ಸಿನಿಮಾಗಳಲ್ಲಿ ಮನರಂಜನೆ ಇರಬೇಕು ಜೊತೆಗೆ ಸಂದೇಶವೂ ಇರಬೇಕು. ಅದರಲ್ಲೂ ಈಗಿನ ಯೂಥ್‌ಗೆ ತಕ್ಕಂತೆ ಚಿತ್ರವಿದ್ದರೆ ಮಾತ್ರ, ಒಂದಷ್ಟು ಗಮನಸೆಳೆಯುತ್ತೆ. ಇಲ್ಲವಾದರೆ ಇಲ್ಲ. ಇವೆಲ್ಲಾ ಅಂಶಗಳೊಂದಿಗೆ ತೆರೆಗೆ ಬರಲು ಹೀಗೊಂದು ಚಿತ್ರ ಸಿದ್ಧವಾಗಿದೆ. ಅದು “ಗೋಸಿಗ್ಯಾಂಗ್’. ಡ್ರಗ್ಸ್ ಮಾಫಿಯಾ ಕುರಿತ ಕಥೆ ಹೊಂದಿರುವ ಈ “ಗೋಸಿಗ್ಯಾಂಗ್’ ಚಿತ್ರದಲ್ಲಿ ಯುವ ಬಳಗವೇ ತುಂಬಿದೆ.
ಯತಿರಾಜ್ ಜಗ್ಗೇಶ್ ಮತ್ತು ಅಜೇಯ್ ಕಾರ್ತಿಕ್ ನಾಯಕರಾಗಿರುವ ಈ ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಆಗಿದ್ದು, ನಿರ್ಮಾಪಕ ಕೆ.ಶಿವಕುಮಾರ್ ಅವರು ನವೆಂಬರ್‌ನಲ್ಲಿ ರಾಜ್ಯಾದ್ಯಂತ ಬಿಡುಗಡೆ ಮಾಡಲು ಅಣಿಯಾಗಿದ್ದಾರೆ. ಡ್ರಗ್ಸ್ ಮಾಫಿಯಾ ಇಲ್ಲೂ ಇದೆ ಎಂಬ ಬಗ್ಗೆ ಸದನದಲ್ಲಿ ಜೋರು ಸದ್ದಾಗಿತ್ತು. “ಗೋಸಿಗ್ಯಾಂಗ್’ ಅದೇ ವಿಷಯ ಇಟ್ಟುಕೊಂಡು, ಮೊದಲೇ ಚಿತ್ರೀಕರಣ ಮಾಡಿ ಮುಗಿಸಿದೆ.
ಚಿತ್ರದಲ್ಲಿ ಡ್ರಗ್ ಮಾಫಿಯಾ ಬಗ್ಗೆ ಸೂಕ್ಷ್ಮ ಅಂಶಗಳ ಮೂಲಕ ಬೆಳಕು ಚೆಲ್ಲಲಾಗಿದೆ. ಹಾಗಾದರೆ, ಇಲ್ಲಿ ಬರೀ ಡ್ರಗ್ಸ್ ಮಾಫಿಯಾ ವಿಷಯವೇ ತುಂಬಿಕೊಂಡಿದೆಯಾ? ಎಂಬ ಪ್ರಶ್ನೆಗೆ, “ಗೋಸಿಗ್ಯಾಂಗ್’ನಲ್ಲಿ ಮನರಂಜನೆ ಇದೆ, ಜೊತೆಗೆ ಯೂಥ್‌ಗೊಂದು ಸಂದೇಶವೂ ಇದೆ. ಇಲ್ಲಿ ಗ್ಯಾಂಗ್‌ವೊಂದು ಏನೆಲ್ಲಾ ಮಾಡುತ್ತೆ, ಯಾವ ಘಟನೆ ಈ ಚಿತ್ರದಲ್ಲಿದೆ ಎಂಬುದು ಸಸ್ಪೆನ್ಸ್ ಎನ್ನುತ್ತಾರೆ ನಿರ್ಮಾಪಕ ಶಿವಕುಮಾರ್.
ಚಿತ್ರಕ್ಕೆ ನಿರ್ಮಾಪಕ ಕೆ.ಶಿವಕುಮಾರ್ ಅವರೇ ಕಥೆಯ ಎಳೆಯನ್ನು ಕೊಟ್ಟಿದ್ದಾರೆ. ಅದಕ್ಕೆ ಚಿತ್ರಕಥೆ ಬರೆದು ಸಂಭಾಷಣೆ ಜೊತೆಗೆ ರಾಜು ದೇವಸಂದ್ರ ನಿರ್ದೇಶನ ಮಾಡಿದ್ದಾರೆ. “ವಿದ್ಯಾರ್ಥಿ ಬದುಕಿನಲ್ಲೇ ಡ್ರಗ್ ಎಂಬ ವ್ಯಸನಕ್ಕೆ ಅಂಟಿಕೊಂಡರೆ, ಅವರ ಲೈಫು ಕತ್ತಲ್ಲಲ್ಲೇ ಮುಳುಗುತ್ತದೆ ಎಂಬ ಎಚ್ಚರದ ಸಂದೇಶ’ ಇಲ್ಲಿದೆ. ಇಲ್ಲಿ ಗೆಳೆತನ, ಪ್ರೀತಿ, ಸೆಂಟಿಮೆಂಟ್ ಜೊತೆಗೊಂದಷ್ಟು ಹಾಸ್ಯವೂ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಕಥೆಗೆ ಪೂರಕ ಎಂಬಂತೆ ಆ್ಯಕ್ಷನ್ ಕೂಡ ಇದೆ ಎಂಬುದು ನಿರ್ದೇಶಕ ರಾಜು ದೇವಸಂದ್ರ ಅವರ ಮಾತು.ಇತರರು ನಟಿಸಿದ್ದಾರೆ.