ಕುಷ್ಟಗಿ: ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯ ತುರ್ತು ಸ್ಥಿತಿಯಲ್ಲಿ ರೋಗಿಗಳ ಸಂಬಂಧಿಕರೇ ಸ್ಟೇಚರ್ ನಲ್ಲಿ ತಳ್ಳಿಕೊಂಡು ಹೋದ ಪ್ರಸಂಗ ಬೆಳಕಿಗೆ ಬಂದಿದೆ.
ಕುಷ್ಟಗಿಯ ಮಯೂರಿ ರಾಚಪ್ಪ ಮಾಟಲದಿನ್ನಿ ಗೃಹಿಣಿಯೊಬ್ಬರು ಮನೆಯ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದರು. ತೀವ್ರ ನೋವಿನ ಯಾತನೆಯಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ರೋಗಿಯನ್ನು ಸಿಟಿ ಸ್ಕ್ಯಾನಿಂಗ್ ಗೆ ಕರೆದೊಯ್ಯಲು ಆಸ್ಪತ್ರೆಯ ಸಿಬ್ಬಂದಿ ಯಾರು ಮುಂದೆ ಬರಲಿಲ್ಲ.
ಆಸ್ಪತ್ರೆಯಲ್ಲಿ ನವರಾತ್ರಿ ದೇವಿ ಪೂಜೆಯ ಸಂಭ್ರಮದಲ್ಲಿ ಅಲ್ಲಿನ ಸಿಬ್ಬಂದಿ ಇದ್ಯಾವುದು ಲೆಕ್ಕಿಸಲಿಲ್ಲ. ಕಾರಣ ವಿಚಾರಿಸಿದರೆ ಊಟಕ್ಕೆ ಹೋಗಿದ್ದೇವೆ ಎಂಬುದು ಗೊತ್ತಾಗಿದೆ. ಆಸ್ಪತ್ರೆಯ ಸಿಬ್ಬಂದಿ ಬದಲಿಗೆ ಸಂಬಂಧಿಕರೇ ಸ್ಟೇಚರ್ ನಲ್ಲಿ ತಳ್ಳಿಕೊಂಡೇ ಸ್ಟೇಚರ್ ನಲ್ಲಿ ತಳ್ಳಿಕೊಂಡು ಎರಡನೇ ಅಂತಸ್ತಿನ ವಿಶೇಷ ಕೊಠಡಿ ಗೆ ಕರೆದೊಯ್ಯಲಾಗಿದೆ.
ಈ ಬೆಳವಣಿಗೆಯಲ್ಲಿ ತುರ್ತು ಸಂದರ್ಭದಲ್ಲಿ ರೋಗಿಗಳ ಅಗತ್ಯ ಚಿಕಿತ್ಸೆಗೆ ಕರೆದೊಯ್ಯದೇ ರೋಗಿಯ ಸ್ಥಿತಿ ಮರೆತು, ಹಬ್ಬದ ಸಂಭ್ರಮದಲ್ಲಿದ್ದರು ಎಂದು ಸ್ಥಳೀಯರಾದ ಲಕ್ಷ್ಮಣ ಕಟ್ಟಿಹೊಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನದ 24 ತಾಸು ನಿರಂತರ ಸೇವೆಯ ಆಸ್ಪತ್ರೆಯಲ್ಲಿ ಸಕಾಲಿಕ ಸೇವೆ ನೀಡದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: BSc Nursing: ಅ.20ರಂದು ಮೆರಿಟ್ ಆಧಾರದ ಮೇಲೆ ಬಾಕಿ ಉಳಿದ ಸೀಟುಗಳ ಹಂಚಿಕೆ