Advertisement
ಇನ್ನು ಡೆವಲಪರ್ ಆ್ಯಪ್‌ಗಳ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ ಪ್ಲೇ ಸ್ಟೋರ್ ಮೂಲಕ ಡಿಜಿಟಲ್ ಕಂಟೆಂಟ್ ಅನ್ನು ಮಾರಾಟ ಮಾಡುವ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಬಿಲ್ಲಿಂಗ್ ವ್ಯವಸ್ಥೆಯನ್ನು ಬಳಸಬೇಕಾಗುತ್ತದೆ.
ಬಿಲ್ಲಿಂಗ್ ಸಿಸ್ಟಮ್ ಅಪ್ಲಿಕೇಶನ್ ಮೂಲಕ ಮಾಡುವ ಪಾವತಿಗಳಿಗೆ ಗೂಗಲ್ ಶೇ. 30ರಷ್ಟು ಶುಲ್ಕ ವಿಧಿಸುತ್ತದೆ. ಡೆವಲಪರ್‌ಗಳು ತನ್ನ ವೆಬ್‌ಸೈಟ್ ಮೂಲಕ ಪಾವತಿಮಾಡುವ ಆಯ್ಕೆಯನ್ನು ತೆಗೆದುಕೊಂಡರೆ ಅದಕ್ಕೆ ಪ್ಲೇ ಬಿಲ್ಲಿಂಗ್ ಅಗತ್ಯವಿರುವುದಿಲ್ಲ. ಹೀಗಾಗಿ ಶೇ. 97ರಷ್ಟು ಡೆವಲಪರ್‌ಗಳು ಈ ನೀತಿಯನ್ನು ಅನುಸರಿಸುತ್ತಾರೆ. ಹೊಸ ಮಾರ್ಗಸೂಚಿಗಳನ್ನು ಅನುಸರಿಸದ ಕೆಲವು ಡೆವಲಪರ್‌ಗಳಿಗೆ ಸ್ವಲ್ಪ ಸಮಯ ನೀಡಲಾಗುವುದು ಎಂದು ವರದಿ ಹೇಳಿದೆ.
Related Articles
ಅಪ್ಲಿಕೇಶನ್‌ನಲ್ಲಿನ ಖರೀದಿಗಳ ಮೂಲಕ ಯಪಲ್ ಮತ್ತು ಗೂಗಲ್ ಎರಡೂ ಕಂಪನಿಗಳು ಶತಕೋಟಿ ಡಾಲರ್‌ಗಳನ್ನು ಗಳಿಸುತ್ತವೆ. ಆದರೆ ಆಪಲ್‌ನ ನೀತಿ ಗೂಗಲ್ ನೀತಿಗಿಂತ ಹೆಚ್ಚು ಕಟ್ಟುನಿಟ್ಟಾಗಿದೆ. ಬಾಹ್ಯ ವೆಬ್‌ಸೈಟ್‌ಗಳ ಮೂಲಕ ಮೊಬೈಲ್ ಅಪ್ಲಿಕೇಶನ್ ಚಂದಾದಾರಿಕೆಗಳನ್ನು ಮಾರಾಟ ಮಾಡಲು ಡೆವಲಪರ್‌ಗಳಿಗೆ ಆ್ಯಪಲ್ ಅನುಮತಿಸುವುದಿಲ್ಲ.
Advertisement
ಪ್ಲೇ ಬಿಲ್ಲಿಂಗ್ ನೀತಿಯನ್ನು ಹಲವು ಸಮಯಗಳ ಬಳಿಕ ನಾವು ನವೀಕರಿಸುತ್ತಿದ್ದೇವೆ. ಇತ್ತೀಚಿನ ಘಟನೆಗಳು ನಮಗೆ ಕೆಲವು ಪಾಠಗಳನ್ನು ಕಲಿಸಿದೆ ಎಂದು ಗೂಗಲ್ ಅಪ್ಲೀಕೇಶನ್ ವಿಭಾಗದ ಡೈರೆಕ್ಟರ್ ಪೂರ್ಣಿಮಾ ಕೋಚಿಕರ್ ಹೇಳಿದ್ದಾರೆ. ಗೂಗಲ್ ಪ್ಲೇ ಮೂಲಕ ತಮ್ಮ ಡಿಜಿಟಲ್ ವಿಷಯವನ್ನು ಮಾರಾಟ ಮಾಡುವ ಪ್ರತಿಯೊಬ್ಬ ಡೆವಲಪರ್ ಪ್ಲೇ ಬಿಲ್ಲಿಂಗ್ ಅನ್ನು ಬಳಸಬೇಕಾಗುತ್ತದೆ. “ಗೂಗಲ್ ಇತ್ತೀಚೆಗೆ Paytm ಅನ್ನು ಕೆಲವು ಗಂಟೆಗಳ ಕಾಲ ನಿರ್ಬಂಧಿಸುವ ಮೂಲಕ ವಿವಾದಕ್ಕೆ ಸಿಲುಕಿದನ್ನು ಇಲ್ಲಿ ಸ್ಮರಿಸಬಹುದು.