Advertisement

ಗೋಪಾಲಪುರ ವಾರ್ಡ್‌:ಶುಚಿತ್ವ ಕೆಡಿಸುತ್ತಿರುವ ಕಿಡಿಗೇಡಿಗಳು

11:00 PM May 27, 2019 | sudhir |

ಉಡುಪಿ: ನಗರಸಭಾ ವ್ಯಾಪ್ತಿಯ ಗೋಪಾಲಪುರ ವಾರ್ಡಿ ಕೆಲ ಕಿಡಿಗೇಡಿಗಳು ಹಲವಾರು ತಿಂಗಳಿಂದ ಗೋಪಾಲಪುರ ನಾಲ್ಕನೇ ಮುಖ್ಯರಸ್ತೆಯ ಪಕ್ಕದಲ್ಲಿಯೇ (ನೀರು ಹರಿಯುವ ತೋಡಿನಲ್ಲಿ) ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ.

Advertisement

ಪ್ಲಾಸ್ಟಿಕ್‌ ಬಾಟಲಿ, ಒಡೆದ ಟ್ಯೂಬ್‌ ಲೈಟ್‌ಗಳ ಚೂರುಗಳು ರಸ್ತೆಯಲ್ಲಿ ಹರಡಿಕೊಂಡಿವೆ.

ಕೊಳೆತ ಮಾಂಸ, ತರಕಾರಿ ಮುಂತಾದ ಆಹಾರ ಪದಾರ್ಥಗಳು, ಪಾದರಕ್ಷೆ, ಮದ್ಯದ ಬಾಟಲಿ, ಬ್ಲೇಡ್‌, ಔಷಧಿ ಬಾಟಲಿ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಇಲ್ಲಿ ಎಸೆಯಲಾಗುತ್ತಿದೆ.

ಬೀದಿ ನಾಯಿಗಳ ಕಾಟ
ಮುಂಜಾನೆ ವಾಯುವಿಹಾರದ ನೆಪದಲ್ಲಿ ಹಾಗೂ ರಾತ್ರಿ ಸ್ಥಳೀಯರ ಕಣ್ಣು ತಪ್ಪಿಸಿ ತ್ಯಾಜ್ಯಗಳನ್ನು ಸುರಿದು ಹೋಗುತ್ತಾರೆ. ಈ ತ್ಯಾಜ್ಯಗಳ ರಾಶಿಯಿಂದ ಆಹಾರ ಹುಡುಕಲು ಬರುವ ಬೀದಿನಾಯಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೇ ರಸ್ತೆಯ ಮೂಲಕ ಪ್ರತಿನಿತ್ಯ ನೂರಾರು ವಾಹನಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸಂಚರಿಸುವಾಗ ಬೀದಿ ನಾಯಿಗಳು ಬೆನ್ನಟ್ಟುವ ಘಟನೆಗಳೂ ಸಂಭವಿಸಿವೆ.

ನಗರಸಭೆಯು ಗೋಪಾಲಪುರ ಸೇರಿದಂತೆ ಬಹುತೇಕ ವಾರ್ಡುಗಳಲ್ಲಿ ವ್ಯವಸ್ಥಿತವಾಗಿ ಕಸದ ನಿರ್ವಹಣೆ ಮಾಡುತ್ತಿದ್ದರೂ ಕೆಲವರು
ಇಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ. ಈ ಬಗ್ಗೆ ನಗರಸಭೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಕ್ರಿಮಿನಲ್‌ ಮೊಕದ್ದಮೆ?
ಕ್ಲೀನ್‌ ಉಡುಪಿ ಪ್ರಾಜೆಕ್ಟ್ ವತಿಯಿಂದ ಈ ಸ್ಥಳದಲ್ಲಿ ತ್ಯಾಜ್ಯ ಎಸೆಯುವ ವ್ಯಕ್ತಿಗಳನ್ನು ಕಾರ್ಯಾಚರಣೆ ಮೂಲಕ ಪತ್ತೆಹಚ್ಚಿ ಅವರ ಭಾವಚಿತ್ರವನ್ನು ಉಡುಪಿಯ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿ ಅಂತವರ ವಿರುದ್ಧ ಸಾರ್ವಜನಿಕ ಸ್ಥಳಗಳ ಶುಚಿತ್ವಕ್ಕೆ ಧಕ್ಕೆ ತರುವ ವಿಷಯಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ಮೊಕದ್ದಮೆ ಹಾಕಲಾಗುವುದು ಎಂದು ಕ್ಲೀನ್‌ ಉಡುಪಿ ಪ್ರಾಜೆಕ್ಟ್ ತಿಳಿಸಿದೆ.

ದೂರು ನೀಡಲು ನಿರ್ಧಾರ
ನಗರಸಭೆಯವರು ಸರಿಯಾದ ಸಮಯಕ್ಕೆ ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಕೆಲವೊಂದು ಕಿಡಿಗೇಡಿಗಳು ರಾತ್ರಿ ಹೊತ್ತು ಇಲ್ಲಿ ಕಸ ತಂದು ಎಸೆಯುತ್ತಿದ್ದಾರೆ. ಈ ಬಗ್ಗೆ ಗಮನಕ್ಕೆ ಬಂದಿದ್ದು, ನಗರಸಭೆಗೆ ದೂರು ನೀಡಲು ನಿರ್ಧರಿಸಿದ್ದೇವೆ.
– ಮಂಜುಳಾ ವಿ.ನಾಯಕ್‌, ಗೋಪಾಲಪುರ ವಾರ್ಡ್‌ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next