Advertisement
ಜೂನ್ ಎರಡರಂದು ಬಿಎಐ ಮೂವರು ಬ್ಯಾಡ್ಮಿಂಟನ್ ಆಟ ಗಾರರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಆದರೆ ಎಚ್.ಎಸ್. ಪ್ರಣಯ್ ಅವರನ್ನು ಕಡೆಗಣಿಸಿತ್ತು. ಇದರ ವಿರುದ್ಧ ಪ್ರಣಯ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಮರುದಿನವೇ ಗೋಪಿಚಂದ್ ಸ್ವಂತ ಸಾಮರ್ಥ್ಯದ ಬಲದಿಂದ ಅರ್ಜುನ ಪ್ರಶಸ್ತಿಗೆ ಪ್ರಣಯ್ ಹೆಸರನ್ನು ಶಿಫಾರಸು ಮಾಡಿದ್ದರು ಎನ್ನಲಾಗಿದೆ.
“ಪಿ. ಗೋಪಿಚಂದ್ ಅವರು ಪ್ರಣಯ್ ಹೆಸರನ್ನು ಶಿಫಾರಸು ಮಾಡಿರುವುದು ನಿಜ. ಆದರೆ ಅವರು ಖೇಲ್‌ರತ್ನ ಗೆದ್ದ ಸಾಧಕನಾಗಿ ಈ ಶಿಫಾರಸು ಮಾಡಿದ್ದಾರೆಯೇ ಹೊರತು ಭಾರತದ ಪ್ರಧಾನ ಬ್ಯಾಡ್ಮಿಂಟನ್ ಕೋಚ್ ಆಗಿ ಅಲ್ಲ’ ಎಂಬುದಾಗಿ ಬಿಎಐ ಮೂಲವೊಂದು ಪಿಟಿಐಗೆ ತಿಳಿಸಿದೆ. ಇದಕ್ಕೆ ಪ್ರತಿ ಕ್ರಿಯಿಸಲು ಪಿ. ಗೋಪಿಚಂದ್ ನಿರಾಕರಿಸಿದ್ದಾರೆ.