ಚಿಕಾಗೋ: ಮೈಸೂರು ಮೃಗಾಲಯದಲ್ಲಿ ಈ ಹಿಂದಿದ್ದ ಗೊರಿಲ್ಲಾವೊಂದಕ್ಕೆ ಬೀಡಿ, ಸಿಗರೇಟು ಸೇದುವ ಚಟ ಅಂಟಿ, ಅದು ತನ್ನನ್ನು ನೋಡಲು ಬಂದವರಿಂದ ಸಿಗರೇಟು, ಬೀಡಿ ಪಡೆದು ಸೇದುತ್ತಿದ್ದುದನ್ನು ಬಹುತೇಕರು ನೋಡಿದ್ದಾರೆ.
ಅದೇ ರೀತಿ, ಚಿಕಾಗೋದ
ಲಿಂಕನ್ ಪಾರ್ಕ್ ಎಂಬ ಮೃಗಾಲಯದಲ್ಲಿರುವ 16 ವರ್ಷದ ಗೊರಿಲ್ಲಾಕ್ಕೆ ಮೊಬೈಲ್ ನೋಡುವ ಚಟ ಅಂಟಿಕೊಂಡಿದೆಯಂತೆ.
188 ಕೆಜಿ ತೂಕವಿರುವ ಈ ಗೊರಿಲ್ಲಾವನ್ನು ಜನರು ನೋಡಲೆಂದು ಒಂದು ಗ್ಲಾಸ್‌ನ ಗೋಡೆ ನಿರ್ಮಿಸಲಾಗಿದೆ. ಜನರು ಆ ಗ್ಲಾಸ್ ಗೋಡೆ ಬಳಿ ಬಂದು ಗೊರಿಲ್ಲಾ ಜೊತೆ ಸೆಲ್ಫಿ ತೆಗೆದುಕೊಳ್ಳುವುದು, ಅದಕ್ಕೆ ಬೇರೆ ಗೊರಿಲ್ಲಾಗಳ ವಿಡಿಯೋ ತೋರಿಸಿ ಅವುಗಳಂತೆ ಮಾಡಲು ಹೇಳುತ್ತಾರಂತೆ. ಈಗೀಗಾ ಏನಾಗಿದೆಯೆಂದರೆ, ಗೊರಿಲ್ಲಾ ಚಟುವಟಿಕೆಯಿಂದ ಇರಬೇಕೆಂದರೆ ಅದನ್ನು ನೋಡುವ ಬರುವವರು ತಮ್ಮ ಸೆಲ್ ಫೋನ್‌ನಲ್ಲಿ ಇತರ ಗೊರಿಲ್ಲಾಗಳ ಚಿತ್ರವನ್ನು ತೋರಿಸಲೇಬೇಕು ಎನ್ನುವಂತಾಗಿದೆ ಪರಿಸ್ಥಿತಿ.
ಈ ಚಟ ಎಷ್ಟರ ಮಟ್ಟಿಗೆ ಹೆಚ್ಚಾಗಿದೆಯೆಂದೆರೆ ಇತ್ತೀಚೆಗೆ ಮತ್ತೊಂದು ಗೊರಿಲ್ಲಾ ಹಿಂದಿನಿಂದ ಬಂದು ಇದರ ಮೇಲೆ ಎರಗಿದರೂ ಅದು ಪ್ರತಿರೋಧ ತೋರದೇ ವೀಕ್ಷಕರ ಮೊಬೈಲ್‌ನ್ನೇ ನೋಡುತ್ತಿತ್ತಂತೆ.
ಗೊರಿಲ್ಲಾದ ಈ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮೃಗಾಲಯದ ಅಧಿಕಾರಿಗಳು ಇದೀಗ ಅದನ್ನು ಗ್ಲಾಸ್ ಗೋಡೆಯತ್ತ ಬಿಡುತ್ತಿಲ್ಲ. ಗೊರಿಲ್ಲಾ ಮೊಬೈಲ್ ಜೊತೆ ಸಮಯ ಕಳೆಯದೆ ಬೇರೆ ಗೊರಿಲ್ಲಾಗಳೊಂದಿಗೆ ಹೆಚ್ಚು ಬೆರೆಯಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ.