Advertisement
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಾದಂತೆ ವೈಧ್ಯಕೀಯ ಕ್ಷೇತ್ರದಲ್ಲಿ ಸವಾಲುಗಳಿದ್ದು, ಅವುಗಳನ್ನು ಸರ್ಮಕವಾಗಿ ಎದುರಿಸಲು ರಾಜ್ಯಸರಕಾರ ಹೊಸದಾಗಿ ಜಮಖಂಡಿ ನಗರಕ್ಕೆ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಬೇಕು. ಈಗಾಗಲೇ ಸಾಮಾಜಿಕ, ರಾಜಕೀಯ ಮತ್ತು ಹಿರಿಯ ವೈಧ್ಯರ ನಡುವೆ ಮಾತುಕತೆ ಮಾಡಲಾಗಿದ್ದು, ಸಿದ್ಧತೆ ಮಾಡುವಂತೆ ಉತ್ತರ ಲಭ್ಯವಾಗಿದೆ ಎಂದರು.
ಬನಹಟ್ಟಿ, ತೇರದಾಳ, ಅಥಣಿ, ಮುಧೋಳ, ಬೀಳಗಿ, ಸಾವಳಗಿ ಸಹಿತ ವಿವಿಧ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಅಧ್ಯಯನಕ್ಕೆ ಹೆಚ್ಚಿನ ಅನುಕೂಲವಾಗಿದೆ ಎಂದರು.
ಭವಿಷ್ಯದಲ್ಲಿ ಜಮಖಂಡಿ ಜಿಲ್ಲಾಕೇಂದ್ರ ಆಗಲಿದ್ದು, ಸಾಕಷ್ಟು ಸಂಪನ್ಮೂಲ ಹೊಂದಿರುವ ನಮ್ಮ ತಾಲೂಕಿನಲ್ಲಿ ಸರಕಾರಿ ವೈಧ್ಯಕೀಯ ಕಾಲೇಜ ಅಂತ್ಯಂತ ಅವಶ್ಯಕವಾಗಿದೆ. ಒತ್ತಡ ಜೀವನದಲ್ಲಿ ಹೊಸ ರೋಗಗಳು ಹುಟ್ಟುತ್ತಿರುವ ಇಂದಿನ ದಿನಮಾನದಲ್ಲಿ ಚಿಕಿತ್ಸೆ ಪಡೆಯದು ಕಷ್ಟಕರವಾಗುತ್ತಿದೆ. ಪ್ರತಿಯೊಂದಕ್ಕೂ ಬಾಗಲಕೋಟೆ, ಬೆಳಗಾವಿ, ಮಿರಜ, ವಿಜಯಪುರ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಗಿದೆ. ಈಗಾಗಲೇ ಕಳೆದ ನಾಲ್ಕು ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಗೆ ಹೊಸದಾಗಿ ಸರಕಾರಿ
ವೈಧ್ಯಕೀಯ ಕಾಲೇಜು ಮಂಜೂರಿ ಆಗಿದ್ದು, ಯಾರು ಆಸಕ್ತಿ ತೋರದ ಹಿನ್ನಲೆಯಲ್ಲಿ ಯಥಾಸ್ಥಿತಿಯಲ್ಲಿದೆ.
Related Articles
ಕಾಲೇಜ ಮಂಜೂರಿ ಮಾಡಬೇಕೆಂದು ಒತ್ತಾಯಿಸಿದರು.
Advertisement
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಜಮಖಂಡಿ ಉಪವಿಭಾಗ ಸ್ಥಾನಮಾನ ಹೊಂದಿರುವ ಹಿನ್ನೆಲೆಯಲ್ಲಿ ಜಮಖಂಡಿ ಜಿಲ್ಲಾಕೇಂದ್ರ ಆಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಅರ್ಹತೆಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಮಖಂಡಿ ನಗರದ ಸಮಾನ ಮನಸ್ಕರ ಮತ್ತು ಹಿರಿಯ ವೈದ್ಯರು, ನಗರದ ಹಿರಿಯರು ಕೂಡಿಕೊಂಡು ಸಮಿತಿ ರಚಿಸುವ ಮೂಲಕ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿ ಅವರಿಗೆ ಜಮಖಂಡಿಗೆ ಸರಕಾರಿ ಮೆಡಿಕಲ್ ಕಾಲೇಜು ಅನುಮತಿ ನೀಡುವಂತೆ ಒತ್ತಾಯಿಸುವುದಾಗಿ ಹೇಳಿದರು.