ಪಣಜಿ: ತೌಖ್ತೇ ಚಂಡಮಾರುತವು ಕೇವಲ ಮನುಷ್ಯರ ಜೀವನದ ಮೇಲೆ ಮಾತ್ರವಲ್ಲದೆಯೇ ಪ್ರಾಣಿಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಪಣಜಿಯ ಪ್ರಧಾನ ವನರಕ್ಷಕ ಸಂತೋಷಕುಮಾರ್ ಅವರು ಹೇಳಿದ್ದಾರೆ.
ತೌಖ್ತೇ ಚಂಡಮಾರುತದಿಂದ ಕಾಣಕೋಣ ಗಾಲಜೀಬಾಗ್ ಬೀಚ್ (ಆಮೆಗಳ ಸಂರಕ್ಷಣೆಗೆ ಕಾಯ್ದಿರಿಸಿದ ಬೀಚ್)ನಲ್ಲಿ ಆಮೆಗಳ 335 ಮೊಟ್ಟೆಗಳಿಗೆ ಹಾನಿಯಾಗಿದೆ. ಚಂಡಮಾರುತದ ಹೆಚ್ಚಿನ ಪರಿಣಾಮ ಪಕ್ಷಿಗಳ ಮೇಲೆ ಉಂಟಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಗೋವಾ :10ನೇ ತರಗತಿಯ ಪರೀಕ್ಷೆಗಳು ರದ್ದು : ಮುಖ್ಯಮಂತ್ರಿ ಪ್ರಮೋದ ಸಾವಂತ್
ಗೋವಾದ ಕಾಣಕೋಣ ಬೀಚ್ ಆಮೆಗಳಿಗಾಗಿ ಕಾಯ್ದಿರಿಸಿದ ಬೀಚ್ ಆಗಿದ್ದು, ತೌಖ್ತೇ ಚಂಡಮಾರುತದ ಪರಿಣಾಮ ಈ ಬೀಚ್‍ನಲ್ಲಿದ್ದ 335 ಆಮೆಗಳ ಮೊಟ್ಟೆಗಳಿಗೆ ಹಾನಿಯಾಗಿದೆ. ಚಂಡಮಾರುತದಿಂದಾಗಿ ಎಲ್ಲ ವರ್ಗಕ್ಕೂ ಸಮಪ್ರಮಾಣದಲ್ಲಿ ಪರಿಣಾಮವುಂಟಾಗುತ್ತದೆ. ಪಕ್ಷಿ ಸಂಕುಲಕ್ಕೆ ಚಂಡಮಾರುತದಿಂದ ಹೆಚ್ಚಿನ ಪರಿಣಾಮವುಂಟಾಗಿದೆ, ಭಾರಿ ಪ್ರಮಾಣದಲ್ಲಿ ಮೊಟ್ಟೆ ಒಡೆದಿದೆ. ಇದರಿಂದಾಗಿ ಪಕ್ಷಿಗಳ ಪ್ರಜನನದ ಪ್ರಮಾಣ ಇಳಿಕೆಯಾಗುವ ಸಾಧ್ಯತೆಯಿದೆ. ಪಕ್ಷಿಗಳಿಗೆ ಚಂಡಮಾರುತದ ಕಲ್ಪನೆಯಿರುತ್ತದೆ ಆದರೆ ಅವುಗಳಿಗೆ ಸುರಕ್ಷಿತ ಸ್ಥಳದಲ್ಲಿ ಆಸರೆ ಪಡೆಯುವುದು ಸಾಧ್ಯವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಇನ್ನು, ಪ್ರಾಣಿಗಳಿಗೆ ನೈಸರ್ಗಿಕ ಆಪತ್ತಿನ ಕಲ್ಪನೆ ಮೊದಲೇ ಬರುತ್ತದೆ. ಇದರಿಂದಾಗಿ ಅವುಗಳು ಸುರಕ್ಷಿತ ಸ್ಥಳದಲ್ಲಿ ಆಸರೆ ಹುಡುಕುತ್ತಿರುತ್ತವೆ. ಇದರಿಂದಾಗಿಯೇ ವನ್ಯಜೀವಿಗಳಿಗೆ ಚಂಡಮಾರುತದ ಪರಿಣಾಮ ಮನುಷ್ಯರ ಮೇಲಾದಷ್ಟು ಆಗುವುದಿಲ್ಲ. ಸಮುದ್ರ ತೀರದಲ್ಲಿ ಮಾತ್ರ ಚಂಡಮಾರುತದ ಹೆಚ್ಚಿನ ಪರಿಣಾಮವುಂಟಾಗುತ್ತದೆ. ಗೋವಾದ ಗಾಲಜೀಬಾಗ್ ಬೀಚ್ ಇದು ಆಮೆಗಳ ಸಂರಕ್ಷಿತ ಪ್ರದೇಶವಾಗಿದೆ. ಇಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಇಲ್ಲಿ ಪ್ರತಿ ವರ್ಷ ವಿವಿಧ ಜಾತಿಯ ಆಮೆಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮೊಟ್ಟೆಯಿಡುತ್ತವೆ. ಆದರೆ ಪ್ರಸಕ್ತ ಚಂಡಮಾರುತದಿಂದಾಗಿ ಇಲ್ಲಿ ಆಮೆಗಳ ಮೊಟ್ಟೆಗಳಿಗೆ ಹಾನಿಯಾಗಿರುವುದು ದುಖಃಕರ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಕೋವಿಡ್‌ನಿಂದಾಗಿ ಚೀನಾದಿಂದ ಭಾರತಕ್ಕೆ ಬಂದರೂ ಸೋಂಕಿಗೆ ಬಲಿಯಾದ ಸಂಶೋಧಕ