಯಂಬುಲೆನ್ಸ್‌ನಿಂದ ಕರೆತಂದ ಗಾಯಾಳುಗಳನ್ನು ಸೇರಿಸಿರುವುದು ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್‌ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಇದರ ಬಗ್ಗೆ ಮೇಲಾಧಿಕಾರಿಗಳು ಪ್ರಾಮಾಣಿಕ ತನಿಖೆ ಮಾಡಬೇಕು ಎಂದು ಒತ್ತಾಯ ಕೇಳಿ ಬಂದಿದೆ.

ಜಿಲ್ಲಾಧಿಕಾರಿಗಳೇ ಮೌನವೇಕೆ ?: 108 ಆ್ಯಂಬುಲೆನ್ಸ್‌ ಖಾಸಗಿ ಆಸ್ಪತ್ರೆಯ ಜತೆಗಿನ ದಂಧೆಯ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಲತಾರವರಿಗೆ ಮಾಹಿತಿ ಹೋಗಿ ತಕ್ಷಣ ಡಿಎಚ್‌ಓಗೆ ಮಾಹಿತಿ ನೀಡಿ ಕ್ರಮಕೈಗೊಳ್ಳಲು ಸೂಚನೆ ನೀಡಿದರು ಪ್ರಯೋಜನವಾಗಿಲ್ಲ, ಡಿಎಚ್‌ಓರವರು 108ಆ್ಯಂಬುಲೆನ್ಸ್‌ಗಳು ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂಬ ಮಾತು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಜಿಲ್ಲಾಧಿಕಾರಿ ಈ ಪ್ರಕರಣದ ಬಗ್ಗೆ ಮೌನ ಮುರಿದು ಕ್ರಮಕ್ಕೆ ಮುಂದಾಗದಿದ್ದರೆ ಬಡವರು ಹಾಗೂ ಮಧ್ಯಮವರ್ಗದ ಜನರು ಹಣಸುಲಿಗೆ ಮಾಡುವ ದೊಡ್ಡಜಾಲವೇ ಬೆಳೆಯಲಿದೆ.

Advertisement

108 ಚಾಲಕರನ್ನು ಕೇಳುವವರಿಲ್ಲ : 108ಆ್ಯಂಬುಲೆನ್ಸ್‌ಗಾಗಿ ಕರೆ ಮಾಡಿದ ನಂತರ ತಾಲೂಕಿನ ಆ್ಯಂಬುಲೆನ್ಸ್‌ ಚಾಲಕನಿಗೆ ಮಾಹಿತಿ ತಿಳಿಯುತಿದ್ದಂತೆ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್‌ಗಳು ಸ್ಥಳಕ್ಕೆ ಹೋಗಲಿವೆ, 108 ಆ್ಯಂಬುಲೆನ್ಸ್‌ ಚಾಲಕರು ದುರು ದ್ದೇಶದಿಂದ ತಡ ಮಾಡಿ ಹೋಗಿ ಅಲ್ಲಿ ರೋಗಿ ಇರಲಿಲ್ಲ ಎಂಬ ನೆಪ ಹೇಳುವುದು ಒಂದು ಕಡೆಯಾದರೆ, ಸಂಜೆಯ ನಂತರ ನಡೆಯುವ ಪ್ರಕರಣಗಳಲ್ಲಿ 108 ಆ್ಯಂಬುಲೆನ್ಸ್‌ಗಳೇ ಖಾಸಗಿ ಆಸ್ಪತ್ರೆ ಬಾಗಿಲಿಗೆ ಹೋಗಿ ಗಾಯಗೊಂಡವರನ್ನು ವರ್ಗಾಹಿಸುವುದು ಸರ್ವೆಸಾಮಾನ್ಯವಾಗಿ ಬಿಟ್ಟಿದೆ. ಇದರ ಬಗ್ಗೆ ಸ್ಥಳೀಯ ಆಸ್ಪತ್ರೆಯ ಎಲ್ಲಾ ಅಧಿಕಾರಿಗಳಿಗೂ ತಿಳಿದಿದ್ದರೂ 108 ಚಾಲಕರು ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂದು ಅವರನ್ನು ಕೇಳುವವರಿಲ್ಲದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next