Advertisement

23 ನೇ ಬರ್ತ್ ಡೇ ಸಂಭ್ರಮ: ಗೂಗಲ್ ಬೆಳೆದು ಬಂದ ಇತಿಹಾಸ ರೋಚಕ

02:06 PM Sep 27, 2021 | Team Udayavani |

 ಕ್ಯಾಲಿಫೋರ್ನಿಯಾ : ಜಗತ್ತಿನ ಅತೀ ಜನಪ್ರಿಯ ಜಾಲತಾಣ ಸಂಸ್ಥೆ ಗೂಗಲ್  ಸಪ್ಟೆಂಬರ್ 27 ರಂದು 23 ನೇ ಜನ್ಮದಿನವನ್ನು ಆಚರಿಸುತ್ತಿದೆ.ವಿವಿಧ ಮಾಹಿತಿಗಳಿಗಾಗಿ ಜನರು ಅತೀ ಹೆಚ್ಚು ಹುಡುಕಾಡುವ ಸಂಸ್ಥೆ ಗೂಗಲ್ ಬೆಳೆದು ಬಂದ ಇತಿಹಾಸ ರೋಚಕ.

Advertisement

ಗೂಗಲ್ ಸಂಸ್ಥಾಪಕರಾದ ಸರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರು 1995 ರಲ್ಲಿ ಸ್ಟ್ಯಾಂಡ್ ಫೋರ್ಡ್ ವಿವಿಯಲ್ಲಿ ಜೊತೆಯಾಗಿ ಸಂಸ್ಥೆಯನ್ನು ಹುಟ್ಟು ಹಾಕಲು ಮುಂದಾಗಿದ್ದರು. 1998 ರಲ್ಲಿ ಗೂಗಲ್ ಸಂಸ್ಥೆಯನ್ನು ಅಧಿಕೃತವಾಗಿ ಹುಟ್ಟುಹಾಕಲಾಗಿತ್ತು.

ಬಾಡಿಗೆ ಗ್ಯಾರೇಜ್ ಒಂದರಲ್ಲಿ ಹುಟ್ಟಿಕೊಂಡ ಗೂಗಲ್ ನ ಮೂಲ ಹೆಸರು ಬ್ಯಾಕ್ ರಬ್.
ಬಹುಜನರಿಗೆ ದೈನಂದಿನ ಅಗತ್ಯವಾಗಿರುವ ಗೂಗಲ್ ನಲ್ಲಿ ಇಂದು ಜಗತ್ತಿನ ಬಿಲಿಯನ್ ಗಟ್ಟಲೆ ಜನರು 150 ಕ್ಕೂ ಹೆಚ್ಚು ಭಾಷೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಹೊಸ ಹೊಸ ಬದಲಾವಣೆಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಾ ಬಂದಿರುವ ಗೂಗಲ್ ಸಧ್ಯ ಕೇವಲ ಮುಖಚರ್ಯೆಯಿಂದಲೇ ನಿಯಂತ್ರಿಸುವ ಸ್ಮಾರ್ಟ್ ಫೋನ್ ಫೀಚರ್ ಅಭಿವೃದ್ಧಿ ಪಡಿಸಿದೆ.

ಭಾರತೀಯರಾದ ಸುಂದರ್ ಪಿಚೈ ಅವರು ಗೂಗಲ್ ನ ಸಿಇ ಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2004 ರಲ್ಲಿ ಅವರು ಕಂಪನಿಯನ್ನು ಸೇರಿದ್ದರು ಎನ್ನುವುದು ವಿಶೇಷ.

Advertisement

ಆಯಾ ದೇಶಗಳಿಗನುಗುಣವಾಗಿ ಸಾಧಕರ ಜನ್ಮದಿನದಂದು ವಿಶೇಷ ಡ್ಯೂಡಲ್ ಮೂಲಕ ಗೌರವ ಸಲ್ಲಿಸುವುದನ್ನು ಗೂಗಲ್ ಸಂಪ್ರದಾಯವನ್ನಾಗಿಸಿಕೊಂಡಿದೆ.

ಆರಂಭಿಕ ಹಂತದಲ್ಲಿ 30 ಜನ ಉದ್ಯೋಗಿಗಳಿದ್ದ ಗೂಗಲ್ ಸಂಸ್ಥೆಯಲ್ಲಿ 2020ರ ಅಂಕಿ ಅಂಶಗಳ ಪ್ರಕಾರ 1,35,301 ಮಂದಿ ಪೂರ್ಣಕಾಲಿಕ ಉದ್ಯೋಗಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next