ಮುಂಬಯಿ: ಮಾನವ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆ ಪ್ರೀಮೆಸೊನ್ಯಾರಿಯ ಅಂಗಸಂಸ್ಥೆ ಗ್ರಾಂಡ್ ಲಾಡ್cನ ಲಾಡ್c ಪೂಲ್‌ಚಂದ್-163 ಹಾಗೂ ಸತ್ಯಸಾಯಿ ಸೇವಾ ಸಂಸ್ಥೆ ಜೋಗೇಶ್ವರಿ-ಗೋರೆಗಾಂವ್-ಮಲಾಡ್ ಸಮಿತಿಯ ವತಿಯಿಂದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೋರೆಗಾಂವ್ ಸ್ಥಳೀಯ ಸಮಿತಿಯ ಸಹಭಾಗಿತ್ವದಲ್ಲಿ ವಿಶ್ವ ಭಾÅತೃತ್ವ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ಉಚಿತ ವೈದ್ಯಕೀಯ ಶಿಬಿರವು ಇತ್ತೀಚೆಗೆ ಗೋರೆಗಾಂವ್‌ನ ಲಲಿತ್ ಹೊಟೇಲ್‌ನ ಕ್ರಿಸ್ಟಲ್ ಸಭಾಗೃಹದಲ್ಲಿ ನಡೆಯಿತು.
ಕ್ಯಾನ್ಸರ್ ಪೇಶೆಂಟ್ ಅಸೋಸಿಯೇಶನ್‌ನವರು ಕ್ಯಾನ್ಸರ್ ಪತ್ತೆಹಚ್ಚುವ ತಂತ್ರಜ್ಞಾನದ ಮೂಲಕ ಮಹಿಳೆಯರನ್ನು ಪರೀಕ್ಷಿಸಿದ್ದು, ಸುಮಾರು 81 ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಂಡರು. ಕಾರ್ಯಕ್ರಮವನ್ನು ಗಣ್ಯರು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿದರು. ಬಿಲ್ಲವರ ಅಸೋಸಿಯೇಶನ್ ಗೋರೆಗಾಂವ್ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷà ಜೆ. ವಿ. ಕೋಟ್ಯಾನ್ ಸ್ವಾಗತಿಸಿದರು.
ಲಾಡ್ಜ್ಪೂಲ್‌ಚಂದ್ ಸಂಸ್ಥೆಯ ಮಾರ್ಗದರ್ಶಕ ಡಾ| ಚೇತನ್ ಅರೋರ ಅವರು, ಇಂದು ಮೂರು ಸೇವಾ ಸಂಸ್ಥೆಗಳು ಒಂದಾಗಿ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದು ಅಭಿನಂದನೀಯ. ಮಹಿಳೆಯರು ಕೌಟುಂಬಿಕಾ ವಿಚಾರಗಳೊಂದಿಗೆ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವ ಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬಿಲ್ಲವರ ಅಸೋಸಿಯೇಶನ್ ಗೋರೆಗಾಂವ್ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಶಂಕರ ಡಿ. ಪೂಜಾರಿ ಇವರು ಸ್ಥಳೀಯ ಸಮಿತಿಯು ಆದಷ್ಟು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವ ಕಡೆಗೆ ಗಮನ ಹರಿಸಬೇಕು ಎಂದು ನುಡಿದರು. ಬಿಲ್ಲವರ ಅಸೋಸಿಯೇಶನ್ ಗೋರೆಗಾಂವ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸಚ್ಚೀಂದ್ರ ಕೋಟ್ಯಾನ್ ಇವರು ಮಾತನಾಡಿ, ಜನಪರ ಕಾಳಜಿಯುಳ್ಳ ಸಮಾನ ಮನಸ್ಕ ಸಂಸ್ಥೆಗಳೊಂದಿಗೆ ಕೈಜೋಡಿಸಿ ನಾರಾಯಣ ಗುರುಸ್ವಾಮಿಗಳ ಬೋಧನೆಯಂತೆ ಮಾನವೀಯ ನೆಲೆಯಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಉಚಿತ ವೈದ್ಯಕೀಯ ತಪಾಸಣೆ ಸೌಲಭ್ಯವನ್ನು ಒದಗಿಸಿದ ಮೂರು ಸಂಸ್ಥೆಗಳ ಕಾರ್ಯ ಅಭಿನಂದನೀಯವಾಗಿದೆ ಎಂದರು.
ಲಾಡ್ಜ್ಪೂಲ್‌ಚಂದ್ ಸಂಸ್ಥೆಯಿಂದ ಕೊಡಮಾಡಿದ ಹೊಲಿಗೆ ಯಂತ್ರವನ್ನು ಇದೇ ಸಂದರ್ಭದಲ್ಲಿ ಐವರು ಮಹಿಳೆಯರಿಗೆ ಉಚಿತವಾಗಿ ಹಂಚಲಾಯಿತು. ಅಲ್ಲದೆ ಮಹಿಳೆಯರು ಪ್ಲಾಸ್ಟಿಕ್ ಚೀಲಕ್ಕೆ ಪರ್ಯಾಯವಾಗಿ ಉತ್ಪಾಧಿಸುವ ಪರಿಸರ ಸ್ನೇಹಿ ಬಟ್ಟೆಚೀಲಗಳನ್ನು ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡುವುದಾಗಿ ಇದೇ ಸಂದರ್ಭದಲ್ಲಿ ಸಂಸ್ಥೆಯವರು ಭರವಸೆ ನೀಡಿದರು.
ಲಾಡ್ಜ್ಪೂಲ್ ಚಂದ್ ಸಂಸ್ಥೆಯ ವತಿಯಿಂದ ಆರ್. ಜಿ. ಎಂ. ಬ್ರದರ್ ಮುಫಾಜಲ್ ಫೆಡರಲ್, ಆರ್. ಕೆ. ಶಾØ ಮೊದಲಾದವರು ಉಪಸ್ಥಿತರಿದ್ದರು. ಸತ್ಯಸಾಯಿ ಸಂಸ್ಥೆಯ ಪರವಾಗಿ ಸಂಚಾಲಕಿ ಸುಚಲತಾ ಪೂಜಾರಿ, ಗೋಪಾಲ್ ಕೃಷ್ಣ, ಸತೀಶ್ ಕುಮಾರ್, ಮೀನಾಕ್ಷೀ, ಬಿಲ್ಲವರ ಅಸೋಸಿಯೇಶನ್ ಗೋರೆಗಾಂವ್ ಸ್ಥಳೀಯ ಸಮಿತಿಯ ಕೋಶಾಧಿಕಾರಿ ಮೋಹನ್ ಅಮೀನ್, ಜತೆ ಕಾರ್ಯದರ್ಶಿ ಸತೀಶ್ ಕೋಟ್ಯಾನ್, ಜನಾರ್ಧನ್ ಕೋಟ್ಯಾನ್, ಪದ್ಮಾವತಿ ಪೂಜಾರಿ, ಗಿರಿಜಾ ಪೂಜಾರಿ, ಆನಂದ ಐಲ್, ಪುಷ್ಪಾ ಅಮೀನ್, ಪುಷ್ಪಾ ಸುವರ್ಣ, ಬಬಿತಾ ಕೋಟ್ಯಾನ್, ಮಧುಕರ ಕೋಟ್ಯಾನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಶಿಧರ ಬಂಗೇರ ವಂದಿಸಿದರು. ನೂರಾರು ತುಳು-ಕನ್ನಡಿಗ ಮಹಿಳೆಯರು ಉಪಸ್ಥಿತರಿದ್ದರು.