Advertisement

ಪುಸ್ತಕ ಬರೆದು ಸುದ್ದಿಯಾಗಿದ್ದಾರೆ ಗೋಪಿಚಂದ್‌

08:55 PM Jan 17, 2020 | Lakshmi GovindaRaj |

ಭಾರತ ಕಂಡ ಶ್ರೇಷ್ಠ ಬ್ಯಾಡ್ಮಿಂಟನ್‌ ಆಟಗಾರರಲ್ಲಿ ಪಿ.ಗೋಪಿಚಂದ್‌ ಕೂಡ ಒಬ್ಬರು. ಅವರು ಆಟಗಾರರಾಗಿ ಮಿಂಚಿದ್ದಕ್ಕಿಂತ ತರಬೇತುದಾರರಾಗಿ ಮೆರೆದಿದ್ದೇ ಹೆಚ್ಚು. ಅವರ ಗರಡಿಯಲ್ಲಿ ಸೈನಾ ನೆಹ್ವಾಲ್‌, ಪಿ.ವಿ.ಸಿಂಧು, ಕೆ.ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಸಾಯಿ ಪ್ರಣೀತ್‌ರಂತಹ ಖ್ಯಾತ ಆಟಗಾರರು ಸಿದ್ಧಗೊಂಡಿದ್ದಾರೆ. ವಿಶ್ವಮಟ್ಟದಲ್ಲಿ ಭಾರತದ ಹೆಸರು ಬೆಳಗಿದ್ದೇ ಈ ತಾರೆಯರಿಂದ. ಭಾರತೀಯರು ಬ್ಯಾಡ್ಮಿಂಟನ್‌ನಲ್ಲಿ ಏನೆಲ್ಲ ಸಾಧಿಸಬಹುದೋ, ಅಷ್ಟೆಲ್ಲ ಸಾಧಿಸಿದ್ದಾರೆ. ಅದರ ಹಿಂದಿರುವುದು ಹೈದರಾಬಾದ್‌ನಲ್ಲಿರುವ ಗೋಪಿಚಂದ್‌ ಅಕಾಡೆಮಿ.

Advertisement

ಅಂತಹ ಗೋಪಿಚಂದ್‌, ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಗೆಲ್ಲುವ ಮೂಲಕ ಪ್ರಸಿದ್ಧಿಗೆ ಬಂದರು. ಅದಾದ ನಂತರ ಅವರೇನು ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ. ಮುಂದೆ ತರಬೇತುದಾರರಾಗಿ ಅಸಾಮಾನ್ಯ ಸಾಧನೆಯನ್ನೇ ಮಾಡಿದರು. ಅಂತಹ ಗೋಪಿಚಂದ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಆಟವಲ್ಲ, ಆಟದ ಮೇಲಿನ ನೋಟಗಳ ಮೂಲಕ. ಅವರೊಂದು ಪುಸ್ತಕ ಬರೆದಿದ್ದಾರೆ. ಡ್ರೀಮ್ಸ್‌ ಆಫ್ ಎ ಬಿಲಿಯನ್‌: ಇಂಡಿಯಾ ಆ್ಯಂಡ್‌ ದಿ ಒಲಿಂಪಿಕ್‌ ಗೇಮ್ಸ್‌ ಎಂಬ ಹೆಸರಿನ ಪುಸ್ತಕದಲ್ಲಿ ತಮ್ಮ ಅಂತರಂಗವನ್ನು ತೆರೆದಿಟ್ಟಿದ್ದಾರೆ.

ಸೈನಾ ನೆಹ್ವಾಲ್‌ ತಮ್ಮೊಂದಿಗೆ ತಗಾದೆ ಮಾಡಿಕೊಂಡು, ಅಕಾಡೆಮಿಯನ್ನೇ ತೊರೆದ ಬಗ್ಗೆ ಬಹಳ ಬೇಸರದಿಂದ ಬರೆದುಕೊಂಡಿದ್ದಾರೆ. ಆ ಹುಡುಗಿ ಹಾಗೆ ಮಾಡಿದ್ದು, ಬಹಳ ನೋವು ತಂದಿತ್ತು. ಹೋಗಬೇಡವೆಂದು ಅವಳಿಗೆ ಅಂಗಲಾಚಿ ಬೇಡಿಕೊಂಡಿದ್ದೆ. ಆ ವೇಳೆ ಆಕೆ ಪ್ರಕಾಶ್‌ ಪಡುಕೋಣೆ ಅಕಾಡೆಮಿ ಸೇರಿಕೊಂಡಳು. ಆದರೆ ಪಡುಕೋಣೆ ಸೈನಾಗೆ ಬುದ್ಧಿ ಹೇಳಬಹುದಿತ್ತು. ಅದರ ಬದಲಿಗೆ, ನನ್ನ ಅಕಾಡೆಮಿ ತೊರೆಯುವುದಕ್ಕೆ ಉತ್ತೇಜನ ನೀಡಿದರು. ಹಾಗೇಕೆ ಮಾಡಿದರು? ನನಗಿನ್ನೂ ಗೊತ್ತಾಗಿಲ್ಲ ಎಂದು ಮನಬಿಚ್ಚಿ ಹೇಳಿಕೊಂಡಿದ್ದಾರೆ. ಹೀಗೆ ಅವರು ಮತ್ತೂಮ್ಮೆ ಚಾಲ್ತಿಗೆ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next