ಆಳಂದ: ಪಟ್ಟಣದ ಉಮರಗಾ ಹೆದ್ದಾರಿ ಯಲ್ಲಿರುವ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ, ವಿದ್ಯಾಪೀಠದ ನಿವೇಶನದಲ್ಲಿ ಕಲಬುರಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ಪ್ರಾರಂಭಿಸಲಾದ ಗೋಶಾಲೆಗೆ ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಸೋಮವಾರ ಚಾಲನೆ ನೀಡಿದರು.
ಪಶು ಪಾಲಕರು ಗೋ ಶಾಲೆ ಲಾಭ ಪಡೆಯಬೇಕು. ಗೋ ಶಾಲೆ ಸೇರಿದಂತೆ ಜನಪರ ಕಾರ್ಯಕ್ಕೆ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ ಸಹಕಾರಕ್ಕೆ ಮುಂದಾಗಿರುವ ಕಾರ್ಯಶ್ಲಾಘನೀಯ. ಈಗಾಗಲೇ ಅನುಭವ ಮಂಟಪದಿಂದ ಮುಖ್ಯ ಹೆದ್ದಾರಿಗೆ ಸಂಪರ್ಕ ಒದಗಿಸಲು ರಸ್ತೆ ನಿರ್ಮಾಣಕ್ಕೆ ಎಚ್ಕೆಆರ್‌ಡಿಬಿ 10 ಲಕ್ಷ ರೂಪಾಯಿ ನೀಡಲಾಗಿದೆ ಎಂದು ಹೇಳಿದರು.
ಹಣಮಂತರಾವ್ ಮಲಾಜಿ, ಜಿಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ತಹಶೀಲ್ದಾರ್ ಬಸವರಾಜ ಎಂ. ಬೆಣ್ಣೆಶಿರೂರ, ಕಲಬುರಗಿ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ| ವಿ.ಎಚ್. ಹನುಮಂತರಾವ್, ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ ಮಾತನಾಡಿದರು.
ಮರಾಠಾ ಸಮಾಜದ ಅಧ್ಯಕ್ಷ ನಾಗನಾಥ ಏಟೆ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಗ್ರಾಮ ಲೆಕ್ಕಿಗ ರಮೇಶ ಮಾಳಿ, ಪಶು ವೈದ್ಯಾಧಿಕಾರಿ ಡಾ| ಮಹಾಂತೇಶ ಪಾಟೀಲ, ಜಗನಾಥ ಕುಂಬಾರ ಸೇರಿದಂತೆ ತೆಲಾಕುಣಿ, ಆಳಂದ ವಲಯದ ರೈತರು ಪಾಲ್ಗೊಂಡಿದ್ದರು.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಸಕರು ಗೋ ಶಾಲೆ ಉದ್ಘಾಟಿಸಬೇಕಾಗಿತ್ತು. ಆದರೆ ಅವರು ಕಾರ್ಯನಿಮಿತ್ತ ಬೆಂಗಳೊರಿಗೆ ಹೋಗಿದ್ದಾರೆ. ಮೊದಲ ದಿನವೇ 67ಕ್ಕೂ ಹೆಚ್ಚು ಜಾನುವಾರುಗಳು ಗೋ ಶಾಲೆಗೆ ದಾಖಲಾಗಿರುವುದನ್ನು ನೋಡಿದರೆ ನೀರು ಮೇವಿನ ಕೊರತೆ ತೀವ್ರತೆ ಕಂಡು ಬರುತ್ತದೆ. ಗೋ ಶಾಲೆಗೆ ದಾಖಲಾಗುವ ಎಲ್ಲಾ ಜಾನುವಾರುಗಳಿಗೆ ಸೌಲಭ್ಯ ಒದಗಿಸಿ ಅನುಕೂಲ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
Related Articles
ಮೊದಲ ದಿನವೇ ಎತ್ತುಗಳು, ಎಮ್ಮೆ, ಕರ ಹೋರಿ ಹಸುಗಳು ಸೇರಿ 67 ಜಾನುವಾರುಗಳು ದಾಖಲೆಯಾಗಿವೆ. ಗೋ ಶಾಲೆಯಲ್ಲಿ ಪಶುಗಳಿಗೆ ನೆರಳಿನ ಹೊದಿಕೆ, ಪಶುಗಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ತಾತ್ಕಾಲಿಕ ಪಶು ಚಿಕಿತ್ಸಾಲಯ, ಜಾನುವಾರುಗಳಿಗೆ ಪ್ರತ್ಯೇಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕಣಕಿ ಹಾಗೂ ಚುನ್ನಿ ವಿತರಿಸಲಾಗುತ್ತಿದೆ. ಗೋ ಶಾಲೆಗೆ ದಾಖಲಾಗುವ ಪಶುಗಳಿಗೆ ಸ್ಥಳದಲ್ಲೇ ಉಚಿತವಾಗಿ ಮೇವು, ನೀರು, ಚಿಕಿತ್ಸೆ ಸೌಲಭ್ಯ ಒದಗಿಸಲಾಗುತ್ತದೆ.
Advertisement