ಮುಂಬಯಿ: ಗೋರೆ ಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಜಂಟಿ ಆಯೋಜನೆಯಲ್ಲಿ ಕೋಜಾಗಿರಿ ಹುಣ್ಣಿಮೆಯು ಇತ್ತೀ ಚೆಗೆ ಗೋರೆಗಾಂವ್ ಪಶ್ಚಿಮದ ಪುನರ್ವಸು ಸ್ಕೂಲ್‌ನ ಮೈದಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಜರಗಿತು.
ಸಂಜೆ 6ರಿಂದ ಸಂಘದ ಸದಸ್ಯೆ ಯರಾದ ಮೀನಾ ಕಾಳವರ್, ಚಂದ್ರಾವತಿ ದೇವಲ್ಕುಂದ ಭಾಸ್ಕರ ಶೆಟ್ಟಿ, ಸುಮಿತ್ರಾ ಕುಂದರ್ ಇವರ ಪ್ರಾರ್ಥನೆಯೊಂದಿಗೆ ಸಭಾಕಾರ್ಯ ಕ್ರಮ ಪ್ರಾರಂಭವಾಯಿತು. ಕಾರ್ಯ ಕ್ರಮದ ಅಧ್ಯಕ್ಷತೆಯಲ್ಲಿ ಗೋರೆ ಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರು ವಹಿಸಿದ್ದರು.
ವೇದಿಕೆಯಲ್ಲಿ ಪಾರುಪತ್ಯಗಾರ ರಾದ ಪಯ್ನಾರು ರಮೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ಅಧ್ಯಕ್ಷ ಎಸ್. ಎಂ. ಶೆಟ್ಟಿ ಹಾಗೂ ಪ್ರಾಯೋಜಕರಾಗಿ ಸಹಕರಿಸಿದ ಶಕುಂತಳಾ ಶೆಟ್ಟಿ, ಸಾವಿತ್ರಿ ಶೆಟ್ಟಿ, ನಯನಾ ಅಮೀನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್ ನಾಯಕ್ ಸ್ವಾಗತಿಸಿದರು. ಯುವ ವಿಭಾಗದ ಕಾರ್ಯಾಧ್ಯಕ್ಷೆ ಸುಚಲತಾ ಎಸ್. ಪೂಜಾರಿ ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರು ಮಾತನಾಡಿ, ಕೋಜಾಗಿರಿ ಹುಣ್ಣಿಮೆಯ ಬಗ್ಗೆ ವಿವರಿಸಿ, ಇದರ ಆಚರಣೆಯ ಅಗತ್ಯತೆಯನ್ನು ತಿಳಿಸಿದರು. ಇತ್ತೀಚೆಗೆ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಸ್ಪರ್ಧೆಯ ಫಲಿತಾಂಶವನ್ನು ಯುವ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜಾತಾ ಕೋಟ್ಯಾನ್ ಪ್ರಕಟಿಸಿದರು.
ವಿಜೇತರಿಗೆ ಗಣ್ಯರು ಹಾಗೂ ಪದಾಧಿಕಾರಿಗಳು ಬಹುಮಾನ ವಿತರಿಸಿ ಶುಭಹಾರೈಸಿದರು. ಸಾಂಸ್ಕೃ ತಿಕ ಕಾರ್ಯಕ್ರಮವಾಗಿ ಅಂತಾಕ್ಷರಿ ಮತ್ತು ಗರ್ಭಾ ನೃತ್ಯ ಕಾರ್ಯಕ್ರಮ ನಡೆಯಿತು. ಸಂಘದ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು, ಯುವ ವಿಭಾಗದವರು, ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸರಿತಾ ಸುರೇಶ್ ನಾಯಕ್ ಅವರು ವಂದಿಸಿದರು.