Advertisement
ಮನೆಯಲ್ಲಿ ಎಲ್ಲಾದರೂ ಇಟ್ಟಿರಬಹುದೆಂದು ಟೇಬಲ್ಲಿನ ಡ್ರಾಯರನ್ನು , ಟಿ.ವಿ. ಮುಂದಿನ ರ್ಯಾಕಿನಲ್ಲಿ- ಹೀಗೆ ನನಗೆ ಅನುಮಾನ ಬಂದ ಕಡೆಯೆಲ್ಲ ಹುಡುಕಿದೆ. ಮೊಬೈಲು ಸಿಗಲೇ ಇಲ್ಲ. ಮನೆಯ ಮೂಲೆ ಮೂಲೆ ತಡಕಾಡಿದರೂ ಅದರ ಸುಳಿವು ಸಹ ಸಿಗಲಿಲ್ಲ. ದೊಡ್ಡ ಮಗಳು ಏನಾದ್ರೂ ತೆಗೆದುಕೊಂಡು ಕೆಲಸಕ್ಕೆ ಬರದ ಗೇಮು ಅಡುತ್ತಿರಬಹುದೆಂದು ನೋಡಿದರೆ ಅವಳು ಟಿ.ವಿ. ನೋಡುತ್ತಿದ್ದಾಳೆ. ಎಲ್ಲಿ ಕಳೆದು ಹೋಗಿರಬಹುದು ಮೊಬೈಲು ! ಬಿ.ಪಿ. ಹೆಚ್ಚಾಗತೊಡಗಿತು.
Related Articles
Advertisement
“”ಎಲ್ಲಿ ಬಿಟ್ರಿ ನೆನೆಪು ಮಾಡಿ ಕೊಳ್ರಿ” ಅಂತ ನನ್ನನ್ನು ಮತ್ತೆ ತರಾಟೆಗೆ ತೆಗೆದುಕೊಳ್ಳತೊಡಗಿದಳು ಹೆಂಡತಿ.“”ಆಫೀಸಿನಲ್ಲಿ ಬಿಟ್ಟು ಬಂದಿರಬಹುದು. ಅಲ್ಲಿನ ರಾತ್ರಿ ಸೆಕ್ಯೂರಿಟಿಯವರಿಗೆ ಫೋನ್ ಮಾಡಿ” ಅಂತ ಮಗಳು ಸಲಹೆಯನಿತ್ತಳು. ಸಲಹೆಯೇನೋ ಉತ್ತಮವಾದದ್ದೇ. ಆದರೆ, ಸೆಕ್ಯೂರಿಟಿಯವರ ಫೋನ್ ನಂಬರು ಕೂಡ ಮೊಬೈಲಿನಲ್ಲೇ ಇದೆ. ಮೊದಲಿನ ಹಾಗೆ ಫೋನು ನಂಬರುಗಳು ನೆನಪಿನಲ್ಲಿ ಇರುತ್ತವೆಯೆ? ಮೊದಲು ನಾನು ಕನಿಷ್ಟ ಇಪ್ಪತ್ತು ನಂಬರುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೆ. ಆದರೆ, ಈಗ ಎರಡು ಗಂಟೆಯ ಮೊದಲು ನಡೆ ದ ಘಟನೆಗಳನ್ನು ನೆನಪು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನೇನು ಎಲ್ಲರಂತೆ ಮೊಬೈಲು ಹುಚ್ಚನೇನು ಅಲ್ಲ. ನಾನಾಗಿಯೇ ಯಾರಿಗೂ ಕಾಲು-ಮೆಸೇಜು ಮಾಡುವುದಿಲ್ಲ.ಗದಗಿನಲ್ಲಿ ಮೆಡಿಕಲ್ ಓದುತ್ತಿರುವ ಚಿಕ್ಕ ಮಗಳಿಗೆ ಮಾತ್ರ ಪ್ರತಿದಿನ ರಾತ್ರಿ ತಪ್ಪದೇ ಫೋನು ಮಾಡುತ್ತೇನೆ. ಅಷ್ಟೆ ? ನಾನು ಮತ್ತು ನನ್ನಾಕೆ ಇದುವರೆಗೂ ಒಟ್ಟು ಮಾಡಿದರೆ ಫೋನಿನಲ್ಲಿ ಎರಡು ಗಂಟೆ ಸಹ ಮಾತನಾಡಿಲ್ಲ. ಬೆಳಗ್ಗೆಯಿಂದ ಸಂಜೆಯವ ರೆಗೆ ನಾನು ಯಾರ ಯಾರ ಬಳಿ ಮಾತಾಡಿದೆ ಎಂಬುದನ್ನು ನೆನಪು ಮಾಡಿಕೊಳ್ಳತೊಡಗಿದೆ. ಮೊಬೈಲು ಯಾವ ಸಂದರ್ಭದಲ್ಲಿ ನನ್ನ ಜೇಬಿನಿಂದ ಜಾರಿತೋ ಗೊತ್ತಾಗಲೇ ಇಲ್ಲ. ಆಫೀಸಿನಲ್ಲಿ ಬಿಟ್ಟಿರಬಹುದೆಂದು ಸ್ಕೂಟರ್ ಏರಿ ಆಫೀಸು ಬಳಿ ಬಂದೆ. ನನ್ನ ಕಂಡು ಸೆಕ್ಯೂರಿಟಿ “”ಏನ್ ಸಾರ್ ಪುನಃ ಬಂದ್ರಿ?” ಎಂದ. ನಾನು, ನನ್ನ ಮೊಬೈಲು ಕಳೆದುಹೋದ ವಿಚಾರ ತಿಳಿಸಿ ಕಚೇರಿಯಲ್ಲೆಲ್ಲ ಕಡೆ ಹುಡುಕಿದೆವು. ಸಿಗಲಿಲ್ಲ ಯಾರಿಗೋ ಸಿಕ್ಕಿರಬೇಕು ಅಂತ ಅನ್ನಿಸಿತು. ಸರಿ, ಮೊಬೈಲು ಆಫೀಸಿನಲ್ಲಿ ಇಲ್ಲ ಹಾಗೂ ಮನೆಯಲ್ಲಿ ಕೂಡ ಇಲ್ಲ ಅಂದರೆ ಅದು ಆಫೀಸಿನಿಂದ ಮನೆಗೆ ಹೋಗುವಾಗ ರಸ್ತೆಯಲ್ಲಿ ಬಿದ್ದು ಹೋಗಿರಬೇಕು, ಅಷ್ಟೆ. ಮನೆಗೆ ತೆರಳಿದೆ. ಗೇಟಿನಲ್ಲೇ ನನ್ನ ಬರುವಿಕೆಗೆ ಕಾಯುತ್ತಿದ್ದ ನನ್ನಾಕೆ, “”ಏನ್ರಿ ಮೊಬೈಲ್ ಸಿಕ್ತಾ?” ಎಂದು ನನ್ನನ್ನು ತಿವಿ ಯು ವಂತೆ ಪ್ರಶ್ನೆ ಮಾಡಿದಳು. ನಾನು ಉತ್ತರಿಸಲಿಲ್ಲ. “”ಅಪ್ಪಾಜಿ, ಆಫೀಸಿನಿಂದ ಮನೆಗೆ ಬಂದ ನೀವು ಮನೆ ಒಳಗೆ ಬರಲೇ ಇಲ್ಲ. ನೀರು ತರಲು ಕ್ಯಾನ್ ತೆಗೆದುಕೊಂಡು ಹೋದ್ರಿ. ನೀರು ತರೋ ಹೊತ್ತಿಗೆ ಶೈಲ ಬಂದ. ಅವನ ಜೊತೆ ಕಾರು ಡ್ರೈವಿಂಗ್ ಕಲಿಯಲು ಹೋದ್ರಿ” ಅಂತ ಮಗಳು ಜ್ಞಾಪಿಸಿದಳು. ನನ್ನ ಮಗಳ ತಲೆ ನನಗಿಂತ ತ್ವರಿತಗತಿಯಲ್ಲಿ ಪತ್ತೇದಾರಿಕೆ ಕೆಲಸ ಮಾಡತೊಡಗಿತು. ಅವಳು ತರ್ಕಿಸುತ್ತ ನನ್ನನ್ನು ಪೊಲೀಸರಂತೆ ಪ್ರಶ್ನೆ ಮಾಡತೊಡಗಿದಳು.
“”ಅಪ್ಪಾಜಿ, ಈವೊತ್ತು ಕೊನೆಯದಾಗಿ ಯಾರ ಜೊತೆಗೆ ಮಾತಾಡಿದ್ರಿ”
“”ಕಾರು ಓಡಿಸುವಾಗ ಯಾವುದಾದ್ರೂ ಪೋನ್ ಬಂದಿತ್ತ?”
ನಾನು ಏನೋ ನೆನ ಪಾ ದ ವ ನಂತೆ, “”ಹೌದೌದು… ಮೈಲಾರಪ್ಪ ಫೋನ್ ಮಾಡಿದ್ದರು” ಎಂದೆ.
ಮಗಳು ಕುಣಿದು ಕುಪ್ಪಳಿಸಿ ಕೀ ತೆಗೆದುಕೊಂಡು ಕಾರಿನ ಬಳಿ ಓಡಿದಳು. ಕಾರು ಡೋರ್ ತೆರೆದು ನೋಡಿದಾಗ ಮುಂಭಾಗದ ಗಣಪತಿ ವಿಗ್ರಹದ ಬಳಿ ರಿಂಗ್ ಆಗುತ್ತಿದ್ದ ಮೊಬೈಲ್‌ನ್ನು ನೋಡಿ,””ಅಪ್ಪಾಜಿ, ಮೊಬೈಲು ಕಾರಲ್ಲೇ ಇದೆ” ಅಂತ ಜೋರಾಗಿ ಕಿರುಚಿದಳು. “ಎಲ್ಲೆಲ್ಲಿ ಬಿಟ್ಟು ಬಂದು ನಮ್ಮ ಜೀವ ತಿಂತೀರಿ’ ಅಂತ ಹೆಂಡತಿ ಬೈಯುತ್ತಿರುವುದು ಕೇಳಿಸುತ್ತಿತ್ತು. ಪ. ಚಂದ್ರಕುಮಾರ ಗೌನಹಳ್ಳಿ