Advertisement

Google year in search: ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಏನೆಲ್ಲಾ ಹುಡುಕಿದ್ದಾರೆ ನೋಡಿ

06:18 PM Dec 11, 2023 | Team Udayavani |

ಮುಂಬಯಿ:  2023 ರಲ್ಲಿ ಗೂಗಲ್‌ ನಲ್ಲಿ ಅತೀ ಹೆಚ್ಚು ಹುಡುಕಿದ ಪಟ್ಟಿ ಹೊರಬಿದ್ದಿದೆ. ಭಾರತದ ಕೆಲ ಸಿನಿಮಾಗಳು ಹಾಗೂ ಸೆಲೆಬ್ರಿಟಿಗಳ ಹೆಸರುಗಳ ಜೊತೆಗೆ ಅನೇಕ ವಿಚಾರಗಳು ಪಟ್ಟಿಯಲ್ಲಿವೆ.

Advertisement

ಭಾರತೀಯರು ಈ ವರ್ಷ ಗೂಗಲ್‌ ನಲ್ಲಿ ಅತೀ ಹೆಚ್ಚು ಏನನ್ನು ಹುಡುಕಿದ್ದಾರೆ ಹಾಗೂ ಯಾವ ಪ್ರಶ್ನೆಗಳನ್ನು ಕೇಳಿದ್ದಾರೆ. ಯಾವ ಸಿನಿಮಾಗಳನ್ನು ಹುಡುಕಿದ್ದಾರೆ ಹೀಗೆ ನಾನಾ ಕ್ಷೇತ್ರದ ಬಗ್ಗೆ ಭಾರತೀಯರು ಗೂಗಲ್‌ ನಲ್ಲಿ ಹುಡುಕಾಟ ನಡೆಸಿದ್ದಾರೆ ಎನ್ನುವುದರ ಪಟ್ಟಿ ಹೊರಬಿದ್ದಿದೆ.

‘ಇಯರ್ ಇನ್ ಸರ್ಚ್ 2023ʼ ರಲ್ಲಿ ಭಾರತೀಯರು ಗೂಗಲ್‌ ನಲ್ಲಿ ಹುಡುಕಾಟ ನಡೆಸಿದ ಪ್ರಮುಖ ಟಾಪ್ 10 ಈವೆಂಟ್‌ಗಳು ಇಲ್ಲಿವೆ:

  1. ಚಂದ್ರಯಾನ -3
  2. ಕರ್ನಾಟಕ ಚುನಾವಣೆ ಫಲಿತಾಂಶ
  3. ಇಸ್ರೇಲ್‌ ಸುದ್ದಿ
  4. ಸತೀಶ್‌ ಕೌಶಿಕ್
  5. ಬಜೆಟ್‌ 2023
  6. ಟರ್ಕಿ ಭೂಕಂಪ
  7. ಅತೀಕ್‌ ಅಹ್ಮದ್
  8. ಮ್ಯಾಥ್ಯೂ ಪೆರ್ರಿ
  9. ಮಣಿಪುರ ಸುದ್ದಿ
  10. ಒಡಿಶಾ ರೈಲು ದುರಂತ

ಇಸ್ರೇಲ್‌ – ಹಮಾಸ್‌ ನಡುವಿನ ಸಂಘರ್ಘ ಈ ದಿನದವರೆಗೂ ನಡೆಯುತ್ತಿದೆ. ಬಾಲಿವುಡ್‌ ನಟ ಸತೀಶ್‌ ಕೌಶಿಕ್‌ ನಿಧನ ಹಾಗೂ ಹಾಲಿವುಡ್‌ ʼಫ್ರೆಂಡ್ಸ್‌ʼ ನಟನ ನಿಧನದ ಬಗ್ಗೆ ಭಾರತೀಯರು ಹೆಚ್ಚು ಹುಡುಕಾಡಿದ್ದರು.

ಗೂಗಲ್ ‘ಇಯರ್ ಇನ್ ಸರ್ಚ್ 2023’ನಲ್ಲಿ ಗೂಗಲ್‌ ನಲ್ಲಿ ಭಾರತೀಯರು ಈ ಕೆಳಗಿನ ವಿಚಾರಗಳ ಬಗ್ಗೆ ಹೆಚ್ಚು ಪ್ರಶ್ನೆ ಮಾಡಿ ಉತ್ತರವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

Advertisement

1.G20 ಎಂದರೇನು

2.UCC ಎಂದರೇನು

3.ChatGPT ಎಂದರೇನು

4.ಹಮಾಸ್ ಎಂದರೇನು

5. 28 ಸೆಪ್ಟೆಂಬರ್ 2023 ರಂದು ಏನಾಗಿದೆ

6.ಚಂದ್ರಯಾನ ಎಂದರೇನು ‌

7. ಇನ್ಸ್ಟ್ರಾಗ್ರಾಮ್‌ ನಲ್ಲಿ ನಲ್ಲಿ ಥ್ರೆಡ್ಸ್ ಎಂದರೇನು

8. ಕ್ರಿಕೆಟ್‌ ನಲ್ಲಿ ಟೈಮ್ಡ್‌ ಔಟ್‌ ಎಂದರೇನು

9. ಐಪಿಎಲ್‌ ನಲ್ಲಿಇಂಪ್ಯಾಕ್ಟ್‌ ಪ್ಲೇಯರ್‌ ಎಂದರೇನು

10.ಸೆಂಗೋಲ್ ಎಂದರೇನು

ಇದಲ್ಲದೆ ಗೂಗಲ್‌ ಇಯರ್‌ ಇನ್‌ ಸರ್ಚ್‌ ನಲ್ಲಿ ಹೇಗೆ ಎನ್ನುವುದರ ಬಗ್ಗೆ ಹಾಗೂ ಮನೆಮದ್ದು ಮುಂತಾದ ವಿಚಾರಗಳ ಬಗ್ಗೆಯೂ ಭಾರತೀಯರು ಈ ವರ್ಷ ಹೆಚ್ಚಾಗಿ ಹುಡುಕಾಡಿದ್ದಾರೆ. ಅದರ ಪ್ರಮುಖ ಪಟ್ಟಿ ಇಲ್ಲಿದೆ:

  1. ಮನೆಮದ್ದುಗಳೊಂದಿಗೆ ಚರ್ಮ ಮತ್ತು ಕೂದಲಿಗೆ ಸೂರ್ಯನ ಹಾನಿಯನ್ನು ತಡೆಯುವುದು ಹೇಗೆ
  2. YouTube ನಲ್ಲಿ ಶೀಘ್ರವಾಗಿ 5 ಸಾವಿರ ಫಾಲೋವರ್ಸ್‌ ಗಳನ್ನು ಪಡೆಯುವುದು ಹೇಗೆ
  3. ಕಬಡ್ಡಿಯಲ್ಲಿ ಉತ್ತಮ ಸಾಧನೆ ಮಾಡುವುದು ಹೇಗೆ
  4. ಕಾರಿನ ಮೈಲೇಜ್ ಅನ್ನು ಹೇಗೆ ಸುಧಾರಿಸುವುದು
  5. ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗುವುದು ಹೇಗೆ
  6. ರಕ್ಷಾಬಂಧನದಂದು ನನ್ನ ಸಹೋದರಿಗೆ ಹೇಗೆ ಸರ್ಪೈಸ್‌ ನೀಡುವುದು
  7. ಶುದ್ಧ ಕಾಂಜೀವರಂ ರೇಷ್ಮೆ ಸೀರೆಯನ್ನು ಹೇಗೆ ಗುರುತಿಸುವುದು
  8. ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಅನ್ನು ಹೇಗೆ ಪರಿಶೀಲಿಸುವುದು
  9. WhatsApp ಚಾನಲ್ ಅನ್ನು ಹೇಗೆ ರಚಿಸುವುದು
  10. Instagram ನಲ್ಲಿ ನೀಲಿ ಟಿಕ್ ಅನ್ನು ಹೇಗೆ ಪಡೆಯುವುದು

ಇನ್ನು ಈ ವರ್ಷ ಭಾರತೀಯರಯ ಗೂಗಲ್‌ ನಲ್ಲಿ ಕ್ರೀಡೆ ಬಗ್ಗೆ ಅತೀ ಹೆಚ್ಚು ಹುಡುಕಿದ ಪಟ್ಟಿ ಇಲ್ಲಿದೆ.. 

  1. ಇಂಡಿಯನ್ ಪ್ರೀಮಿಯರ್ ಲೀಗ್
  2. ಕ್ರಿಕೆಟ್ ವಿಶ್ವಕಪ್
  3. ಏಷ್ಯಾ ಕಪ್
  4. ಮಹಿಳಾ ಪ್ರೀಮಿಯರ್ ಲೀಗ್
  5. ಏಷ್ಯನ್ ಗೇಮ್ಸ್
  6. ಇಂಡಿಯನ್ ಸೂಪರ್ ಲೀಗ್
  7. ಪಾಕಿಸ್ಥಾನ ಸೂಪರ್ ಲೀಗ್
  8. ದಿ ಆಶಸ್‌
  9. ಮಹಿಳಾ ಕ್ರಿಕೆಟ್ ವಿಶ್ವಕಪ್
  10. SA20

ಭಾರತೀಯರು ಗೂಗಲ್‌ ನಲ್ಲಿ ಅತೀ ಹೆಚ್ಚು ಬಾರಿ ಹುಡುಕಿದ ಸಿನಿಮಾಗಳ ಪಟ್ಟಿ.. 

  1. ಜವಾನ್‌
  2. ಗದರ್‌ -2
  3. ಓಪನ್ ಹೈಮರ್
  4. ಆದಿಪುರುಷ್‌
  5. ಪಠಾಣ್‌
  6. ದಿ ಕೇರಳ ಸ್ಟೋರಿ
  7. ಜೈಲರ್‌
  8. ಲಿಯೋ
  9. ಟೈಗರ್‌ -3
  10. ವಾರಿಸು

ಭಾರತೀಯರು ಗೂಗಲ್‌ ನಲ್ಲಿ ಅತೀ ಹೆಚ್ಚು ಹುಡುಕಿದ ವ್ಯಕ್ತಿಗಳು:

1.ಕಿಯಾರಾ ಅಡ್ವಾಣಿ

2.ಶುಭಮನ್ ಗಿಲ್

3. ರಚಿನ್ ರವೀಂದ್ರ

4. ಮೊಹಮ್ಮದ್ ಶಮಿ

5. ಎಲ್ವಿಶ್ ಯಾದವ್

6. ಸಿದ್ಧಾರ್ಥ್ ಮಲ್ಹೋತ್ರಾ

7. ಗ್ಲೆನ್ ಮ್ಯಾಕ್ಸ್‌ವೆಲ್

8. ಡೇವಿಡ್ ಬೆಕ್ಹ್ಯಾಮ್

9. ಸೂರ್ಯಕುಮಾರ್ ಯಾದವ್

10. ಟ್ರಾವಿಸ್ ಹೆಡ್

 

Advertisement

Udayavani is now on Telegram. Click here to join our channel and stay updated with the latest news.

Next