Advertisement
1) ಸಕ್ಕರೆ ಕಾಯಿಲೆ ನಿಯಂತ್ರಣ: ಒಂದೆಲಗ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಮಧುಮೇಹ ಇರುವವರು ಸೇವಿಸಿದರೆ ಸಕ್ಕರೆ ಕಾಯಿಲೆ ನಿಯಂತ್ರಿಸಬಹುದು.
Related Articles
Advertisement
5) ಜ್ಞಾಪಕ ಶಕ್ತಿ ಹೆಚ್ಚಿಸಲು: ಒಂದೆಲಗದಲ್ಲಿರುವ ವಿಶೇಷ ಪೋಷಕಾಂಶಗಳನ್ನು ಮೆದುಳಿಗೆ ನೀಡುವುದರಿಂದ ಸ್ಮರಣ ಶಕ್ತಿ ಹೆಚ್ಚುತ್ತದೆ. ಇದನ್ನು ದಿನನಿತ್ಯ ಸೇವಿಸಿದರೆ ಬುದ್ದಿ ಚುರುಕಾಗುತ್ತದೆ. ಚಿಕ್ಕ ಮಕ್ಕಳಿಗೆ ಖಾಲಿ ಹೊಟ್ಟೆಗೆ ಪ್ರತಿದಿನ ಇದರ ಎರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಒಂದೆಲಗ ರಸಕ್ಕೆ ಸ್ವಲ್ಪ ಹಾಲು ಮತ್ತು ಬೆಲ್ಲ ಸೇರಿಸಿ ಬೆಳಿಗ್ಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಮೆದುಳಿಗೆ ಪೋಷಕಾಂಶಗಳು ದೊರೆತು ಏಕಾಗ್ರತೆ ಮತ್ತು ಬುದ್ದಿವಂತಿಕೆ ಹೆಚ್ಚಾಗುತ್ತದೆ.
6) ಚರ್ಮದ ಕಾಂತಿ: ಒಂದೆಲಗ ಸೊಪ್ಪಿನ ರಸ ಸೇವಿಸುವುದರಿಂದ ದೇಹದಲ್ಲಿ ರಕ್ತಪರಿಚಲನೆ ಉತ್ತಮವಾಗುತ್ತದೆ. ರಕ್ತಪರಿಚಲನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಚರ್ಮದ ಹೊರಪದರ ಶುದ್ದಗೊಳಿಸಿ ಕಾಂತಿ ಹೊರಹೊಮ್ಮುವಂತೆ ಮಾಡುತ್ತದೆ. ಒಂದೆಲಗ ಸೊಪ್ಪಿನ ಫೆಸ್ ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳುವುದರಿಂದ ಮೊಡವೆ, ತುರಿಕೆ ಕಡಿಮೆಯಾಗುತ್ತದೆ.
7) ಕೂದಲಿನ ಆರೋಗ್ಯ: ತಲೆಕೂದಲು ಉದುರುವುದು ತಡೆಯುತ್ತದೆ ಹಾಗೂ ಕೂದಲು ಉತ್ತಮವಾಗಿ ಬೆಳೆಯಲು ಸಹಕಾರಿ. ಒಂದೆಲಗದಲ್ಲಿರುವ ಪೋಷಕಾಂಶಗಳು ಕೂದಲು ಉದುರದೆ ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಒಂದೆಲಗದಿಂದ ತಯಾರಿಸಿದ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೊದಲು ಹೊಳಪಾಗುವುದರೊಮದಿಗೆ ಸಮೃದ್ಧವಾಗಿ ಬೆಳೆಯುತ್ತದೆ. ಸೀಳು ಕೂದಲು, ತಲೆಹೊಟ್ಟು ಸಮಸ್ಯೆ ನಿವಾರಿಸುವುದರೊಂದಿಗೆ ಒಂದೆಲಗವನ್ನು ತಲೆಗೆ ಹಚ್ಚುವುದರಿಂದ ದೇಹದಲ್ಲಿನ ಉಷ್ಣತೆ ಕಡಿಮೆ ಮಾಡುತ್ತದೆ.
8) ಬ್ಯಾಕ್ಟಿರಿಯಾ ನಿವಾರಣೆ:ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕನ್ನು ನಿವಾರಿಸುತ್ತದೆ. ಈ ಸಸ್ಯವನ್ನು ಸಾಮಾನ್ಯ ಶೀತ, ಮೂತ್ರನಾಳದ ಸೋಂಕು, ಕ್ಷಯರೋಗ, ಕುಷ್ಟರೋಗ, ಹಂದಿಜ್ವರ, ಭೇದಿ, ಕಾಲರಾ ಇತ್ಯಾದಿ ಚಿಕಿತ್ಸೆಗೆ ಬಳಸಿಕೊಳ್ಳಬಹುದು.
9) ಬಳಲಿಕೆ ನಿವಾರಣೆಗೆ: ಒಂದೆಲಗ ಸೊಪ್ಪು ಬಳಲಿಕೆ ನಿವಾರಣೆ ಮಾಡಲು ತುಂಬಾ ಸಹಕಾರಿಯಾಗಿದೆ. ಇದನ್ನು ಸೇವಿಸಿದರೆ ನಿಮ್ಮಲ್ಲಿನ ಬಳಲಿಕೆ ದೂರವಾಗಿ ಶಕ್ತಿ ಬರುತ್ತದೆ.
10) ಗಾಯ, ಸುಟ್ಟ ಗಾಯಕ್ಕೆ: ಈ ಸಸ್ಯದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದನ್ನು ಗಾಯ, ಸುಟ್ಟ ಗಾಯ, ಸೋರಿಯಾಸಿಸ್ ಚಿಕಿತ್ಸೆಗೆ ಬಳಸಬಹುದು. ಇದು ಗಾಯ, ಸುಟ್ಟಗಾಯ ಶಮನ ಮಾಡುತ್ತದೆ. ಇದು ಬಾಧಿತ ಜಾಗಕ್ಕೆ ರಕ್ತಸಂಚಾರ ಹೆಚ್ಚಿಸಿ, ಆ್ಯಂಟಿಆಕ್ಸಿಡೆಂಟ್ ಮಟ್ಟ ವೃದ್ಧಿಸುತ್ತದೆ. ನಿಮ್ಮ ಮನೆ ಹಿತ್ತಲಿನಲ್ಲಿ ಆಥವಾ ನೀರು ಜಾಸ್ತಿ ಇರುವ ಪ್ರದೇಶದಲ್ಲಿ ಬಾಹ್ಮಿ ಸಸ್ಯ ನೆಟ್ಟು, ಅದನ್ನು ಉಪಯೋಗಿಸುತ್ತಾ ಆರೋಗ್ಯವಾಗಿರಿ.
– ಕಾವ್ಯಶ್ರೀ