Advertisement

ಗೋರಖ್‌ಪುರ ದುರಂತ: ವರದಿ ಕೇಳಿದ ಕೋರ್ಟ್‌

08:15 AM Aug 19, 2017 | Karthik A |

ಲಕ್ನೋ: ಗೋರಖ್‌ಪುರದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 70ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾದ ಕುರಿತು ಪ್ರತಿ ಅಫಿದವಿತ್‌ ಸಲ್ಲಿಸುವಂತೆ ಅಲಹಾಬಾದ್‌ ಹೈಕೋರ್ಟ್‌ ಶುಕ್ರವಾರ ಉತ್ತರ ಪ್ರದೇಶ ಸರಕಾರ ಮತ್ತು ವೈದ್ಯಕೀಯ ಶಿಕ್ಷಣ ಮಹಾ ನಿರ್ದೇಶಕರಿಗೆ ನಿರ್ದೇಶಿಸಿದೆ. ಅಫಿದವಿತ್‌ ಸಲ್ಲಿಸಲು 6 ವಾರಗಳ ಗಡುವನ್ನೂ ವಿಧಿಸಿದೆ.

Advertisement

ಮಕ್ಕಳ ಸಾವಿನ ಕುರಿತು ಸಾಮಾಜಿಕ ಕಾರ್ಯಕರ್ತೆ ನೂತನ್‌ ಠಾಕೂರ್‌ ಎಂಬವ‌ರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆ ನೀಡಿದೆ. ಸರಕಾರದ ಇದುವರೆಗಿನ ನಡವಳಿಕೆಗಳು ಸತ್ಯಾಂಶವನ್ನು ಮುಚ್ಚಿಡಲು ಮತ್ತು ತಪ್ಪಿತಸ್ಥರಿಗೆ ರಕ್ಷಣೆ ನೀಡಲು ನಡೆಸುತ್ತಿರುವ ಪ್ರಯತ್ನ ಎಂಬಂತೆ ಕಾಣುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಮುಂದಿನ ವಿಚಾರಣೆ ಅ.9ಕ್ಕೆ ನಡೆಯಲಿದೆ. ಏತನ್ಮಧ್ಯೆ, ಶನಿವಾರ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರಕ್ಕೆ ಭೇಟಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next