Advertisement

ಗೋರೆಗಾಂವ್‌ ಕರ್ನಾಟಕ ಸಂಘ: ಯುವ ವಿಭಾಗದಿಂದ ಒಳಾಂಗಣ ಕ್ರೀಡಾಕೂಟ

12:59 PM Oct 31, 2018 | Team Udayavani |

ಮುಂಬಯಿ: ಗೋರೆಗಾಂವ್‌ ಕರ್ನಾಟಕ ಸಂಘದ ವಜ್ರ ಮಹೋತ್ಸವದ ಅಂಗವಾಗಿ ಒಳಾಂಗಣ ಕ್ರೀಡಾಕೂಟವು  ಸಂಘದ ಬಾಕೂìರು ರುಕ್ಮಿಣಿ ಶೆಟ್ಟಿ ಮಿನಿ ಸಭಾಗೃಹದಲ್ಲಿ ನಡೆಯಿತು.

Advertisement

ಯುವ ವಿಭಾಗದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷೆ  ಸುಚಲತಾ ಪೂಜಾರಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ವಿನಂತಿ ಶೆಟ್ಟಿ, ಸುಮಿತ್ರಾ ಆರ್‌. ಕುಂದರ್‌. ಸುಮಿತ್ರಾ ಗುಜರನ್‌, ಶಕುಂತಳಾ ಆರ್‌. ಪ್ರಭು ಇವರು ಸಹಕರಿಸಿದರು.

ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯೆಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದವರು ಪ್ರಾರ್ಥನೆಗೈದರು.  ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಚೆನ್ನೆಮಣೆ ಆಟ, ಬಳೆ ಆಟ, ಕ್ಯಾರಂ ಸಿಂಗಲ್‌ ಮತ್ತು ಡಬ್ಬಲ್ಸ್‌, ಪುರುಷರಿಗೆ ಕ್ಯಾರಂ ಸಿಂಗಲ್‌ ಮತ್ತು ಡಬಲ್ಸ್‌, ಚೆಸ್‌ ಇನ್ನಿತರ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಮಹಿಳೆಯರ ವಿಭಾಗದಲ್ಲಿ ವಸಂತಿ ಶೆಟ್ಟಿ, ಪದ್ಮಜಾ ಮಣ್ಣೂರ, ಸುಮಿತ್ರಾ ಗುಜರನ್‌, ಸಾವಿತ್ರಿ ಶೆಟ್ಟಿ, ಶಕುಂತಳಾ ಶೆಟ್ಟಿ, ವಾಣಿ ಶೆಟ್ಟಿ, ಶಾರದಾ ಅಂಚನ್‌, ಸುಜಾತಾ ಕೋಟ್ಯಾನ್‌, ಸುಮಿತ್ರಾ ಕುಂದರ್‌, ಸುಚಿತಾ ಶೆಟ್ಟಿ, ನೈನಾ ಅಮೀನ್‌, ಸುಗುಣಾ ಬಂಗೇರ, ರೇಖಾ ಅಲಕರ್ಣಿ, ಮಕ್ಕಳ ವಿಭಾಗದಲ್ಲಿ ರಕ್ಷಿತಾ ಆಚಾರ್ಯ, ದಿಶಾ ಕೋಟ್ಯಾನ್‌, ಚಾರ್ವಿ ಅಂಚನ್‌, ಪುರುಷರ ವಿಭಾಗದಲ್ಲಿ ರಮೇಶ್‌ ಶಿವಪುರ, ಜೆ. ಕೆ. ಹೆಗಡೆ, ನಾರಾಯಣ ಪುತ್ರನ್‌, ಪಿ. ಎನ್‌. ಭಟ್‌, ದಿವಾಕರ ಅಂಚನ್‌ ಅವರು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದರು. ಸಂಘದ ಸದಸ್ಯ ಬಾಂಧವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next