Advertisement

ಗೋಪಾಲ ಪೂಜಾರಿ ಅವರಿಗೆ ಸಾಧನಾ ಸಮ್ಮಾನ

11:58 AM Mar 31, 2017 | Team Udayavani |

ಮರವಂತೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಮರವಂತೆಯ ಸೇವಾ ಸಾಂಸ್ಕೃತಿಕ ವೇದಿಕೆ ಸಾಧನಾ ವತಿಯಿಂದ  ಅಭಿನಂದಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಗುರುದಾಸ್‌ ವಿ. ಶ್ಯಾನುಭಾಗ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಸಾಧನಾ ಸ್ಥಾಪಕಾಧ್ಯಕ್ಷ ಎಸ್‌. ಜನಾರ್ದನ ಅಭಿನಂದನೆಯ ನುಡಿಗಳನ್ನಾಡಿ ತೀರ ಸಾಮಾನ್ಯ ಹಿನ್ನೆಲೆಯಿಂದ ಬಂದ ಪೂಜಾರಿ ಅವರು ರಾಜಕೀಯ ಕ್ಷೇತ್ರದಲ್ಲಿ ಮೂಡಿಸಿದ ಛಾಪು ಅಸದೃಶವಾದುದು. ನಾಲ್ಕು ಅವಧಿಧಿಗೆ ಬೈಂದೂರು ಕ್ಷೇತ್ರ ಶಾಸಕರಾಗಿ ನಡೆಸಿದ ಅಭಿವೃದ್ಧಿ ಕಾರ್ಯಗಳಿಗೆ ಸಾಟಿ ಇಲ್ಲ. ಶಿಕ್ಷಣ, ಸಂಪರ್ಕ, ವಿದ್ಯುದೀಕರಣ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಅವರಿಂದ ಅನನ್ಯ ಕೊಡುಗೆ ಸಂದಿದೆ. ಬೈಂದೂರು ತಾಲೂಕು ರಚನೆ ಅವರ ಸಾಧನೆಯ ಕಿರೀಟಕ್ಕೆ ಸೇರಿದ ಅನಘÂì ಗರಿ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಅವ ರಿಂದ ಬೈಂದೂರು ಕ್ಷೇತ್ರ ಇನ್ನಷ್ಟು ನಿರೀಕ್ಷೆ ಗಳನ್ನು ಇರಿಸಿಕೊಂಡಿದೆ ಎಂದರು.

ಗೋಪಾಲ ಪೂಜಾರಿ ಮಾತನಾಡಿ ತಮ್ಮ ಬಾಲ್ಯದ ಬದುಕು ಮತ್ತು ಸಾಧನೆಯ ಮೆಟ್ಟಿಲುಗಳನ್ನು ಏರಿದ ಬಗೆಯ ಮೆಲುಕು ಹಾಕಿದರು. ಮರವಂತೆಯ ಮೀನುಗಾರಿಕಾ ಹೊರಬಂದರನ್ನು ಇನ್ನಷ್ಟು ಉಪಯುಕ್ತಗೊಳಿಸಲು, ಮರವಂತೆಯನ್ನು ಪ್ರವಾಸಿ ಕೇಂದ್ರವಾಗಿ ರೂಪಿಸಲು ಮತ್ತು ಮರವಂತೆಯ ಅಗತ್ಯಗಳನ್ನು ಈಡೇರಿಸಲು ಶ್ರಮಿಸುವ ಭರವಸೆ ನೀಡಿದರು. ಜಿ. ಪಂ. ಮಾಜಿ ಅಧ್ಯಕ್ಷ ಎಸ್‌. ರಾಜು ಪೂಜಾರಿ, ಗ್ರಾ.ಪಂ. ಅಧ್ಯಕ್ಷೆ ಅನಿತಾ ಆರ್‌.ಕೆ. ಪೂಜಾರಿ ಅವರಿಗೆ ಶುಭ ಕೋರಿದರು.

ಇದೇ ಸಂದರ್ಭ ಅಲ್ಲಿನ ದುರ್ಗಾ ಯಕ್ಷೇಶ್ವರೀ ದೇವಸ್ಥಾನಕ್ಕೆ ಭೇಟಿಕೊಟ್ಟ ಗೋಪಾಲ ಪೂಜಾರಿ ಅವರಿಗೆ ಧರ್ಮ ದರ್ಶಿ ಎಂ. ಜಗದೀಶ ಅವಭೃಥ್‌ ಪ್ರಸಾದ ನೀಡಿ, ಶಾಲು ಹೊದೆಸಿ ಗೌರವಿಸಿದರು. ಸಾಧನಾ ಸದಸ್ಯ ದೇವಿದಾಸ್‌ ಶ್ಯಾನುಭಾಗ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next