Advertisement
ಕರುನಾಡಿನ ವಿವಿಧೆಡೆ ಮನೆ- ಮಂದಿರಗಳಲ್ಲಿ ನವರಾತ್ರಿಯ ಸಂದರ್ಭದಲ್ಲಿ ಗೊಂಬೆಯನ್ನು ಕೂರಿಸುವ ಪರಿಪಾಠವಿದೆ.ಚಿಕ್ಕಮಗಳೂರಿನಲ್ಲಿ ಪೀಠೊಪಕರಣಗಳ ಅಂಗಡಿಯೊಂದರಲ್ಲಿ ವೈಶಿಷ್ಟ್ಯ ಪೂರ್ಣವಾಗಿ “ರಾಯಲ್ ಓಕ್ ಗೊಂಬೆ ವೈಭವ’ ಗಮನ ಸೆಳೆಯುತ್ತಿದೆ. ಮಹಾಲಯ ಅಮವಾಸ್ಯೆಯಿಂದ ರಾಯಲ್ ಓಕ್‌ನ್ನುಗೊಂಬೆಗಳು ಆವರಿಸಿದ್ದು ವಿಜಯ ದಶಮಿಯವರೆಗೆ ಪ್ರದರ್ಶನವಿದೆ. ನಗುವ ಬುದ್ಧ, ಸುಂದರ ಹೂವಿನ ಗಿಡ, ಬಣ್ಣ- ಬಣ್ಣದಿಂದ ಮಿನುಗುವ ದೀಪಗಳು ಕೈಬೀಸಿ ಕರೆಯುತ್ತಿವೆ.
Related Articles
Advertisement
ಮತ್ಸ್ಯಾವತಾರ, ಕೂರ್ಮಾವತಾರ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ.. ಹೀಗೆ ಮಹಾವಿಷ್ಣುವಿನ ದಶಾವತಾರದ ಗೊಂಬೆಗಳಿವೆ. ವ್ಯಾಸ, ಅಗಸ್ತ್ಯ, ವಸಿಷ್ಠ, ವಿಶ್ವಾಮಿತ್ರರನ್ನೊಳಗೊಂಡ ಸಪ್ತಋಷಿಗಳೂ ಹಾಗೂ ಶಂಕರಾಚಾರ್ಯರು, ರಾಮಾನುಜಾ ಚಾರ್ಯರು, ಮಧ್ವಾಚಾರ್ಯವನ್ನು ಒಳಗೊಂಡ “ಯತಿ ಪರಂಪರೆ’, ಸಂಗೀತ ವಿದ್ವಾಂಸ ಶಾಮಾಶಾಸ್ತ್ರಿಗಳು, ಹರಿದಾಸರು- ಪುರಂದರ- ಕನಕದಾಸರನ್ನೊಳಗೊಂಡ “ದಾಸ ಪರಂಪರೆ’ಯ ಗೊಂಬೆ ಇರಿಸಲಾಗಿದೆ.
ಶ್ರೀಮಂತ ಸಂಸ್ಕೃತಿಯ ಪ್ರತೀಕವಾದ ಗೊಂಬೆ ಹಬ್ಬವನ್ನು ಜೀವಂತವಾಗಿಡುವ ಸಾರ್ಥಕ ಪ್ರಯತ್ನವಿದು. ಸವಿತಾ- ಪಿ.ಆರ್.ಅಮರ್ ನಾಥ್ ದಂಪತಿಯ ಕ್ರಿಯಾಶೀಲತೆಯಿಂದ “ರಾಯಲ್ ಓಕ್ ದಸರಾ ಗೊಂಬೆ ವೈಭವ ಖುಷಿ ನೀಡುತ್ತಿದೆ ಎಂದು ಪ್ರೇಕ್ಷಕ ಎಂ.ಎನ್. ರಾಕೇಶ ಶ್ಲಾಘಿಸಿದರು.