Advertisement

ಗೂಗಲ್‌ ಜತೆಗೆ ಚಾಟ್‌ಬಾಟ್‌ ಲಭ್ಯ?

10:14 PM Feb 16, 2023 | Team Udayavani |

ನವದೆಹಲಿ : ಮೈಕ್ರೋಸಾಫ್ಟ್ ಒಡೆತನದ ಚಾಟ್‌ ಜಿಪಿಟಿ ಎದುರು, ಗೂಗಲ್‌ ಒಡೆತನದ ಚಾಟ್‌ಬೋಟ್‌  ಅನ್ನು  ಮುನ್ನಲೆಗೆ ತರಲು, ಅದರ ಬಗ್ಗೆಯೇ 2 ರಿಂದ 4 ಗಂಟೆಗಳ ಸಮಯ ನೀಡುವಂತೆ ಗೂಗಲ್‌ ತನ್ನ ಸಿಬ್ಬಂದಿಗೆ ಸೂಚಿಸಿದೆ.

Advertisement

ಈ ಬಗ್ಗೆ ಖುದ್ದು ಗೂಗಲ್‌ ಸಿಇಒ  ಸುಂದರ್‌ ಪಿಚೈ ಉಸ್ತುವಾರಿ ವಹಿಸಿದ್ದು, ಶೀಘ್ರವೇ ಚಾಟ್‌ಬೋಟ್‌ ಬಾರ್ಡ್‌ ಅನ್ನು ಸರ್ಚ್‌ ಇಂಜಿನ್‌ ಗೂಗಲ್‌ ಜತೆಗೆ ಸಮನ್ವಯಗೊಳಿಸಲು ಯೋಜಿಸಿದ್ದಾರೆ. ಇದಕ್ಕಾಗಿ ಅದರ ತ್ವರಿತ ಪರೀಕ್ಷೆ ನಡೆಯುತ್ತಿದೆ.

ಉತ್ತಮ ಫ‌ಲಿತಾಂಶಗಳ ಬಳಿಕ ಸಾರ್ವಜನಿಕ ಬಳಕೆಗೆ ಮುಕ್ತವಾಗುತ್ತದೆ. ಅದಕ್ಕಾಗಿ ಸಿಬ್ಬಂದಿ ನಿತ್ಯ ಇದರ ಅಭಿವೃದ್ಧಿಗಾಗಿ 2 ರಿಂದ 4 ಗಂಟೆ ಸಮಯ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಫೆ.6ರಂದು ಗೂಗಲ್‌ ಚಾಟ್‌ಬಾಟ್‌ ಬಿಡುಗಡೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next