Advertisement
1971ರ ಬಾಂಗ್ಲಾ ವಿಮೋಚನೆ ವೇಳೆ ಭಾರತೀಯ ಸೇನೆಯ ರಣತಂತ್ರಗಳಿಗೆ ದಿಕ್ಸೂಚಿ ಆಗಿದ್ದ ಜನರಲ್ ಜಿ.ಜಿ. ಬೇವೂರ ನಮ್ಮದೇ ಬಾಗಲಕೋಟೆ ಜಿಲ್ಲೆಯವರು. ಕೂಡಲಸಂಗಮಕ್ಕೆ ಹೋಗುವ ದಾರಿಯಲ್ಲಿರುವ ಬೇವೂರ ಎಂಬ ಊರಿನ ಧೀರ ಗೋಪಾಲ ಗುರುನಾಥರನ್ನು ಭಾರತೀಯ ಸೇನೆ ಈಗಲೂ ಅಷ್ಟೇ ಗೌರವದಿಂದ ಸ್ಮರಿಸುತ್ತಿದೆ.
ಮುಂಚೂಣಿಯಲ್ಲಿ ನಿಂತು ಹೋರಾಡುವ ಜ| ಬೇವೂರರ ದಿಟ್ಟತನ ಪರಿಗಣಿಸಿ 1969ರಲ್ಲಿ ದಕ್ಷಿಣ ವಲಯದ ಜನರಲ್ ಆಫೀಸರ್ ಕಮಾಂಡಿಂಗ್ ಹುದ್ದೆ ಸಿಕ್ಕಿತ್ತು. ಎರಡೇ ವರ್ಷ ಗಳಲ್ಲಿ ಬಾಂಗ್ಲಾ ವಿಮೋಚನೆಗಾಗಿ ಭಾರತ-ಪಾಕ್ ಕದನ ದಿಢೀರ್ ಎದುರಾಯಿತು. ಎಲ್ಲೂ ಯಡವಟ್ಟಾಗದಂತೆ ಅತ್ಯಂತ ವ್ಯವಸ್ಥಿತ ದಾಳಿಗೆ ಯೋಜನೆ ರೂಪಿಸಿದ ಸೇನೆಯ ಕೋರ್ ಕಮಿಟಿಯಲ್ಲಿ ಬೇವೂರ ಪ್ರಮುಖರಾಗಿದ್ದರು. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಬಾಂಗ್ಲಾದತ್ತ ಸೇನೆಯನ್ನು ಮುನ್ನುಗ್ಗಿ ಸಿದ್ದ ಸಂದರ್ಭ ಇತ್ತ ಮಿಕ್ಕ ಅಲ್ಪ ಪಡೆ ಇಟ್ಟುಕೊಂಡೇ ಪಾಕ್‌ನೊಂದಿಗೆ ಹೊಂದಿ ಕೊಂಡಿರುವ ಪಶ್ಚಿಮ ಗಡಿಯನ್ನು ರಕ್ಷಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಆಗ ವಾಯವ್ಯ ದಿಂದ ಅರಬ್ಬೀ ಸಮುದ್ರದವರೆಗಿನ ಪಶ್ಚಿಮ ಭಾಗ ಕಾಪಾಡುವ ಹೊಣೆ ಜ| ಬೇವೂರ ಅವ ರದ್ದಾಗಿತ್ತು. ರಾಜಸ್ಥಾನದ ಬಿಕಾನೇರ್ ನಲ್ಲಿದ್ದ ತಮ್ಮ ಸದರ್ನ್ ಕಮಾಂಡ್ ತುಕಡಿ ಯನ್ನು 4
ವಲಯಗಳಿಗೆ ವಿಂಗಡಿಸಿ ಸೈನಿಕ ಗೋಡೆ ಯನ್ನೇ ನಿರ್ಮಿಸಿಬಿಟ್ಟರು. ನುಗ್ಗಿ ಬಂದ ಪಾಕ್ ಸೈನಿಕರನ್ನು ನಮ್ಮ ಶಸ್ತ್ರಸಜ್ಜಿತ ಸೈನಿಕರು ಹೆಡೆಮುರಿ ಕಟ್ಟಿ ಹಿಮ್ಮೆಟ್ಟಿಸಿದ್ದರು. ನಮ್ಮ ಸೈನ್ಯವೇ ಪಾಕ್‌ನ ಭೂಭಾಗಗಳನ್ನು ಸ್ವಾಧೀನ ಪಡಿಸಿಕೊಂಡಿತ್ತೇ ಹೊರತು ಪಾಕ್‌ಗೆ ಒಂದಿಂಚೂ ಜಾಗ ಕಬಳಿ ಸಲು ಅವಕಾಶ ನೀಡಿರಲಿಲ್ಲ.
Related Articles
1971ರ ಯುದ್ಧದಲ್ಲಿ ಕೆಚ್ಚೆದೆಯ ಶೌರ್ಯ ಪ್ರದರ್ಶಿ ಸಿದ್ದಕ್ಕಾಗಿ ಜನರಲ್ ಜಿ.ಜಿ. ಬೇವೂರ ಅವರಿಗೆ ಮರುವರ್ಷ ಪದ್ಮಭೂಷಣ ಪ್ರದಾನ ಮಾಡ ಲಾಗಿತ್ತು.
Advertisement
ಯುದ್ಧ ಮುಗಿಯುತ್ತಿದ್ದಂತೆ ಫೀ|ಮಾ| ಮಾಣೆಕ್ ಶಾ ಅವರು ಪಶ್ಚಿಮ ಗಡಿಯನ್ನು ರಕ್ಷಿಸಿದ ಮಿತ್ರ ಜನರಲ್ ಬೇವೂರರನ್ನು ಬಿಗಿದಪ್ಪಿಕೊಂಡು ಅಭಿನಂದಿಸಿದ್ದರು. ಈ ಐತಿಹಾಸಿಕ ಭಾವಚಿತ್ರ ಡೆಹ್ರಾಡೂನ್‌ನ ಮಿಲಿಟರಿ ಅಕಾಡೆಮಿ ಗೋಡೆಯಲ್ಲಿ ಈಗಲೂ ತೂಗಿಬಿದ್ದಿದೆ.
ಇದನ್ನೂ ಓದಿ:ನಿಮ್ಮಲ್ಲಿ ಐಫೋನ್,ಮ್ಯಾಕ್‌ಬುಕ್,ಆ್ಯಪಲ್ ವಾಚ್‌ಗಳಿದ್ದರೆ ಬೇಗನೆ ಅಪ್‌ಡೇಟ್ ಮಾಡಿಕೊಳ್ಳಿ
ಸೇನೆಯ ಮುಂದಾಳತ್ವ1973ರಲ್ಲಿ ಸೇನೆಯ ಮಹಾ ದಂಡನಾಯಕ ಹುದ್ದೆಯಿಂದ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ನಿವೃತ್ತರಾಗುತ್ತಿ ದ್ದಂತೆಯೇ ಆ ಪದವಿಗೆ ಜನರಲ್ ಬೇವೂರ ನೇಮಕರಾದರು. 2 ವರ್ಷ 135 ದಿನಗಳ ವರೆಗೆ ಈ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿ ನಿವೃತ್ತರಾದರು. ತವರಿನ ಮೇಲೆ ಪ್ರೀತಿ
ಗೋಪಾಲ ಗುರುನಾಥ ಗುರುತಿಸಿ ಕೊಂಡಿದ್ದೇ ತವರೂರು “ಬೇವೂರ’ ಹೆಸರಿನ ಮೂಲಕ. ಸ್ವಗ್ರಾಮದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯು ಆರಂಭಿಸಿದ ಪ್ರೌಢ ಶಾಲೆಗೆ 1966ರಲ್ಲೇ 7,500 ರೂ. ದೇಣಿಗೆ ನೀಡಿ ತಮ್ಮೂರಿನಮೇಲೆ ಅಭಿಮಾನ ಮೆರೆದರು. ಈಗ ಈ ಊರಿನಲ್ಲಿ ಬೇವೂರರ ನೆನಪಿನಲ್ಲಿ ಸ್ಮಾರಕ ಮಾತ್ರವೇ ಇದೆ. ಜ| ಬೇವೂರ 1989ರ ಅ. 24ರಂದು 73ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನ ಹೊಂದಿದರು. ಪುಣೆಯ ಕೋರೆಗಾಂವ್ ಪಾರ್ಕ್‌ನ ಒಂದು ರಸ್ತೆಗೆ ಅವರ ಹೆಸರನ್ನಿಡಲಾಗಿದೆ. ಡಾರ್ಜಿಲಿಂಗ್‌ನಲ್ಲೂ ಬೇವೂರ ಸ್ಮಾರಕ ಭವನ ನಿರ್ಮಿಸಲಾಗಿದೆ. ಆದರೆ ಕರುನಾಡಿನಲ್ಲಿ ತವರೂರಿನ ಹೊರತಾಗಿ ಬೇರೆಡೆ ವಿಶೇಷ ಕಾರ್ಯಗಳೇನೂ ನಡೆದಿಲ್ಲವೆನ್ನುವುದು ವಿಷಾದದ ಸಂಗತಿ. ಬುದ್ಧ ನಗುವಾಗ ಜತೆಗಿದ್ದರು!
ಅದು 1974ರ ಮೇ 18. ರಾಜಸ್ಥಾನದ ಪೋಖ್ರಾನ್ ನಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಿ, ವಿಶ್ವಕ್ಕೆ ದಿಟ್ಟ ಸಂದೇಶ ರವಾನಿಸಿದ ಸಂದರ್ಭ. ಅಮೆರಿಕ ಗುಪ್ತಚರ ಸಂಸ್ಥೆ ಸಹಿತ ಜಗತ್ತಿನ ಯಾರೊಬ್ಬರಿಗೂ ಸುಳಿವು ಸಿಗದಂತೆ ಪರೀಕ್ಷೆ ನಡೆಸಲು ಪ್ರಧಾನಿ ಇಂದಿರಾ ಗಾಂಧಿ ಬಯಸಿದ್ದರು. ಈ ಗೌಪ್ಯತೆ ಕಾಪಾಡಿ, ಪರಮಾಣು ಪರೀಕ್ಷೆಗೆ ಪ್ರತ್ಯಕ್ಷ ಸಾಕ್ಷಿಯಾದವರು ಅಂದು ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬೇವೂರ. ಇಂದಿರಾ ಗಾಂಧಿ, ಪರಮಾಣು ತಜ್ಞ – ಕನ್ನಡಿಗ ರಾಜಾರಾಮಣ್ಣ ಸೇರಿ 66 ಎಂಜಿನಿಯರ್ ಹಾಗೂ ಬೇವೂರ ಅವರಿಗೆ ಮಾತ್ರವೇ ಈ ಪರೀಕ್ಷೆಯ ಸಂಗತಿ ತಿಳಿದಿತ್ತು. ಸಾಧನೆ ಹಾದಿ
– 1937ರಲ್ಲಿ ಬಲೂಚಿ ರೆಜಿಮೆಂಟ್ ಕಮಿಷನರ್ ಹುದ್ದೆ
– 1945ರಲ್ಲಿ ಸೇನಾಪಡೆಯ ತರಬೇತುದಾರ
– 1948ರಲ್ಲಿ ಕಾಶ್ಮೀರ ಆಪರೇಶನ್‌ನಲ್ಲಿ ಪ್ರಮುಖ ಪಾತ್ರ
– ಎನ್‌ಸಿಸಿಯನ್ನು ದೇಶದೆಲ್ಲೆಡೆ ವಿಸ್ತರಿಸಿದ ಖ್ಯಾತಿ
– 1952ರಲ್ಲಿ ಬ್ರಿಗೇಡಿಯರ್ ಹುದ್ದೆ
– 1953ರಲ್ಲಿ ಮಿಲಿಟರಿ ಪರ್ಸನಲ್ ಸರ್ವೀಸ್‌ನ ನಿರ್ದೇಶಕ
– 1956ರಲ್ಲಿ ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ
– ಪರಮವಿಶಿಷ್ಟ ಸೇನಾ ಪದಕ ಗೌರವ
– 1959ರಲ್ಲಿ ಅತಿ ಕಿರಿಯ ವಯಸ್ಸಲ್ಲೇ ಮೇಜರ್ ಜನರಲ್ ಹುದ್ದೆ
– 1964ರಲ್ಲಿ ಲೆಫ್ಟಿನೆಂಟ್ ಜನರಲ್
– 1973ರಲ್ಲಿ ಜನರಲ್ ಆಗಿ ನೇಮಕ -ಶ್ರೀ ಶೈಲ ಬಿರಾದಾರ