ನವ ದೆಹಲಿ : ಗೂಗಲ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಬದಲಾವಣೆಯನ್ನು ನೀಡಿದೆ. ಅದನ್ನು ಗೂಗಲ್ ಕಾಲ ಕಾಲಕ್ಕೆ ನಿರಂತರ ಪ್ರಕ್ರಿಯೆಯಂತೆ ಮುಂದುವರಿಸಿದೆ. ಈಗ ತನ್ನ ಬಳಕೆದಾರರಿಗೆ ಡಾರ್ಕ್ ಮೋಡ್ ವೈಶಿಷ್ಟ್ಯವನ್ನು(Feature) ಹೊಸದಾಗಿ ತರುತ್ತಿದೆ. ಸರ್ಚಿಂಗ್ ಪ್ರಕ್ರಿಯೆಯಲ್ಲಿ ಇದು ಬಳಕೆದಾರರಿಗೆ ಸಂಪೂರ್ಣ ಹೊಸ ಅನುಭವವನ್ನು ನೀಡಲಿದೆ ಎನ್ನುತ್ತದೆ ಗೂಗಲ್.
ಓದಿ : ಕುಸಿದ ಟೀಂ ಇಂಡಿಯಾಗೆ ನೆರವಾದ ರೋಹಿತ್: ಚೆಪಾಕ್ ನಲ್ಲಿ ಹಿಟ್ ಮ್ಯಾನ್ ಭರ್ಜರಿ ಶತಕ
ತನ್ನ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಈಗಾಗಲೇ ಡಾರ್ಕ್ ಮೋಡ್ ನೀಡಿದೆ. ಈಗ ಡೆಸ್ಕ್ ಟಾಪ್ ಬಳಕೆದಾರರಿಗೂ ಕೂಡ ಹೊಸದಾಗಿ ಪರಿಚಯಿಸುತ್ತಿರುವ ಡಾರ್ಕ್ ಮೋಡ್ ವೈಶಿಷ್ಟ್ಯನ್ನು ನೀಡುತ್ತಿದೆ. ಕಳೆದ ವರ್ಷ ಡೆಸ್ಕ್ ಟಾಪ್ ಡಾರ್ಕ್ ಮೋಡ್ ಹೊಸ ವೈಶಿಷ್ಟ್ಯವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿತ್ತು. ಈಗ ಮತ್ತೆ ಡಾರ್ಕ್ ಮೋಡ್ ಗಾಗಿ ಕೆಲಸ ಮಾಡುತ್ತಿದೆ ಗೂಗಲ್ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ದಿ ವರ್ಜ್ ವರದಿ ಮಾಡಿದೆ.
ಡೆಸ್ಕ್ ಟಾಪ್ ಗೆ ಈ ವೈಶಿಷ್ಟ್ಯವನ್ನು ಗೂಗಲ್ ಪ್ರಾರಂಭಿಸಿದಾಗ ಬಳಕೆದಾರರು ಗೂಗಲ್ ಸರ್ಚ್ ನ್ನು ಲೈಟ್, ಡಾರ್ಕ್ ಹಾಗೂ ಸಿಸ್ಟಮ್ ಡೀಫಾಲ್ಟ್ ಹೊಂದಿಸುವ ಆಯ್ಕೆಯನ್ನು ಪಡೆಯುತ್ತಾರೆ. ಡಾರ್ಕ್ ಮೋಡ್ ಅಂದರೆ, ಸಂಪೂರ್ಣವಾಗಿ ಡಾರ್ಕ್ ಆಗಿ ಕಾಣಿಸುವುದಿಲ್ಲ ಪಠ್ಯ ಅಥವಾ ಟೆಕ್ಸ್ಟ್ ಬಿಳಿ ಬಣ್ಣದಲ್ಲಿರಲಿದ್ದು, ಅದರ ಲಿಂಕ್ ಗಳು ಮೊದಲಿನಂತೆಯೇ ನೀಲಿ ಬಣ್ಣದಲ್ಲಿಯೇ ಇರಲಿವೆ.
ಈ ಹಿಂದೆ ಗೂಗಲ್, ಡಾರ್ಕ್ ಮೋಡ್ ನ್ನು ಜಿಮೇಲ್ ಹಾಗೂ ಗೂಗಲ್ ಕ್ಯಾಲೆಂಡರ್ ಗೆ ಅಳವಡಿಸಿತ್ತು.
ಓದಿ : ಕಾಶ್ಮೀರದ ಬಗೆಗಿನ ನಿಮ್ಮ ಭರವಸೆಗಳು ಹಾಗೆಯೇ ಇವೆ : ಕೇಂದ್ರದ ವಿರುದ್ಧ ಕಿಡಿ ಕಾರಿದ ಚೌಧರಿ