Advertisement

ಚಾಟ್‌ಜಿಪಿಟಿ ಪ್ರತಿಸ್ಪರ್ಧಿಯಾಗಿ ಗೂಗಲ್‌ನಿಂದ “ಬಾರ್ಡ್‌’

10:36 PM Feb 07, 2023 | Team Udayavani |

ನ್ಯೂಯಾರ್ಕ್‌: ಮೈಕ್ರೋಸಾಫ್ಟ್ ನ ಚಾಟ್‌ಜಿಪಿಟಿ ಗೆ ಪ್ರತಿಸ್ಪರ್ಧಿಯಾಗಿ ಟೆಕ್‌ ದೈತ್ಯ ಕಂಪನಿ ಗೂಗಲ್‌ ಕೃತಕ ಬುದ್ಧಿಮತ್ತೆಯಿಂದ ಕಾರ್ಯನಿರ್ವಹಿಸುವ “ಬಾರ್ಡ್‌’ ಅನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ.

Advertisement

ಈ ಕುರಿತು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಗೂಗಲ್‌ ಸಿಇಒ ಸುಂದರ್‌ ಪಿಚೈ, “ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಕೃತಕ ಬುದ್ಧಿಮತ್ತೆ(ಎಐ) ಆಧಾರದಲ್ಲಿ ಕಾರ್ಯನಿರ್ವಹಿಸುವ ಚಾಟ್‌ಬಾಟ್‌ “ಬಾರ್ಡ್‌’ ಲಭ್ಯವಾಗುವ ಮೊದಲು ಕುಶಲ ತಂತ್ರಜ್ಞರ ಗುಂಪಿನಿಂದ ಪರಿಶೀಲನೆ ಮತ್ತು ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದೆ,’ ಎಂದು ತಿಳಿಸಿದ್ದಾರೆ.

“ಬಾರ್ಡ್‌ ಸೃಜನಶೀಲತೆಗೆ ಒಂದು ಔಟ್‌ಲೆಟ್‌ ಆಗಿರಬಹುದು ಮತ್ತು ಕುತೂಹಲಕ್ಕಾಗಿ ಲಾಂಚ್‌ ಪ್ಯಾಡ್‌ ಆಗಿರಬಹುದು. 9 ವರ್ಷದ ಮಗುವಿಗೆ ನಾಸಾದ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ಸೇರಿದಂತೆ ಹೊಸ ಆವಿಷ್ಕಾರಗಳನ್ನು ವಿವರಿಸಲು ಇದರಿಂದ ಸಾಧ್ಯವಾಗುತ್ತದೆ. ಅಲ್ಲದೇ ಫುಟ್ ಬಾಲ್ ಆಟದ ಅತ್ಯುತ್ತಮ ಸ್ಟ್ರೈಕರ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ. ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಇದು ಸಹಕಾರಿಯಾಗಲಿದೆ,’ ಎಂದು ಸುಂದರ್‌ ಪಿಚೈ ಬರೆದುಕೊಂಡಿದ್ದಾರೆ.

2022ರ ನವೆಂಬರ್‌ನಲ್ಲಿ ಬಿಡುಗಡೆಯಾದ ಚಾಟ್‌ಜಿಪಿಟಿ(ಚಾಟ್‌ ಜನರೇಟಿವ್‌ ಪ್ರಿ-ಟ್ರೇನ್ಡ ಟ್ರಾನ್ಸ್‌ಫಾರ್ಮರ್‌) ನಾವು ನೀಡಿದ ಇನ್‌ಪುಟ್‌ ಆಧಾರದಲ್ಲಿ ಭಾಷಣಗಳು, ಹಾಡುಗಳು, ಮಾರ್ಕೆಟಿಂಗ್‌ ಬರಹ, ಸುದ್ದಿ ಲೇಖನಗಳು ಮತ್ತು ವಿದ್ಯಾರ್ಥಿ ಪ್ರಬಂಧಗಳನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿದೆ. ಆರಂಭದಲ್ಲಿ ಉಚಿತವಾಗಿತ್ತು. ಇದೀಗ ಅಮೆರಿಕದಲ್ಲಿ ಇದರ ಸೇವೆಗೆ 1,600 ರೂ. ಪಾವತಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next