Advertisement

Actress; ‘ಗೂಗ್ಲಿ’ ನಟಿಗೆ ಕಂಕಣ ಭಾಗ್ಯ: ಪುಲ್ಕಿತ್‌ ಕೈ ಹಿಡಿದ ಕೃತಿ ಕರಬಂಧ

12:31 AM Mar 17, 2024 | Team Udayavani |

ಹೊಸದಿಲ್ಲಿ: ಕನ್ನಡದ ಚಿರು, ಗೂಗ್ಲಿ, ಮಾಸ್ತಿಗುಡಿ ಸೇರಿ ಹಲವು ಸಿನೆಮಾಗಳಲ್ಲಿ ಅಭಿನಯಿಸಿದ್ದ ನಟಿ ಕೃತಿ ಕರಬಂಧ ಬಾಲಿವುಡ್‌ ನಟ ಪುಲ್ಕಿತ್‌ ಸಾಮ್ರಾಟ್‌ ಅವರನ್ನು ಗುರುಗ್ರಾಮದಲ್ಲಿ ವಿವಾಹ­ವಾದರು. ಪಾಗಲ್‌ಪಂತಿ ಸಿನೆಮಾ ಸೆಟ್‌ನಲ್ಲಿ ಇವ ರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಬಳಿಕ ಇವರಿಬ್ಬರು “ವೀರೇಯ್‌ ಕಿ ವೆಡ್ಡಿಂಗ್‌’ ಮತ್ತು “ತೈಶ್‌’ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದರು.

Advertisement

ಇದಲ್ಲದೆ ಶಿವರಾಜ್‌ಕುಮಾರ್‌ ಜತೆ “ಬೆಳ್ಳಿ’, ಉಪೇಂದ್ರ ಜತೆ “ಸೂಪರ್‌ ರಂಗ’ ಚಿತ್ರಗಳಲ್ಲೂ ನಟಿಸಿದ್ದರು. ತೆಲುಗು ಚಿತ್ರರಂಗದ ಮೂಲಕ ಬೆಳ್ಳಿ ಪರದೆಗೆ ಪದಾರ್ಪಣೆ ಮಾಡಿದ್ದರು. ಅಂದಹಾಗೆ ಪುಲ್ಕಿತ್‌ ಸಾಮ್ರಾಟ್‌ಗೆ ಇದು 2ನೇ ಮದುವೆ.

Advertisement

Udayavani is now on Telegram. Click here to join our channel and stay updated with the latest news.

Next